ಹಾಲು ಉತ್ಪಾಕರ ಸಂಘ ಸ್ಥಾಪನೆ ಹೆಚ್ಚಾಗಬೇಕು

KannadaprabhaNewsNetwork | Published : Nov 17, 2024 1:21 AM

ಸಾರಾಂಶ

ಮಾಲೂರು ತಾಲೂಕಿನಲ್ಲಿ ಹಾಲು ಉತ್ಪಾದಕ ಸಹಕಾರ ಸಂಘ ಇಲ್ಲದ ಹಳ್ಳಿಗಗಳಲ್ಲಿ ಸಂಘಗಳನ್ನು ಸ್ಥಾಪಿಸಿದರೆ ಇನ್ನೂ ಯಥೇಚ್ಛವಾದ ಹಾಲು ಸಿಗುವಂತೆ ಆಗುತ್ತದೆ. ಇದೀಗ ಚಿಕ್ಕಬಳ್ಳಾಪುರ ಕೋಲಾರನಿಂದ ಬೇರೆಯಾಗಿದ್ದು ಕೋಲಾರ ಒಕ್ಕೂಟದಲ್ಲಿ ಏಳು ಲಕ್ಷ ಹಾಲು ಉತ್ಪಾದನೆಯಾಗುತ್ತಿದೆ. ಅದನ್ನು ಹತ್ತು ಲಕ್ಷಕ್ಕೆ ಹೆಚ್ಚಿಸಬೇಕು.

ಕನ್ನಡಪ್ರಭ ವಾರ್ತೆ ಟೇಕಲ್

ಮಾಲೂರು ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದಕ ಸಂಘಗಳನ್ನು ಸ್ಥಾಪಿಸಿ ಕೋಲಾರ ಹಾಲು ಒಕ್ಕೂಟಕ್ಕೆ ನಮ್ಮ ತಾಲೂಕಿನಿಂದಲೇ ಹೆಚ್ಚು ಗುಣಮಟ್ಟದ ಹಾಲನ್ನು ತಲುಪಿಸುವ ಗುರಿ ಹೊಂದಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಸಲಹೆ ನೀಡಿದರು.

ಟೇಕಲ್‌ನ ತಿರುಮಲಹಟ್ಟಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸಂಜೀವಿನಿ ಯೋಜನೆ ಹಂತ 4 ರ ಅಡಿಯಲ್ಲಿ 14 ಮಂದಿ ಹಾಲು ಉತ್ಪಾದಕರಿಗೆ ತಲಾ 47 ಸಾವಿರ ರೂಪಾಯಿಯಂತೆ ಹಸು ಕೊಂಡುಕೊಳ್ಳಲು ರು ಸಾಲ ಯೋಜನೆಯ ಚೆಕ್ ವಿತರಿಸಿ ಅವರು ಮಾತನಾಡಿದರು.

ಸಂಘಗಳ ಸಂಖ್ಯೆ ಹೆಚ್ಚಾಗಬೇಕು

ಮಾಲೂರು ತಾಲೂಕಿನಲ್ಲಿ 316 ಹಳ್ಳಿಗಳಿಗಳಿದ್ದರೂ ಹಾಲು ಉತ್ಪಾದಕರ ಕೇವಲ179 ಸಂಘಗಳಿವೆ. ಉಳಿದ ಹಳ್ಳಿಗಳಿಗೆ ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಸ್ಥಾಪಿಸಿದರೆ ಇನ್ನೂ ಯಥೇಚ್ಛವಾದ ಹಾಲು ಸಿಗುವಂತೆ ಆಗುತ್ತದೆ. ಇದೀಗ ಚಿಕ್ಕಬಳ್ಳಾಪುರ ಕೋಲಾರನಿಂದ ಬೇರೆಯಾಗಿದ್ದು ಕೋಲಾರ ಒಕ್ಕೂಟದಲ್ಲಿ 7 ಲಕ್ಷ ಹಾಲು ಉತ್ಪಾದನೆಯಾಗುತ್ತಿದೆ. ಅದನ್ನು 10 ಲಕ್ಷಕ್ಕೆ ಹೆಚ್ಚಿಸಬೇಕು ಎಂದರು.

ಹಾಲು ಉತ್ಪಾದಕರು ಉತ್ತಮ ರಾಸುಗಳನ್ನು ತೆಗೆದುಕೊಂಡು ಗುಣಮಟ್ಟದ ಹಾಲನ್ನು ನೀಡುವಂತಾಗಬೇಕು. ಒಕ್ಕೂಟದಲ್ಲಿ ಸಿಗುವಂತ ಹಲವಾರು ಯೋಜನೆಗಳನ್ನು ಹಾಲು ಉತ್ಪಾದಕರಿಗೆ ಸಿಗುವಂತಾಗಬೇಕು ಹಾಗೂ ಪ್ರತಿಯೊಬ್ಬರು ರಾಸುಗಳಿಗೆ ವಿಮಾ ಪಾಲಿಸಿ ಮಾಡಿಸಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಉತ್ತಮವಾದ ಅಭಿವೃದ್ಧಿ ಕೆಲಸ ಮಾಡುತ್ತಿದ್ದು ಐದು ಗ್ಯಾರೆಂಟಿಗಳು ಯೋಜನೆಯು ಜನರಿಗೆ ಪೂರಕವಾದ ಸಹಕಾರಿಯಾಗಿದೆ ಎಂದರು.

ಮಹಿಳಾ ಸಂಘಗಳನ್ನು ಸ್ಥಾಪಿಸಿ

ಇದೇ ವೇಳೆ ಮಾಜಿ ಜಿ.ಪಂ. ಅಧ್ಯಕ್ಷೆ ರತ್ನಮ್ಮನಂಜೇಗೌಡರು ಮಾತನಾಡಿ ತಾಲೂಕಿನಲ್ಲಿ ಅತಿ ಹೆಚ್ಚು ಮಹಿಳಾ ಹಾಲು ಉತ್ಪಾದಕರ ಸಂಘಗಳನ್ನು ರಚಿಸಬೇಕೆಂದರು.

ಈ ಸಂದರ್ಭದಲ್ಲಿ ಮಹಿಳಾ ಸಂಘದ ಅಧ್ಯಕ್ಷರು, ನಿರ್ದೇಶಕರು ಗ್ರಾಮದ ಮುಖಂಡರಾದ ಟಿ.ವಿ.ತಿಮ್ಮೇಗೌಡ, ದೇವರಾಜ್, ಬಾಬು, ಮಾಜಿ ಗ್ರಾ.ಪಂ.ಅಧ್ಯಕ್ಷ ಸತೀಶ್‌ರಾಜಣ್ಣ, ಮಾಲೂರು ಶಿಬಿರ ಕಛೇರಿ ಉಪವ್ಯವಸ್ಥಾಪಕ ಡಾ|| ಲೋಹಿತ್, ವಿಸ್ತರಣಾಧಿಕಾರಿ ಹುಲ್ಲೂರಪ್ಪ, ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.16 ಕ.ಟಿ.ಇ.ಕೆ ಚಿತ್ರ 4 : ಟೇಕಲ್‌ನ ಕೊಮ್ಮನಹಳ್ಳಿ ಶಾಸಕ ಕೆ.ವೈ.ನಂಜೇಗೌಡ ಅವರು ಫಲಾನುಭವಿಗಳಿಗೆ ರಾಸುಗಳ ಸಾಲ ಯೋಜನೆಯ ಚೆಕ್ ವಿತರಿಸಿದರು.

Share this article