ರಾಮನಗರ: ಬಿಡದಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ತೊಡಕಿನಿಂದಾಗಿ ನೂತನ ಜನಪ್ರತಿನಿಧಿಗಳು ಆಯ್ಕೆಯಾಗಿ 2 ವರ್ಷ ಕಳೆದರೂ ಆಡಳಿತ ಯಂತ್ರದಿಂದ ದೂರವೇ ಉಳಿಯುವಂತಾಗಿದೆ.
2021ರ ಜೂನ್ 20ರಂದು ಪುರಸಭೆಯಲ್ಲಿ ಜನಪ್ರತಿನಿಧಿಗಳ ಅವಧಿ ಪೂರ್ಣಗೊಂಡಿತ್ತು. ಇದಾದ 5 ತಿಂಗಳ ನಂತರ ಪುರಸಭೆಗೆ ಚುನಾವಣೆ ನಡೆದು ಡಿಸೆಂಬರ್ ನಲ್ಲಿಯೇ ಫಲಿತಾಂಶ ಪ್ರಕಟಗೊಂಡಿತು. ಕಳೆದ 2 ವರ್ಷಗಳಿಂದ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯೇ ನಿಗದಿಯಾಗಿಲ್ಲ. ನೂತನ ಜನಪ್ರತಿನಿಧಿಗಳು ಇದಕ್ಕೆ ಕಾರಣ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಪೌರಾಡಳಿತ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೀಸಲಾತಿ ನಿಗದಿ ವಿಚಾರ ನ್ಯಾಯಾಲಯದಲ್ಲಿದೆ ಎಂದಷ್ಟೇ ಉತ್ತರಿಸುತ್ತಿದ್ದಾರೆ.
ಪುರಸಭೆ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಜನಪ್ರತಿನಿಧಿಗಳ ಆಡಳಿತಕ್ಕೆ ವಿಘ್ನಗಳು ಎದುರಾಗುತ್ತಲೇ ಇದೆ. ಪುರಸಭೆಗೆ ನಡೆದ ಮೊದಲ ಚುನಾವಣೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಜನಪ್ರತಿನಿಧಿಗಳು 30 ತಿಂಗಳು ಸುಸೂತ್ರವಾಗಿ ಅಧಿಕಾರ ನಡೆಸಿದ್ದರು. ಆನಂತರ ಎರಡನೇ ಅವಧಿಗೆ ಮೀಸಲಾತಿ ನಿಗದಿ ವಿಳಂಬವಾಗಿದ್ದರಿಂದ ಅಲ್ಪಾವಧಿ ಅಧಿಕಾರ ದೊರಕಿತು.ಪುರಸಭೆ ವ್ಯಾಪ್ತಿಯಲ್ಲಿನ ಜನರು ಪ್ರತಿನಿತ್ಯ ಖಾತೆ ಮಾಡಿಸಿಕೊಳ್ಳಲು ಅಲೆದಾಡುತ್ತಿದ್ದಾರೆ. ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಇ - ಖಾತೆ ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತಿಲ್ಲ.
ಇನ್ನು ಹಾಲಿ ಶಾಸಕ ಬಾಲಕೃಷ್ಣರವರು ಮಾಜಿ ಆಗಿದ್ದಾಗ ಅನುದಾನ ತಾರತಮ್ಯ ವಿಚಾರವನ್ನು ಮುಂದಿಟ್ಟುಕೊಂಡು ಪುರಸಭೆ ಆಡಳಿತದ ವಿರುದ್ಧ ಹೋರಾಟ ನಡೆಸಿದ್ದರು. ಈಗ ಅವರೇ ಶಾಸಕರಾಗಿದ್ದರು ಸಹ ಪುರಸಭೆ ಆಡಳಿತಕ್ಕೆ ವೇಗ ನೀಡುತ್ತಿಲ್ಲವೇಕೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ಬಾಕ್ಸ್ ..............
ಪುರಸಭೆಯ 23 ವಾರ್ಡುಗಳ ಪೈಕಿ ಜೆಡಿಎಸ್ - 14 ಹಾಗೂ ಕಾಂಗ್ರೆಸ್ - 09 ವಾರ್ಡ್‌ಗಳಲ್ಲಿ ಗೆಲವು ಸಾಧಿಸಿದ್ದು, ಬಿಜೆಪಿ ಖಾತೆ ತೆರೆದಿಲ್ಲ. 14 ಸದಸ್ಯ ಬಲ ಹೊಂದಿರುವ ಜೆಡಿಎಸ್ ಅಧಿಕಾರದ ಗದ್ದುಗೆ ಹಿಡಿಯಲು ಸ್ಪಷ್ಟ ಬಹುಮತ ಹೊಂದಿದೆ. ಆದರೂ ಆಪರೇಷನ್ ಹಸ್ತದ ಮೂಲಕ ರಾಜಕೀಯ ದಾಳ ಉರುಳಿಸಿ ಪುರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೀಸಲು ನಿಗದಿಯಾಗಿ ಚುನಾವಣೆ ಘೋಷಣೆಯಾದ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ.ಬಾಕ್ಸ್ ..........
ಅಧಿಕಾರವಿಲ್ಲ ಎಂದ ಮಾತ್ರಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಆಯ್ಕೆಯಾದವರ ಹೊಣೆಗಾರಿಕೆ ತಪ್ಪಿಲ್ಲ. ವಾರ್ಡಿನಲ್ಲಿ ತಲೆದೋರುವ ಪ್ರತಿಯೊಂದು ಸಮಸ್ಯೆ ಕುರಿತು ಜನರು ಕಾರ್ಪೋರೇಟರ್‌ಗಳ ಗಮನಕ್ಕೆ ತಂದು ಪರಿಹರಿಸುವಂತೆ ಒತ್ತಡ ಹೇರುತ್ತಿದ್ದಾರೆ. ಅಧಿಕಾರ ಇದ್ದಿದ್ದರೆ ಅಧಿಕಾರಿಗಳಿಂದ ಕೆಲಸ ಮಾಡಬಹುದಿತ್ತು. ಆದರೆ, ಈಗ ಅವರು ಕೂಡ ಜನಸಾಮಾನ್ಯರಂತೆ ಮೇಲಾಧಿಕಾರಿಗಳ ಬೆನ್ನಿಗೆ ಬಿದ್ದು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ಜನರ ಆಕ್ರೋಶ ಎದುರಿಸುವುದು ಅನಿವಾರ್ಯವಾಗುತ್ತದೆ. ಒಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರ ಎಂಬುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾಲಿಗೆ ಬಿಸಿ ತುಪ್ಪದಂತಾಗಿದೆ.ಕೋಟ್ .................
- ಸಿ. ಉಮೇಶ್, ನೂತನ ಸದಸ್ಯರು, ಬಿಡದಿ ಪುರಸಭೆ
1.ಬಿಡದಿ ಪುರಸಭೆ
2.ಸಿ.ಉಮೇಶ್ , ಸದಸ್ಯರು, ಬಿಡದಿ ಪುರಸಭೆ