ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿರುವ ಗಾಂಧಿ ಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಾಡಿನಲ್ಲಿರುವ ಹಲವಾರು ರಾಜ್ಯ ಮಟ್ಟದ ಕನ್ನಡಪರ ಸಂಘಟನೆಗಳ ಹೋರಾಟದ ಫಲದಿಂದ ಕನ್ನಡಿಗರ ಬದುಕು ಹಸನಾಗುತ್ತಿದೆ. ನೆಲ-ಜಲ, ಭಾಷೆ ಉಳಿವು, ಬೆಳವಣಿಗೆಗೆ ಪೂರಕವಾಗಿ ನಿಂತಿರುವುದು ಹೆಮ್ಮೆಯ ವಿಚಾರ. ಆದರೆ, ರೈತರ ಬದುಕಿಗಾಗಿ, ಜೀವಜಲ ರಕ್ಷಣೆಗಾಗಿ ಮೇಕೆದಾಟು ಯೋಜನೆ ಹೋರಾಟದಿಂದ ಮಾತ್ರ ರಚನೆಯಾಗಬಲ್ಲದು, ಗಟ್ಟಿಧ್ವನಿಯಿಂದ ಸಾಧ್ಯವಿದೆ ಎಂದು ನುಡಿದರು.ಅಂದಿನ ಕಾಲದಲ್ಲಿ ಡಾ.ರಾಜ್ ಮತ್ತು ಹಲವು ಗೋಕಾಕ್ ವರದಿ ಜಾರಿಗಾಗಿ ಚಳಿವಳಿಯನ್ನೇ ರೂಪಿಸಿ, ಹೊಸ ಇತಿಹಾಸ ನಿರ್ಮಾಣ ಮಾಡಿದರು. ಕನ್ನಡಪರ ಹೋರಾಟಗಾರರಿಗೂ ಇಂತಹ ಶಕ್ತಿ, ಚೈತನ್ಯವಿದೆ, ಎಲ್ಲರೂ ಒಗ್ಗೂಡಿ, ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಧುಮಕಬೇಕಿದೆ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗಣ್ಯರು ಅಭಿನಂದಿಸಿದರು, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ನಡೆಯಿತು. ಭರತನಾಟ್ಯ ವಿದ್ಯಾರ್ಥಿಗಳಿಂದ ನೃತ್ಯಪ್ರದರ್ಶನ ಗಮನ ಸಳೆಯಿತು.
ಮಂಡ್ಯ ನಗರದಲ್ಲಿರುವ ಗಾಂಧಿಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಸಮಾರಂಭವನ್ನು ಜಿಲ್ಲಾ ಬಿಜೆಪಿ ಯುವ ಮುಖಂಡ ಎಚ್.ಆರ್.ಆರವಿಂದ್ ಉದ್ಘಾಟಿಸಿದರು.