ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಜಿಲ್ಲಾ ಸಂಚಾಲಕರ ಸಭೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಪಾರಂಪರಿಕ ವೈದ್ಯ ಪದ್ಧತಿ ವೈದ್ಯಕೀಯ ಜಗತ್ತಿಗೆ ಮೂಲ ಬೇರಿದ್ದಂತೆ. ಅಂತಹ ಪದ್ಧತಿ ಉಳಿಸಿ ಬೆಳೆಸುವ ಸಲುವಾಗಿ ಶ್ರೀ ಕ್ಷೇತ್ರದಲ್ಲಿ ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರ ಆರಂಭಿಸಲು ಶ್ರೀಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥಶ್ರೀಗಳು ನಿರ್ಧರಿಸಿದ್ದಾರೆ. ಒಂದು ತರಬೇತಿಯಲ್ಲಿ ಕನಿಷ್ಠ 50 ಮಂದಿಯನ್ನು ನಿಗದಿ ಪಡಿಸಿ ಭಾಗವಹಿಸುವ ವೈದ್ಯರುಗಳಿಗೆ ವಸತಿ ಮತ್ತು ಉಪಾಹಾರವನ್ನು ಶ್ರೀಮಠದಿಂದಲೇ ಉಚಿತವಾಗಿ ನೀಡಲಾಗುವುದು ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ರಾಜ್ಯಾಧ್ಯಕ್ಷ ಜಿ. ಮಹದೇವಯ್ಯ ಮಾತನಾಡಿ, ಪರಿಷತ್ತಿನ ಸಂಸ್ಥಾಪಕರು ಮತ್ತು ಹಿಂದಿನ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಪರಿಷತ್ ಮುನ್ನಡೆಯುತ್ತಿದೆ. ಪರಿಷತ್ತಿನ ಎಲ್ಲಾ ಜಿಲ್ಲಾ ಸಂಚಾಲಕರು ಈ ತರಬೇತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಪಾರಂಪರಿಕ ವೈದ್ಯರಿಗೋಸ್ಕರ ನಿರಂತರವಾಗಿ ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರ ಪ್ರಾರಂಭಿಸಲು ಅನುವು ಮಾಡಿ ಕೊಟ್ಟಿರುವ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಹಾಗೂ ಪರಿಷತ್‌ನ ಗೌರವಾಧ್ಯಕ್ಷ ಪ್ರಸನ್ನನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಪರಿಷತ್ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಇದರ ಪ್ರಯೋಜನವನ್ನು ನಮ್ಮ ವೈದ್ಯ ಬಂಧುಗಳು ಪಡೆದುಕೊಳ್ಳಬೇಕು ಎಂದರು.
ಈ ಮಾಸಾಂತ್ಯದ ವೇಳೆಗೆ ತರಬೇತಿಯನ್ನು ಪ್ರಾರಂಭಿಸಲಾಗುವುದು, ತರಬೇತಿಯಲ್ಲಿ 50 ಮಂದಿಗೆ ಮಾತ್ರ ಅವಕಾಶವಿದ್ದು, ಭಾಗವಹಿಸುವ ವೈದ್ಯರುಗಳು ಮೇ 10 ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.
ಈ ತರಬೇತಿ ಕೇಂದ್ರ ಪ್ರಾರಂಭವಾದ ನಂತರ ದೂರದ ವೈದ್ಯರಿಗೆ ಅನುಕೂಲವಾಗಲೆಂದು ರಾಜ್ಯದ ಜಿಲ್ಲೆ ಇಲ್ಲವೆ ವಲಯವಾರು ಮೂಲಿಕೆಗಳ ಪ್ರಾಥಮಿಕ ಪಾಠ ಪ್ರವಚನದ ಮೂಲಕ ಪರಿಷತ್ತಿನ ಪದಾಧಿಕಾರಿಗಳು ಎರಡು ಅಥವಾ ಮೂರು ದಿನಗಳ ತರಬೇತಿ ನೀಡಿ ಇವರೆಲ್ಲರಿಗೂ ನಂತರ ಪ್ರತಿ ಆರು ತಿಂಗಳಿಗೊಮ್ಮೆ ಪ್ರಾಯೋಗಿಕ ತರಬೇತಿಯನ್ನು ಶ್ರೀ ಕ್ಷೇತ್ರದಲ್ಲಿ 10 ದಿನಗಳ ನೀಡಲಾಗುವುದು.
ಶ್ರೀಮಠದ ಪೀಠಾಧ್ಯಕ್ಷರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕ್ಷೇತ್ರದ ತಪೋವನದಲ್ಲಿ ಸುಂದರವಾದ ಧನ್ವಂತರಿ ವನವನ್ನು ನಿರ್ಮಿಸಿ ಈ ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರದಲ್ಲಿ ಎಲ್ಲಾ ರೀತಿಯ ಔಷಧಿ ಸಸ್ಯಗಳನ್ನು ಬೆಳೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ತರಬೇತಿಗೆ ಭಾಗವಹಿಸುವ ವೈದ್ಯರಿಗೆ ಗಿಡಗಳ ಪರಿಚಯದ ಜೊತೆಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುವುದು.