ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಅನುಭವ ಮಂಟಪದ ಬಸವ ಭವನದಲ್ಲಿ ಹಮ್ಮಿಕೊಂಡಿರುವ ಶಾಂತಿ ಮತ್ತು ಸೌಹಾರ್ದತೆ ಕೂಟದ ಸಾನ್ನಿಧ್ಯ ವಹಿಸಿ ಮಾತನಾಡಿ, ಇಸ್ಲಾಂ, ಬೌದ್ಧ, ಜೈನ, ಹಿಂದೂ, ಸಿಖ್, ಲಿಂಗಾಯತ ಎಲ್ಲಾ ಧರ್ಮಗಳು ಶಾಂತಿಯನ್ನೇ ಭೋಧಿಸುತ್ತವೆ. ಸಮಾಜದಲ್ಲಿ ಸಮಾನತೆ ಸಹೋದರತ್ವ ಮೂಢಿಸುವಲ್ಲಿ 770 ಜನರನ್ನು ಒಂದೇ ಕಡೆ ಕೂಡಿಸಿ ಅನುಭವ ಮಂಟಪ ಮುಖಾಂತರ ಸಮಾಜದ ಏಳಿಗೆಗಾಗಿ ಬಸವಣ್ಣನವರು ಶ್ರಮಿಸಿದ್ದಾರೆ ಎಂದರು.
ಯಾವ ಧರ್ಮದಲ್ಲಿಯೂ ಅಶಾಂತಿ ನಿರ್ಮಾಣಕ್ಕೆ ಆಸ್ಪದವಿಲ್ಲ. ಹೀಗಾಗಿ ನಾವೇಲ್ಲರು ಶಾಂತಿ ಸಂದೇಶ ಬಿತ್ತಿ ಬೆಳೆಸಬೇಕಾಗಿದೆ. ಈ ದಿಸೆಯಲ್ಲಿ ಜಮಾತೆ ಇಸ್ಲಾಂ ಹಿಂದ ಸಂಘಟನೆಯು ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸಂತೋಷ ತಂದಿದೆ ಎಂದರು.ಜಮಾತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷರಾದ ಮಹ್ಮದ ಸಲೀಮ ಎಂಜಿನಿಯರ್ ಮಾತನಾಡಿ, ಭಾರತ ದೇಶವು ಶಾಂತಿಗೆ ಮಹತ್ವ ನೀಡುತ್ತಿದೆ. ಅದರ ಜೊತೆಯಲ್ಲಿ ನೈತಿಕ ಜೀವನಕ್ಕೆ ನಾವೇಲ್ಲರು ಆದ್ಯತೆ ನಿಡಬೇಕು. ಬಸವಾದಿ ಶರಣರು ನೈತಿಕ ತಳಹದಿ ಮೇಲೆ ಸಮಾಜವನ್ನು ಕಟ್ಟಿದ್ದು ಅವರ ಕ್ರಾಂತಿ ಜನ ಮಾನಸದಲ್ಲಿ ಇಂದಿಗೂ ಉಳಿದಿದೆ. ಈ ದಿಸೆಯಲ್ಲಿ ಎಲ್ಲರು ಕೂಡಿ ದೇಶದಲ್ಲಿ ಶಾಂತಿ, ಸೌಹಾರ್ದತೆಯ ವಾತಾವರಣ ನಿರ್ಮಿಸಲು ಶ್ರಮಿಸೋಣ ಎಂದರು.
ಬಸವಕಲ್ಯಾಣ ಬಸವ ಮಹಾಮನೆ ಜಗದ್ಗುರು ಸಿದ್ದರಾಮೇಶ್ವರ ಸ್ವಾಮೀಜಿ, ಅನುಭವ ಮಂಟಪ ಸಂಚಾಲಕರಾದ ಪೂಜ್ಯ ಶಿವಾನಂದ ಸ್ವಾಮೀಜಿ, ಮುಜಾಹೀದ ಪಾಶಾ ಖುರೇಷಿ, ಹುಜುರ ಪಾಷಾ, ಮೀರ್ಜಾ ಅನ್ವರಬೇಗ, ಅಕ್ರಂ ಜನಾಬ ಮುಂತಾದವರು ಉಪಸ್ಥಿತರಿದ್ದರು.