ಕನ್ನಡಪ್ರಭ ವಾರ್ತೆ ಜಗಳೂರು
ಮಹಾಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷ ಕೆ.ತಿಮ್ಮರಾಯಪ್ಪ ಕಾರ್ಯಕ್ರಮ ಉದ್ಘಾಟಿಸಿ, ಹೊಸ ಜಿಎಸ್‌ಟಿ ನಿಯಮದಿಂದ ರಾಜ್ಯದ ಎಲ್ಲ ಪಿಎಲ್‌ಡಿ ಬ್ಯಾಂಕುಗಳ ಮೇಲೆ ಭಾರಿ ಆರ್ಥಿಕ ಹೊರೆ ಬೀಳಲಿದೆ. ಈ ನಿರ್ಧಾರವನ್ನು ತಕ್ಷಣ ಹಿಂಪಡೆಯುವಂತೆ ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಅವರಿಗೆ ಮನವಿ ಸಲ್ಲಿಸಲು ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.
₹4.80 ಕೋಟಿ ಠೇವಣಿ: ಬ್ಯಾಂಕ್ ವ್ಯವಸ್ಥಾಪಕ ಟಿ.ಎನ್.ನಾಗಭೂಷಣ್ ವಾರ್ಷಿಕ ಜಮಾ-ಖರ್ಚು ವಿವರ ಮಂಡಿಸಿ, ಬ್ಯಾಂಕಿನಲ್ಲಿ ಪ್ರಸ್ತುತ ಒಟ್ಟು ₹4.80 ಕೋಟಿ ಠೇವಣಿಗಳಿವೆ. ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯಕ್ಕೆ ₹96.26 ಲಕ್ಷ ಬ್ಯಾಂಕ್‌ನಲ್ಲಿ ಲಭ್ಯವಿದೆ. ಬ್ಯಾಂಕಿನಿಂದ ಸಾಲ ಪಡೆದ 44 ಸದಸ್ಯರು ಸುಸ್ತಿದಾರರಾಗಿದ್ದಾರೆ. ಸಾಲ ಪಡೆದ ಸದಸ್ಯರು ಬಡ್ಡಿ ಸಮೇತ ಬಾಕಿ ತೀರಿಸಿದರೆ ಮಾತ್ರ ಬ್ಯಾಂಕ್ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ರೈತರ ನೆರವಿಗೆ ಧಾವಿಸಲು ಆಗ್ರಹ: ಮಾಜಿ ಅಧ್ಯಕ್ಷೆ ಜಿ.ಎಸ್.ವೀಣಾ ಗೋಗುದ್ದುರಾಜು ಮಾತನಾಡಿ, ಪ್ರಸ್ತುತ ಬರಗಾಲದ ಸ್ಥಿತಿಯಿಂದ ಕೃಷಿಕರ ಬದುಕು ಅಯೋಮಯವಾಗಿದೆ. ಸಾಲ ಪಡೆದ ರೈತರ ಸ್ಥಿತಿ ಶೋಚನೀಯವಾಗಿದೆ. ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಕ್ರಮ ಕೈಗೊಂಡು ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.