ಪಂಚಮಸಾಲಿಗಳ ಅರ್ಬನ್ ಬ್ಯಾಂಕ್ ಸ್ಥಾಪನೆ ಮುಖ್ಯ: ಶಿವಾನಂದ ಪಾಟೀಲ್‌

KannadaprabhaNewsNetwork |  
Published : Jan 15, 2025, 12:47 AM IST
14 ಎಚ್‍ಆರ್‍ಆರ್ 04 ಹರಿಹರದಲ್ಲಿ ಪಂಚಮಸಾಲಿ ಪೀಠದಿಂದ ಹರಜಾತ್ರೆ ನಡೆಯಿತು | Kannada Prabha

ಸಾರಾಂಶ

ಆರ್ಥಿಕವಾಗಿ ಸದೃಢವಾಗಬೇಕಾದರೆ ಪಂಚಮಸಾಲಿ ಸಮಾಜಕ್ಕೆ ಅರ್ಬನ್ ಬ್ಯಾಂಕ್ ಸ್ಥಾಪನೆ ಮುಖ್ಯವಾಗಿ ಆಗಬೇಕಾಗಿದೆ ಎಂದು ಸಹಕಾರಿ ಸಚಿವ ಶಿವಾನಂದ ಪಾಟೀಲ್ ಹರಿಹರದಲ್ಲಿ ಹೇಳಿದ್ದಾರೆ.

- ವಚನಾನಂದ ಶ್ರೀ 7ನೇ ವಾರ್ಷಿಕ ಪೀಠಾರೋಹಣ, ಹರಜಾತ್ರೆ - - - ಕನ್ನಡಪ್ರಭ ವಾರ್ತೆ ಹರಿಹರ ಆರ್ಥಿಕವಾಗಿ ಸದೃಢವಾಗಬೇಕಾದರೆ ಪಂಚಮಸಾಲಿ ಸಮಾಜಕ್ಕೆ ಅರ್ಬನ್ ಬ್ಯಾಂಕ್ ಸ್ಥಾಪನೆ ಮುಖ್ಯವಾಗಿ ಆಗಬೇಕಾಗಿದೆ ಎಂದು ಸಹಕಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ನಗರದ ಹೊರವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಮಂಗಳವಾರ ನಡೆದ ಕಿತ್ತೂರು ರಾಣಿ ಚನ್ನಮ್ಮಾಜಿ ದ್ವಿಶತಮಾನೋತ್ಸವ, ವಚನಾನಂದ ಶ್ರೀಗಳ 7ನೇ ವಾರ್ಷಿಕ ಪೀಠಾರೋಹಣ, ಹರಜಾತ್ರೆ, ರಾಜ್ಯ ಮಹಿಳಾ ಹಾಗೂ ಯುವ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಿಂದ ನೀವು ಆರಂಭಿಸುವ ಬ್ಯಾಂಕ್‍ನಲ್ಲಿ ಯಾವುದೇ ರಾಜಕಾರಣಿಗಳು ಇರಕೂಡದು. ಎರಡು ಮಠಗಳು ಸೇರಿ ಈ ಬ್ಯಾಂಕ್ ಮಾಡಿದರೆ ಇನ್ನು ಒಳ್ಳೆಯದು. ಬ್ಯಾಂಕ್ ಸ್ಥಾಪಿಸಲು ಅಗತ್ಯವಿರುವ ₹11 ಲಕ್ಷ ಷೇರು ಮಾಡಿಸುವ ಜವಬ್ದಾರಿ ನನ್ನದು ಎಂದು ಭರವಸೆ ನೀಡಿದರು.

ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಪ್ರವರ್ಗ 2ಎ ನಲ್ಲಿ ಈಗಾಗಲೇ 108 ಜಾತಿಗಳಿವೆ. ಇದರಲ್ಲಿ ಸೇರಿದರೆ ಪಂಚಮಸಾಲಿ 109 ಜಾತಿಗಳಾಗುತ್ತವೆ. ಅದಕ್ಕಾಗಿ ಬಿಜೆಪಿ ಸರ್ಕಾರ ಇದ್ದಾಗ 2ಎ ಬದಲಿಗೆ 2ಡಿ ಸೃಷ್ಟಿಸಿ ಅದರಲ್ಲಿ ಸೇರ್ಪಡೆ ಮಾಡಲಾಗಿತ್ತು. ಆದರೆ, ಸದ್ಯಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇದ್ದು, 2ಡಿ ವರ್ಗದ ಮೀಸಲಾತಿ ಸಮಾಜಕ್ಕೆ ಸಿಗುವುದರಲ್ಲಿ ಯಾವುದೇ ಸಂದೇಹ ಬೇಡ ಎಂದರು.

ಸಾನಿಧ್ಯ ವಹಿಸಿದ್ದ ವಚನಾನಂದ ಶ್ರೀ ಮಾತನಾಡಿ, ಹರಿಹರ ಪೀಠ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿಸುತ್ತಿದೆ. ಕಾಯ ಆಳಿಯುತ್ತದೆ, ಆದರೆ ಕಾಯಕ ಅಳಿಯುವುದಿಲ್ಲ ಎನ್ನುವ ರೀತಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಹರಿಹರ ಪೀಠದ ಬಗ್ಗೆ ತೆಗಳುವುದನ್ನೆ ಕೇಲವರು ಕಾಯಕ ಮಾಡಿಕೊಂಡಿದ್ದಾರೆ ಅವರಿಗೆ ಉತ್ತರ ನೀಡದೇ, ಉದಾಸೀನವೇ ಲೇಸು ಎಂದು ತಿಳಿದು ನಮ್ಮ ಕಾಯಕ ಮಾಡುತ್ತಿದ್ದೇವೆ ಎಂದರು.

ರಾಜ್ಯ ಮಹಿಳಾ ಹಾಗೂ ಯುವ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸಮಾಜದ ಮುಖಂಡ ಬಸವರಾಜ್ ದಿಂಡೂರ ಪ್ರಮಾಣ ವಚನ ಬೋಧಿಸಿದರು. ಶಾಸಕರಾದ ಬಿ.ಪಿ.ಹರೀಶ್, ಯು.ಬಿ.ಬಣಕಾರ್, ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಹರಜಾತ್ರೆ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಪೀಠದ ಧರ್ಮದರ್ಶಿಗಳಾದ ಬಿ.ಸಿ.ಉಮಾಪತಿ, ಪಿ.ಡಿ.ಶಿರೂರು, ಗುರಶಾಂತ್ ನಿಡೋಣಿ, ಶ್ರೀಮಂತ್ ಇಚಿಡಿ,ಮಾಜಿ ಶಾಸಕ ಆರುಣ್ ಕುಮಾರ್, ಪರಮೇಶ್ವರಪ್ಪ ಪಟ್ಟಣಶೆಟ್ಟಿ, ಚಂದ್ರಶೇಖರ್ ಪೂಜಾರ್, ವಸಂತಮ್ಮ ಹುಲ್ಲತ್ತಿ, ರಶ್ಮಿಕುಂಕದ್ ಸೇರಿದಂತೆ ಇತರರಿದ್ದರು.

- - - -14ಎಚ್‍ಆರ್‍ಆರ್04:

ಹರಿಹರದಲ್ಲಿ ಪಂಚಮಸಾಲಿ ಪೀಠದಿಂದ ಹರಜಾತ್ರೆ ಸಮಾರಂಭ ನಡೆಯಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ