ಶಿರಾ ತಾಲೂಕಿನ ಕೆರೆಗಳಿಗೆ ಎತ್ತಿನಹೊಳೆ ನೀರು

KannadaprabhaNewsNetwork |  
Published : Feb 06, 2025, 12:16 AM IST
4ಶಿರಾ3: ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ತಾಳಗುಂದ ಗ್ರಾಮ ಪಂಚಾಯತಿ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಸರಕಾರದ ದೆಹಲಿ ವಿಶೇಷ ಪ್ರತಿನಿದಿ. ಡಾ.ಟಿ.ಬಿ. ಜಯಚಂದ್ರ ಉದ್ಘಾಟಿಸಿದರು. ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಕಳ್ಳಂಬೆಳ್ಳ ಹೋಬಳಿಯ ಮಾಯಸಂದ್ರ, ತಾಳಗುಂದ, ಭೂಪಸಂದ್ರ ಇನ್ನೂ ಅನೇಕ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸುವುದಾಗಿ ಶಾಸಕ. ಡಾ.ಟಿ.ಬಿ. ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಕಳ್ಳಂಬೆಳ್ಳ ಹೋಬಳಿಯ ಮಾಯಸಂದ್ರ, ತಾಳಗುಂದ, ಭೂಪಸಂದ್ರ ಇನ್ನೂ ಅನೇಕ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸುವುದಾಗಿ ಶಾಸಕ. ಡಾ.ಟಿ.ಬಿ. ಜಯಚಂದ್ರ ಹೇಳಿದರು.ತಾಲೂಕಿನ ತಾಳಗುಂದ ಗ್ರಾಪಂ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ, ತಾಲೂಕಿನ ಬಹುತೇಕ ಎಲ್ಲಾ ಗ್ರಾಪಂಗಳಿಗೆ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಗ್ರಾಪಂ ಕಟ್ಟಡ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಹೆಚ್ಚುವರಿಯಾಗಿ ಸರ್ಕಾರದಿಂದ 10 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದರು.ತುಮುಲ್ ನಿರ್ದೇಶಕ ಎಸ್. ಆರ್. ಗೌಡ ಮಾತನಾಡಿ, ತಾಳಗುಂದ ಗ್ರಾಮದಲ್ಲಿ ಬಾಡಿಗೆ ನಿವೇಶನದಲ್ಲಿ ಗ್ರಾಪಂ ಕಾರ್ಯ ಚಟುವಟಿಗೆ ಪ್ರಾರಂಭಿಸಿದ ಈ ಗ್ರಾಪಂಗೆ ಸ್ವಂತ ಕಟ್ಟಡವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾದಾಗ ಈ ಕುರಿತು ಮಾಹಿತಿ ಪಡೆದು ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲು ನಿವೇಶನ ಇಲ್ಲದ ನನ್ನ ಸ್ವಂತ ಹಾಗೂ ಅಮ್ಮಾ ಜಮ್ಮ ಭೀಮಣ್ಣ ಕುಟುಂಬಸ್ಥರು ಜೊತೆಯಾಗಿ ಜಮೀನನ್ನು ದಾನ ನೀಡಿದ್ದೇವೆ ಎಂದರು.

ನಿವೇಶನ ದಾನಿಗಳಾದ ತುಮುಲು ನಿರ್ದೇಶಕ ಎಸ್.ಆರ್. ಗೌಡ ಹಾಗೂ ಅಮ್ಮಾಜಮ್ಮ ಭೀಮಣ್ಣ ಕುಟುಂಬಸ್ಥರನ್ನು ಗೌರವಿಸಲಾಯಿತು. ಸರೋಜಮ್ಮ ದೊಡ್ಡ ರಂಗಯ್ಯ, ಕೆ.ಪುಷ್ಪಲತಾ ಗೋವಿಂದರಾಜು, ಹರೀಶ್, ಕಾಂತರಾಜು, ಭೀಮಯ್ಯ, ಸುಮ, ಚಿಕ್ಕ ಕರಿಯಪ್ಪ, ಶಿವನಂಜಯ್ಯ, ಕೆ.ಆರ್. ಗಂಗಾಧರ್, ಸಿ.ಜೆ. ಸರೋಜ, ರಂಗನಾಥ್, ಜ್ಯೋತಿ ಎಚ್. ಕೆ. ರಾಜಣ್ಣ, ಡಿ.ಎಲ್. ರಾಜಣ್ಣ, ಕೃಷ್ಣಯ್ಯ, ರಂಗನಾಥ್ ಗೌಡ, ಲಲಿತಾ ಮಂಜುನಾಥ್, ನಾಗೇಂದ್ರಪ್ಪ, ಚಿಕ್ಕನಹಳ್ಳಿ ಶಶಿಧರ್ , ಯಲದಬಾಗಿ ನವೀನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಂತಿ ಸ್ಥಾಪನೆಗೆ ಮಾತುಕತೆಯೊಂದೆ ದಾರಿ: ಜ. ಅಬ್ದುಲ್ ನಜೀರ್‌
ಕುರುಗೋಡಿನಲ್ಲಿ ಕೆಟ್ಟು ನಿಂತ ಶುದ್ಧ ಕುಡಿವ ಘಟಕ: ಜನರ ಪರದಾಟ