ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಕನ್ನಡ ಕಾರ್ಯಕ್ರಮಗಳಿಗಾಗಿ ಅನುಕೂಲ ಕಲ್ಪಿಸಲು ಭವನ ನಿರ್ಮಾಣ ಆರಂಭಿಸಲಾಗಿತ್ತು. ಈ ಭವನದ ಮುಭಾಗದಲ್ಲಿ ಬಡಾವಣೆಯ ತ್ಯಾಜ್ಯವನ್ನೆಲ್ಲ ತಂದು ಸುರಿಯುವುದರಿಂದ ಗಬ್ಬು ನಾರುತ್ತಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಡಾಡುವ ಪರಿಸ್ಥಿತಿ ಉಂಟಾಗಿದೆ. ಮತ್ತು ಕಟ್ಟಡದಲ್ಲಿ ಮತ್ತು ಸುತ್ತಲೂ ಜಾಲಿಗಿಡಗಳು, ಗಿಡ-ಗಂಟುಗಳು ಬೆಳೆದು ಪೊದೆಗಳಾಗಿವೆ. ಮೇಲ್ಚಾವಣಿಯಲ್ಲಿ ಮಳೆ ನೀರು ನಿಂತು ಪಾಚಿಕಟ್ಟಿಕೊಂಡಿದೆ. ಕಟ್ಟಡದಲ್ಲಿ ಅಲ್ಲಲ್ಲಿ ಸೀಮೆಂಟ್ ಉದುರುತ್ತಿದೆ. ಅನೈತಿಕ ಚಟುವಟಿಕೆಗಳ ತಾಣ
ಸಂಜೆ ಯಾಗುತ್ತಿದ್ದಂತ ಕಟ್ಟಡ ಮದ್ಯಪ್ರಿಯರು ಅಡ್ಡೆಯಾಗುತ್ತದೆ. ಕುಡಿದು ಅಲ್ಲೇ ಬಾಟಲಿಗಳನ್ನು ಎಸೆಯುತ್ತಾರೆ, ಮಲ-ಮೂತ್ರ ವಿಸರ್ಜನೆಯನ್ನೂ ಅಲಲ್ಲಿಯೇ ಮಾಡುತ್ತಿದ್ದ ಗಬ್ಬುನಾರುತ್ತಿದೆ. ಅಲ್ಲದೆ ಜೂಜುಕೋರರು ಜೂಜಾಡಲು ಿದೇ ಸ್ಥಳವನ್ನೇ ಬಳಸಿಕೊಳ್ಳುತ್ತಿದ್ದಾರೆ. ಕೆಲ ಅನಾಥರು ಖಾಲಿ ಇರುವ ಜಾಗವನ್ನೇ ಮನೆಯನ್ನಾಗಿಸಿ ಕೊಂಡು ವಾಸಿಸುತ್ತಿದ್ದಾರೆ. ದಿನನಿತ್ಯ ಇಂತಹ ಅಕ್ರಮ ಚಟುವಟಿಕೆಗಳಿ ಇಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ಅಕ್ಕ-ಪಕ್ಕದ ಮನೆಯವರಿಗೆ ಕಿರಿಕಿರಿ ಉಂಟುಮಾಡುತ್ತಿದೆ.ಪಕ್ಕದಲ್ಲಿದೆ ಬಾಲಕಿಯರ ಹಾಸ್ಟೆಲ್
ಕಾಸಾಪಾ ಮಾಜಿ ಅಧ್ಯಕ್ಷ ನಂಜುಂಡಪ್ಪ ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿಗಳಿಂದ 12 ಲಕ್ಷ ರು.ಗಳ ಅನುದಾನವು ಬಿಡುಗಡೆಯಾಗಿದೆ. ಆ ಹಣದಲ್ಲಿ ಸಿಮೆಂಟ್ ಪ್ಲಾಸ್ಟಿಂಗ್, ಕಿಟಕಿ ಬಾಗಿಲುಗಳನ್ನು ಸರಿಪಿಡಿಸುವುದು ಮತ್ತು ಬಾಕಿ ಇರುವ ಕಾಮಗಾರಿಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.ಗಡಿಭಾಗದಲ್ಲಿ ಇಂತಹದ್ದೊಂದು ಭವನ ನಿರ್ಮಿಸಿ ಕನ್ನಡಪರ ಕಾರ್ಯಕ್ರಮಗಳು ಹಾಗೂ ಸಾಹಿತ್ಯ ಚಟುವಟಿಕೆನಡೆಸಲು ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಪ್ರಾರಂಭವಾದ ಸಾಹಿತ್ಯಭವನದ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಕನ್ನಡಾಭಿಮಾನಿಗಳಲ್ಲಿ ನಿರಾಸೆಮೂಡಿಸಿದೆ. ಅಗತ್ಯ ಅನುದಾನ ಒದಗಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎದರಿಂದ ಗಡುನಾಡಿನಲ್ಲಿ ಕನ್ನಡದ ಹಿರಿಮೆಗೆ ಗರಿ ಮೂಡಲಿದೆ ಎಂಬುದು ಗಡಿನಾಡ ಕನ್ನಡಿಗರ ಅಭಿಲಾಷೆಯೂ ಹೌದು.