ನಗರದ ಬಿಜಿಎಸ್ ವೃತ್ತದಲ್ಲಿರುವ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಸೆಪ್ಟಂಬರ್ 14 ರಂದು ವಿನಾಯಕ ಚತುರ್ಥಿಯಂದು ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಮಾಡಲಾಗುವುದು
ಕನ್ನಡಪ್ರಭ ವಾರ್ತೆ ತುಮಕೂರುನಗರದ ಹಿಂದೂ ಮಹಾ ಗಣಪತಿ ಸೇವಾ ಸಮಿತಿ ಈ ವರ್ಷ 9ನೇ ವರ್ಷದ ವೈಭವದ ಗಣೇಶೋತ್ಸವ ಆಚರಿಸಲು ಸಿದ್ಧತೆ ನಡೆಸಿದೆ. ನಗರದ ಬಿಜಿಎಸ್ ವೃತ್ತದಲ್ಲಿರುವ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಸೆಪ್ಟಂಬರ್ 14 ರಂದು ವಿನಾಯಕ ಚತುರ್ಥಿಯಂದು ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಟಿ.ಬಿ. ಶೇಖರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಪೂರ್ವಭಾವಿಯಾಗಿ 12 ರಂದು ಶನಿವಾರ ಕ್ಯಾತ್ಸಂದ್ರ ಜಾಸ್‌ಟೋಲ್‌ನಿಂದ ಬಟವಾಡಿ ಮಾರ್ಗವಾಗಿ ನಾಗರಕಟ್ಟೆ ಗಣಪತಿ ದೇವಸ್ಥಾನದವರೆಗೆ ಶ್ರೀ ಗಣಪತಿಯ ಅದ್ಧೂರಿ ಪುರಪ್ರವೇಶವನ್ನು ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಸೆಪ್ಟಂಬರ್ 14 ರ ಮಧ್ಯಾಹ್ನ 12.30ಕ್ಕೆ ಹಿಂದೂ ಮಹಾ ಗಣಪತಿಯ ಪ್ರತಿಷ್ಠಾಪನೆ ನೆರವೇರಲಿದೆ. 18 ದಿನಗಳ ನಂತರ ಅಕ್ಟೋಬರ್ 3 ರಂದು ಅದ್ದೂರಿ ವಿಸರ್ಜನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಹಿಂದೂ ಸಮಾಜದ ಹಾಗೂ ಲೋಕ ಕಲ್ಯಾಣಕ್ಕಾಗಿ ಕಳೆದ 8 ವರ್ಷದಿಂದ ಹಿಂದೂ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಹಿಂದೂ ಮಹಾ ಗಣಪತಿಯ ಉತ್ಸವವನ್ನು ಅದ್ಧೂರಿಯಾಗಿ ನೆರವೇರಿಸಲಾಗಿದೆ, ಅದರಂತೆ ಈ ವರ್ಷವೂ ಗಣೇಶೋತ್ಸವವನ್ನು ವೈಭವವಾಗಿ ಆಚರಿಸಲು ನಿಶ್ಚಯಿಸಲಾಗಿದ್ದು ಹಿಂದೂ ಸಂಸ್ಕೃತಿ, ಸಂಸ್ಕಾರಗಳು ಹಾಗೂ ಐಕ್ಯತೆಯಿಂದ ಬಾಳುವಂತೆ ಮಾಡುವುದೇ ಹಿಂದೂ ಮಹಾ ಗಣಪತಿಯ ಉದ್ದೇಶವಾಗಿರುತ್ತದೆ ಎಂದು ಟಿ.ಬಿ. ಶೇಖರ್ ಹೇಳಿದರು. ಹಿಂದೂ ಮಹಾ ಗಣಪತಿ ಸ್ವಾಗತ ಸಮಿತಿಗೌರವ ಪ್ರಧಾನ ಕಾರ್ಯದರ್ಶಿ ಆರ್.ಎಲ್. ರಮೇಶ್‌ಬಾಬು, ಉಪಾಧ್ಯಕ್ಷರಾದ ಮಂಜೇಶ್, ಜಿ. ಮನು, ಗೌರವ ಕಾರ್ಯದರ್ಶಿ ಆರ್.ಕೃಷ್ಣಯ್ಯ, ಸಹ ಕಾರ್ಯದರ್ಶಿ ಡಿ.ಸಿ.ನರಸಿಂಹಮೂರ್ತಿ, ಮಾರಣ್ಣ ಪಾಳೆಗಾರ್, ಖಜಾಂಚಿ ಟಿ.ವೈ. ಯಶಸ್, ನಿರ್ದೇಶಕರಾದ ಸಿ.ಆರ್.ಮೋಹನ್‌ಕುಮಾರ್, ಟಿ.ಸಿ. ಓಹಿಲೇಶ್ವರ್, ಮೋಹನ್‌ಕುಮಾರ್ ಪಟೇಲ್, ಡಾ.ಧನಿಯಾಕುಮಾರ್, ಮಂಜು ಭಾರ್ಗವ್, ಡಿ. ಭಾನುಪ್ರಕಾಶ್, ಬಿ.ಎಸ್. ಪರಮೇಶ್, ಸುಜಾತ ನಂಜೇಗೌಡ, ವನಿತಾ ಮುರುಗೇಶ್, ಶಕುಂತಲಾ ನಟರಾಜ್, ವಸಂತಕುಮಾರ್ ಶೀತಕಲ್ ಕೃಷ್ಣಯ್ಯ ಸೇರಿದಂತೆ ಹಲವಾರು ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.