ವಚನ ಸಾಹಿತ್ಯ ಪ್ರಶಸ್ತಿ ಸ್ಥಾಪನೆ ಒಳ್ಳೆಯ ಬೆಳವಣಿಗೆ

KannadaprabhaNewsNetwork |  
Published : Aug 31, 2026, 02:15 AM IST
ೀಾೀಾ | Kannada Prabha

ಸಾರಾಂಶ

ಶೈನಾ ಅಧ್ಯಯನ ಸಂಸ್ಥೆ ,ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ,ತುಮಕೂರು ಅಯೋಜಿಸಿದ್ದ ಬಿ.ಚನ್ನಪ್ಪಗೌರಮ್ಮ ವಚನ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು

ಕನ್ನಡಪ್ರಭ ವಾರ್ತೆ ತುಮಕೂರು ಶಿಕ್ಷಕರಾಗಿ ಒಳ್ಳೆಯ ವ್ಯಕ್ತಿಯಾಗಿದ್ದ ಚನ್ನಪ್ಪ ಗೌರಮ್ಮ ಬಸವಾದಿ ಶರಣರಂತೆ ನುಡಿ,ನಡೆಯೂ ಒಂದೇ ಆಗಿ ಬದುಕಿದವರು. ಕಾಯಕ, ದಾಸೋಹ ತತ್ವವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು, ಸಕಲರಿಗೂ ಲೇಸನ್ನೇ ಬಯಸಿದವರು, ಅವರ ಹೆಸರನ್ನು ಅಜರಾಮರ ವಾಗಿಸಲು ಶೈನಾ ಸಂಸ್ಥೆ ಸ್ಥಾಪಿಸಿರುವ ವಚನ ಸಾಹಿತ್ಯ ಪ್ರಶಸ್ತಿ ಒಳ್ಳೆಯ ಬೆಳವಣಿಗೆ ಎಂದು ಜ್ಞಾನ ಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಮುರುಳಿಕೃಷ್ಣಪ್ಪ ತಿಳಿಸಿದ್ದಾರೆನಗರದ ಶೈನಾ ಅಧ್ಯಯನ ಸಂಸ್ಥೆ ,ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ,ತುಮಕೂರು ಅಯೋಜಿಸಿದ್ದ ಬಿ.ಚನ್ನಪ್ಪಗೌರಮ್ಮ ವಚನ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ನುಡಿನಮನ ಸಲ್ಲಿಸಿ ಮಾತನಾಡಿದರು. ಈ ಪ್ರಶಸ್ತಿ ಶೈನಾ ಅವರು ಅವರ ತಂದೆಯ ಮೇಲೆ ಇಟ್ಟಿರುವ ಭಕ್ತಿ, ಶ್ರದ್ಧೆಗೆ ಸಾಕ್ಷಿ ಎಂದರು. ಇಂಗ್ಲಿಷ್ ಶಿಕ್ಷಕರಾಗಿ, ಗಂಟೆಗಟ್ಟಲೇ ವಚನಗಳನ್ನು ಸುಶ್ರಾವವಾಗಿ ಹಾಡಿ, ಸ್ಪಷ್ಟವಾಗಿ ಹಾಡುವ ಪ್ರವೃತ್ತಿ ಹೊಂದಿದ್ದರು, ಪೂಜೆಯನ್ನು ವಚನಗಳ ಮೂಲಕವೇ ಮಾಡುತ್ತಿದ್ದರು.ಒಳ್ಳೆಯ ತಂದೆಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಮುರುಳಿಕೃಷ್ಣಪ್ಪ ತಿಳಿಸಿದರು.ನುಡಿ ನಮನ ಸಲ್ಲಿಸಿ ಮಾತನಾಡಿದ ಸಾಹಿತಿ ಶೈಲಾ ನಾಗರಾಜು, ಪ್ರಪಂಚದಲ್ಲಿಯೇ ಯಾವುದಾದರೊಂದು ಧರ್ಮ ಸಾಹಿತ್ಯವನ್ನು ನೀಡಿದ್ದರೆ ಅದು ಶರಣ ಧರ್ಮದ ವಚನ ಸಾಹಿತ್ಯ. ಪ್ರಪಂಚದ 20 ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಗೊಂಡಿದೆ.ಇದು ಕನ್ಬಡ ನಾಡಿನ ಹೆಮ್ಮೆಯ ವಿಚಾರ ಎಂದರು. ಆಧ್ಯಕ್ಷತೆ ವಹಿಸಿದ್ದ ಶೈನಾ ಅಧ್ಯಯನ ಸಂಸ್ಥೆಯ ಅಧ್ಯಕ್ಷ ದೊಂಬರನಹಳ್ಳಿ ನಾಗರಾಜು ಮಾತನಾಡಿ, ಶೈನಾ ಅಧ್ಯಯನ ಸಂಸ್ಥೆಯ ವತಿಯಿಂದ ಸಾಹಿತಿಡಾ.ಶೈಲಾ ನಾಗರಾಜ್‌ ಅವರ ತಂದೆ ಶಿಕ್ಷಕರಾಗಿದ್ದ ಚನ್ನಪ್ಪ ಗೌರಮ್ಮಅವರ ಹೆಸರಿನಲ್ಲಿ ವಚನ ಸಾಹಿತ್ಯ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ವರ್ಷದಲ್ಲಿ ಹೈಸ್ಕೂಲ್ ನ ಮುಖ್ಯಶಿಕ್ಷಕರು, ಕನ್ನಡ ಮತ್ತು ಸಂಸ್ಕೃತ ಪಂಡಿತರು ವಿದ್ವಾನ್ ಹರಳೂರು ಶಿವಕುಮಾರ್ ಅವರಿಗೆ ಪ್ರಶಶ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು. ಪ್ರಶಸ್ತಿಯೂ 5 ಸಾವಿರ ರು. ನಗದು, ಪ್ರಶಸ್ತಿ ಫಲಕಗಳನ್ನ ಹೊಂದಿದೆ. ವಚನ ಸಾಹಿತ್ಯದಲ್ಲಿ ಕೆಲಸ ಮಾಡಿರುವ ಮತ್ತು ಮಾಡುತ್ತಿರುವವರನ್ನು ಗುರುತಿಸಿ ಗೌರವಿಸುವ ಮೂಲಕ ಚನ್ನಪ್ಪಗೌರಮ್ಮಅವರನ್ನು ಸ್ಮರಿಸಲಾಗುತ್ತಿದೆ ಎಂದರು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‌ ಅವರು ಚನ್ನಪ್ಪ ಗೌರಮ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ನಾಗರತ್ನ ಚಂದ್ರಪ್ಪ, ಡಿ.ಆರ್.ಮಲ್ಲೇಶಯ್ಯ, ಪಿ.ಎನ್.ಶಿವರುದ್ರಪ್ಪ, ಕಲ್ಲಟ್ಟಿ ಪಾರ್ವತಮ್ಮ ಹೊದಲೂರು,ಬಿ.ಸಿ.ಸೋಮಪ್ರಸಾದ್, ಉಪಸ್ಥಿತರಿದ್ದರು. ಮಾರ್ಧುಯ ಹಾಗೂ ವೀಣಾ ಇಡಕನಹಳ್ಳಿ ಅವರಿಂದ ವಚನ ಗಾಯನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ಬಿಲ್ ಬಿಡುಗಡೆಗಾಗಿ ಮುಂದುವರಿದ ಗುತ್ತಿಗೆದಾರರ ಪ್ರತಿಭಟನೆ
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯಿಂದ ಮಲಗುಂಡಿ ಸ್ವಚ್ಛತೆ