ಏತ ನೀರಾವರಿ ಕಾಮಗಾರಿ ಮುಗಿಯುವ ಹಂತಕ್ಕೆ, ಶೀಘ್ರ ಉದ್ಘಾಟನೆ: ಶಾಸಕ ಬಸನಗೌಡ ದದ್ದಲ್

KannadaprabhaNewsNetwork |  
Published : Jan 30, 2024, 02:06 AM IST
29ಕೆಪಿಆರ್‌ಸಿಆರ್‌03: | Kannada Prabha

ಸಾರಾಂಶ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಣೇಕಲ್ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯ ಬಹುನಿರೀಕ್ಷಿತ ಕುಡಿಯುವ ನೀರು ಹಾಗೂ ರೈತರಿಗೆ ಜಮೀನುಗಳಿಗೆ ಕೃಷ್ಣ ನದಿಯಿಂದ ಬಂಗಾರಪ್ಪ ಕೆರೆಗೆ ನೀರುಣಿಸುವ ಯೋಜನೆಯ ಕಾಮಗಾರಿಯನ್ನು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಸೋಮವಾರ ವೀಕ್ಷಿಸಿದರು.

ಈ ವೇಳತ ಮಾತನಾಡಿದ ಅವರು, ಗಣೇಕಲ್ (ಬಂಗಾರಪ್ಪ ಕೆರೆ) ತುಂಬುವ ಯೋಜನೆಯೂ ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹211 ಕೋಟಿ ಮೊತ್ತದ ಕಾಮಗಾರಿ ಟೆಂಡರ್ ಆಗಿತ್ತು, ಈಗ ಕೆಲಸ ಸಂಪೂರ್ಣವಾಗಿ ಮುಗಿಯುವ ಹಂತದಲ್ಲಿದೆ ಶೀಘ್ರದಲ್ಲೇ ಉದ್ಘಾಟನೆ ಗೊಳ್ಳಲಿದೆ ಎಂದರು.

ರೈತರು ಮುಖಂಡರುಗಳು ಜನಪ್ರತಿನಿಧಿಗಳು, ಪಕ್ಷದ ಮುಖಂಡರುಗಳು, ಅಧಿಕಾರಿಗಳು ಬಂಗಾರಪ್ಪ ಕೆರೆಯನ್ನು ಕೃಷ್ಣಾ ನದಿಯವರೆಗೆ ಸೇರಿ ಸಂಪೂರ್ಣವಾಗಿ ವೀಕ್ಷಣೆ ಮಾಡಿಕೊಂಡು ಬರಲಾಗಿದೆ. ಇನ್ನು ಸಣ್ಣ ಪುಟ್ಟ ಕೆಲಸಗಳು ಬಾಕಿವೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಮೂಲಕ ಇದನ್ನು ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುತ್ತದೆ, ರಾಯಚೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಯೋಜನೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಇನ್ನು ಉಳಿದಂತಹ ಸಣ್ಣಪುಟ್ಟ ಕೆಲಸವನ್ನು ಸಂಪೂರ್ಣಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ಉದ್ಘಾಟನೆಯ ದಿನಾಂಕ ನಿಗದಿಪಡಿಸಿ ಶೀಘ್ರದಲ್ಲೇ ಉದ್ಘಾಟಿಸಲಾಗುತ್ತದೆ. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ನೀರಾವರಿಯಿಂದ ವಂಚಿತವಾದಂತಹ ಪ್ರದೇಶ ಹಾಗಾಗಿ ಅಧಿಕಾರಿಗಳು ಕೂಡ ಕೆಳಭಾಗದ ರೈತರಿಗೆ ನೀರು ಒದಗಿಸಲು ಅವರ ಸಾಹಸ ಕೊಡಬೇಕಾಗುತ್ತದೆ, ಇಂತಹ ಕೆರೆ ತುಂಬುವ ಯೋಜನೆ ಮಾಡಿದಾಗ ಮಾತ್ರ ನಮ್ಮ ಭಾಗಕ್ಕೆ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು,ರೈತರು, ಅಧಿಕಾರಿಗಳು, ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಂಕ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ಬಾಟಲ್‌ಗೆ ಹಾಕಿದ್ರೆ ಕ್ರಮ: ಎಚ್ಚರಿಕೆ
ಕಪ್‌ತುಳಿತ: ಇಬ್ಬರು ಆರೋಪಿಗಳವಿದೇಶ ಪ್ರವಾಸಕ್ಕೆ ಕೋರ್ಟ್‌ ಅಸ್ತು