ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದ ಬಳಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ದೇಶದ ಸಂಸ್ಕಾರ-ಸಂಸ್ಕೃತಿ ಉಳಿಸಲು ನಾವು ಏನು ಅಂದುಕೊಂಡಿದ್ದೇವೋ ಅದನ್ನೇ ಮಾಡುತ್ತಿದ್ದೇವೆ. ರಾಮಜನ್ಮಭೂಮಿ ಹೋರಾಟ ಮಾಡಿ, ರಾಮಮಂದಿರ ಕಟ್ಟಿದ್ದೇವೆ. ಆರ್ಟಿಕಲ್ 370ನ್ನು ರದ್ದುಮಾಡಿದ್ದೇವೆ. ಇನ್ನು ಕಾಮನ್ ಸಿವಿಲ್ ಕೋಡ್ (ಏಕರೂಪ ನಾಗರೀಕ ಸಂಹಿತೆ) ತರುವುದು ಬಾಕಿ ಇದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷ ಕಳೆದಿದೆ. ಇದು ಸುವರ್ಣಾಕ್ಷರದಲ್ಲಿ ಬರೆಯಬೇಕಾದ ಕಾಲಘಟ್ಟವಾಗಿದೆ. 2047ಕ್ಕೆ ಈ ದೇಶ ವಿಕಸಿತ ಭಾರತ ಆಗಬೇಕು. ಅದರ ಆಧಾರದಲ್ಲಿ ವಿಶ್ವಗುರು ಆಗಬೇಕು ಎಂಬ ದೃಢ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಗ್ರಾಮ ಸಡಕ್ ಮತ್ತು ಚಂದ್ರಯಾನ ಮುಂತಾದ ಬೃಹತ್ ಯೋಜನೆಯ ಜೊತೆಗೆ ಪಂ.ದೀನ್‌ದಯಾಳ್ ಉಪಾಧ್ಯಾಯರ ಸಂಕಲ್ಪದಂತೆ ಸಮಾಜದ ಕಟ್ಟಕಡೆಯ ಮನುಷ್ಯನ ಅಭಿವೃದ್ಧಿಯಾಗುವ ಗುರಿಯನ್ನು ಹೊಂದಿದ್ದೇವೆ. ಸಬ್‌ಕಾ ಸಾತ್-ಸಬ್‌ಕಾ ವಿಕಾಸ್-ಸಬ್‌ಕಾ ವಿಶ್ವಾಸ್-ಸಬ್‌ಕಾ ಪ್ರಯಾಸ್ ವಿಕಸಿತ ಭಾರತವೇ ನಮ್ಮ ಗುರಿಯಾಗಿದೆ. ಸ್ವಚ್ಛ ಭಾರತ್ ಜೊತೆಗೆ ಸ್ವಚ್ಛ ಕಾರ್ಯಾಲಯ ಎನ್ನುವ ಯೋಜನೆಯನ್ನು ಹಮ್ಮಿಕೊಂಡಿದ್ದು, ನಿನ್ನೆಯಿಂದಲೇ ದೇಶದ ಎಲ್ಲಾ ಬಿಜೆಪಿ ಕಾರ್ಯಾಲಯಗಳನ್ನು ಸ್ವಚ್ಛಮಾಡಿ, ರಂಗೋಲಿ ಹಾಕಿ, ಸಿಂಗರಿಸಿ, ಬಿಜೆಪಿ ಜನ್ಮದಿನವನ್ನು ಆಚರಿಸಿದ್ದೇವೆ. ಇಂದು ನಮ್ಮ ಪ್ರತಿ ಬೂತ್ ಅಧ್ಯಕ್ಷನ ಮನೆಯ ಮೇಲೆ ಧ್ವಜಾರೋಹಣ ಮಾಡಿ, ಪಕ್ಷ ಸಂಘಟನೆಯ ಕೆಲಸ ಮಾಡುತ್ತಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಪ್ರಮುಖರಾದ ಎಸ್.ದತ್ತಾತ್ರಿ, ಅಶೋಕ್‌ನಾಯಕ್, ಜ್ಞಾನೇಶ್ವರ್, ಮೋಹನ್ ರೆಡ್ಡಿ, ಮಾಲತೇಶ್, ಸಿಂಗನಹಳ್ಳಿ ಸುರೇಶ್, ಸುರೇಖಾ ಮುರಳೀಧರ್, ಅಣ್ಣಪ್ಪ, ಯಶೋಧ, ಚೈತ್ರಾ ನಾಯಕ್, ಜ್ಯೋತಿಪ್ರಕಾಶ್, ಚಂದ್ರಶೇಖರ್, ಮಂಜುನಾಥ್ ಮೊದಲಾದವರಿದ್ದರು.