ಕನ್ನಡಪ್ರಭ ವಾರ್ತೆ ಕೋಲಾರ
ನಗರದ ಬಯಲು ಬಸವೇಶ್ವರ ದೇವಾಲಯದ ಆವರಣದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ೪೦ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ೧೧೧ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆಯು ದಾರಿ ತಪ್ಪುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಶರಣ ಸಾಹಿತ್ಯದಂತಹ ಸಂಸ್ಥೆಗಳು ಯುವಜನತೆಯಲ್ಲಿ ಸದ್ವಿಚಾರಗಳನ್ನು ಮೂಡಿಸಿ ಅವರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ, ಆಳುವ ಸರ್ಕಾರಗಳು ಜನರಿಗೆ ಶರಣ ಸಾಹಿತ್ಯ ಹಾಗೂ ವಚನಗಳ ಮೂಲಕ ನೀಡಬೇಕಾದ ಮೌಲ್ಯಯುತ ಸಂದೇಶಗಳ ಬಗ್ಗೆ ಸೂಕ್ತ ಆಲೋಚನೆ ಮತ್ತು ಯೋಜನೆಗಳನ್ನು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಸಾಪ ಮಾಜಿ ಅಧ್ಯಕ್ಷ ಜಿ.ಜೆ.ನಾಗರಾಜ್ ಮಾತನಾಡಿ ಕನ್ನಡ ಶರಣ ಸಾಹಿತ್ಯ ಮತ್ತು ಶೈವ ಪರಂಪರೆಯು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶರಣಸಾಹಿತ್ಯ ಪರಿಷತ್ ಉಪಾಧ್ಯಕ್ಷ ಅಶೋಕ್ ಲೋನಿ, ಪ್ರಧಾನ ಕಾರ್ಯದರ್ಶಿ ಶೇಖರಪ್ಪ, ಕಾರ್ಯದರ್ಶೀ ಶೇಖರ್, ತಾಲ್ಲೂಕು ಅಧ್ಯಕ್ಷ ಬಿ. ಶಿವಕುಮಾರ್, ಶರಣರಾದ ವಿಶ್ವನಾಥ್, ಸಂಗೀತ ಶಿಕ್ಷಕಿ ಡಿ.ಎಸ್ ಭವಾನಿ, ಬಿ.ಆರ್.ಎಂ ಶಿವಕುಮಾರ್ ಸೇರಿದಂತೆ ಚಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ, ಟಿ ಸುಬ್ಬರಾಮಯ್ಯ, ಮೇಘರಾಜು ಸುಪ್ರಿಂ, ಬಿ.ವಿ ನಂಜುಂಡಪ್ಪ, ಸೋಮಶೇಖರ್ ಇದ್ದರು.