‘ಸಂಸ್ಕಾರ, ಸಂಸಾರ, ಸಲ್ಲಾಪ’ ವಿಚಾರಗೋಷ್ಠಿ । 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಹೆತ್ತೂರಿನಲ್ಲಿ ನಡೆಯುತ್ತಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮ್ಮೇಳನದ ‘ಸಂಸ್ಕಾರ, ಸಂಸಾರ, ಸಲ್ಲಾಪ’ ಎಂಬ ವಿಚಾರಗೋಷ್ಠಿಯಲ್ಲಿ ಆಶಯನುಡಿಗಳನ್ನಾಡಿ, ಸಂಸಾರ ನಿಭಾಯಿಸುವುದು ಒಂದು ದೇಶವನ್ನು ಮುನ್ನಡೆಸಿದಷ್ಟೇ ಕಷ್ಟ. ಸುಖ ಸಂಸಾರದ ಬಗ್ಗೆ ಕನ್ನಡ ಕವಿಗಳಾದ ಮುದ್ದಣ್ಣ, ಕೆ.ಎಸ್. ನರಸಿಂಹಸ್ವಾಮಿ, ಬೇಂದ್ರೆ ಸೇರಿದಂತೆ ಹಲವರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಸಂಸಾರಕ್ಕೆ ಬಡತನ ಅಡ್ಡಿಯಾಗಬಾರದು. ನಿಜವಾದ ಸುಖ ಸಿಗುವುದು ಬಡತನದಲ್ಲಿ ಎಂದು ಅಪ್ಪ್ರಾಯಪಟ್ಟರು.
ವಿಜ್ಞಾನ ಬುದ್ದಿ, ತತ್ವಜ್ಞಾನಿ ಮನಸ್ಸು, ಕವಿ ಹೃದಯ ಈ ಮೂರು ವಿಚಾರಗಳನ್ನು ಮರೆತ ವ್ಯಕ್ತಿ ಸಂಸಾರದಲ್ಲಿ ಕಷ್ಟಪಡಬೇಕಾಗುತ್ತದೆ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.ಸಂಘರ್ಷ ಹಾಗೂ ತಲ್ಲಣದ ನಡುವೆ ಬರುವ ಮಾತುಗಳೇ ಸಂಸ್ಕಾರ. ವೃದ್ಧರಲ್ಲಿ ಸೃಷ್ಟಿಯಾಗುವ ತಲ್ಲಣವನ್ನು ಸಂಘರ್ಷಕ್ಕೆ ಕೊಂಡೊಯ್ಯದೆ ಚೆನ್ನಾಗಿ ನೋಡಿಕೊಳ್ಳುವುದು ಉತ್ತಮ ಸಂಸಾರಿ ಎಂದರು.
ಶಿಷ್ಟ ಸಾಹಿತ್ಯದಲ್ಲಿ ರೈತಪರ ಚಿಂತನೆಗಳು ಎಂಬ ವಿಚಾರದಲ್ಲಿ ಮಾತನಾಡಿದ ಡಾ.ಬೆಟ್ಟೆಗೌಡ, ಅನಾದಿಕಾಲದಿಂದ ರೈತರು ಭವಣೆಯಿಂದಲೇ ಬದುಕಿದ್ದಾರೆ. ಆದರೆ, ಅಂದಿನ ಕವಿಗಳು ತಮ್ಮ ಕಾವ್ಯ ಸೃಷ್ಟಿ ಭರದಲ್ಲಿ ರೈತರ ಭವಣೆ ಬಗ್ಗೆ ಗಮನಹರಿಸಲು ಸಾದ್ಯವಾಗಿಲ್ಲ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸಾಕಷ್ಟು ವಿಮರ್ಶಿಸಿದರೆ ಆಧುನೀಕ ಪೂರ್ವ ಇಬ್ಬರು ಕವಿಗಳು ಮಾತ್ರ ರೈತರ ಭವಣೆಯ ಬಗ್ಗೆ ಬರೆದಿರುವುದು ಗೋಚರಿಸುತ್ತದೆ. ಮೊಲದ ಬಾರಿಗೆ ರೈತರ ಬಗ್ಗೆ ಮಾತನಾಡಿರುವುದು ೧೨ ನೇ ಶತಮಾನದ ವಚನಕಾರರು. ಲದ್ದೆಯ ಸೋಮೇಶ್ವರ ಎಂಬ ಶರಣ ಸಹಕಾರ, ಶ್ರಮ ಸಂಸ್ಕೃತಿಯನ್ನು ಪ್ರತಿನಿಧಿಸಿದರೆ, ದುಡಿಮೆಯ ಮೂಲಕ ದೇವರನ್ನು ಕಾಣುವ ಬಗೆಯನ್ನು ಪರಿಚಯಿಸಿದರು.
ಜನಪದ ಸಾಹಿತ್ಯದಲ್ಲಿ ರೈತಪರ ಚಿಂತನೆಗಳು ಎಂಬ ವಿಚಾರ ಮಾತನಾಡಿದ ಮೈಸೂರು ಕೃಷ್ಣಮೂರ್ತಿ, ಬೇರೆ ಬೇರೆ ಪ್ರಕಾರಗಳಲ್ಲಿ ಜನಪದ ಸಾಹಿತ್ಯ ವಿಭಜನೆಗೊಂಡಿದೆ. ಕಥೆ, ಗಾದೆ, ಗಾಯನದಂತಹ ಎಲ್ಲ ಪ್ರಕಾರಗಳಲ್ಲೂ ರೈತಪರ ಚಿಂತನೆಗಳು ಮೂಡಿ ಬಂದಿರುವುದು ಸ್ಪಷ್ಟವಾಗುತ್ತದೆ. ರೈತನ ಸವಾಲು, ಸಂಕಟಗಳನ್ನು ಜನಪದ ಸಾಹಿತ್ಯ ರಾಶಿಯಲ್ಲಿ ಕಾಣಬಹುದಾಗಿದೆ. ರೈತರ ಮೇಲೆ ಅನಾಧಿಕಾಲದಿಂದ ನಡೆದಿರುವ ಶೋಷಣೆಗಳನ್ನು ಜನಪದ ಸಾಹಿತ್ಯ ಪ್ರಕಾರಗಳಾದ ಲಾವಣಿಯಲ್ಲಿ ಕಾಣಬಹುದಾಗಿದೆ. ಕೃಷಿಕನಾಗದ ಯಾವುದೆ ವ್ಯಕ್ತಿ ಏನು ಆಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಕನ್ನಡ ಭಾಷಾ ಸಂಪತ್ತಿಗೆ ಕೃಷಿಕರ ಕೊಡುಗೆ ವಿಚಾರವಾಗಿ ಡಾ.ಅ.ಪ.ರಕ್ಷಿತ್ ಮಾತನಾಡಿ, ಕೃಷಿ ಇಲ್ಲದೆ ಆಹಾರ ಕ್ರಮ ಇಲ್ಲ ಎಂಬುದು ಸತ್ಯ. ಒಂದೂವರೆ ಲಕ್ಷ ಪದಗಳನ್ನು ಒಳಗೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿಗೆ ಕೃಷಿ ಸಾಹಿತ್ಯ ನೆರವಾಗಿದೆ. ಮನುಷ್ಯ ಯಾವಾಗ ಆಹಾರಕ್ಕಾಗಿ ಬೇಟೆ ಪ್ರಾರಂಭಿಸುತ್ತಾನೋ ಆಹಾರ ಸಿಕ್ಕ ಜಾಗದಲ್ಲೇ ನೆಲೆ ನಿಲ್ಲಲು ಯೋಚಿಸುತ್ತಾನೆ. ಈ ವೇಳೆ ಸಂವಹನ ಮಾಡಲು ಭಾಷೆ ಬಳಸಿಕೊಳ್ಳುತ್ತಾನೆ. ಮನುಷ್ಯ ನಾಗರಿಕತೆ ಬೆಳೆಯಲು ಕೃಷಿ ಕಾರಣ. ಭೂಮಿಯನ್ನು ಸಮತಟ್ಟು ಮಾಡುವ ಹಂತದಿಂದ ಬೆಳೆ ಬೆಳೆದು ತಟ್ಟೆಗೆ ಅನ್ನವಾಗಿ ಬರುವ ವರೆಗೆ ಅನೇಕ ಪದಗಳಾಗಿ ಆ ಪ್ರಕ್ರಿಯೆ ನಡೆಯುತ್ತದೆ. ಗೆಡ್ಡೆ ಗೆಣಸು ಹುಡುಕಿ ಪುರುಷ ಮನೆಯಿಂದ ಹೊರಗೆ ಹೋದಾಗ ಮಹಿಳೆ ಸಸಿ ನೆಡಲು ಮುಂದಾಗುತ್ತಾಳೆ. ಗುದ್ದಲಿ, ಪಿಕಾಸಿ ಮತ್ತಿತರ ಸಲಕರಣೆಗಳ ಹುಟ್ಟುವಲ್ಲಿ ಮಹಿಳೆಯರ ಪಾತ್ರ ಹೆಚ್ಚಿದೆ. ಆಗ ಕೆಲವೊಂದು ಪದಗಳು ಹುಟ್ಟುಕೊಂಡವು. ಆ ಬಳಿಕ ಅವುಗಳು ಕ್ರಿಯಾಪದಗಳಾಗಿ ಹುಟ್ಟಿದವು. ಇಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ಎಸ್‌ಕೆಪಿ ಕನ್ನಡ ಸಾಹಿತ್ಯ ಮತ್ತು ರೈತ ಪರ ಚಿಂತನೆಗಳು ಎಂಬ ಚರ್ಚಾಗೋಷ್ಠಿ ನಡೆಯಿತು.