ಹೃದಯವಂತಿಕೆ ಇಲ್ಲದಿದ್ದರೆ ಬದುಕಿದ್ದರೂ ಸತ್ತಂಗೆ

KannadaprabhaNewsNetwork |  
Published : Jan 07, 2026, 02:30 AM IST
6ಕೆಪಿಎಲ್17:ಕೊಪ್ಪಳ ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಭಕ್ತ ಹಿತಚಿಂತನಾ ಸಭೆಯಲ್ಲಿ ಸಾಹಿತಿ ಹಾಗೂ ಪ್ರಖ್ಯಾತ ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಈಶ್ವರಪ್ಪ ಬಾಳೇಕುಂದ್ರಿ ಮಾತನಾಡಿದರು.  | Kannada Prabha

ಸಾರಾಂಶ

ಇಂದು ಎಷ್ಟೋ ಮಕ್ಕಳು ಸಾಧನೆಯಲ್ಲಿದ್ದಾರೆ

ಕೊಪ್ಪಳ: ಅನ್ಯೋನತೆ ಕಲ್ಪಿಸುವುದು ಹೃದಯ. ಹೃದಯವಂತಿಕೆ ಇಲ್ಲದಿದ್ದರೆ ಬದುಕಿದ್ದರೂ ಸತ್ತಂಗೆ ಎಂದು ಸಾಹಿತಿ ಹಾಗೂ ಪ್ರಖ್ಯಾತ ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಈಶ್ವರಪ್ಪ ಬಾಳೇಕುಂದ್ರಿ ಹೇಳಿದರು.

ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಭಕ್ತ ಹಿತಚಿಂತನಾ ಸಭೆಯಲ್ಲಿ ಆರೋಗ್ಯ ಸಲಹೆ ಬಗ್ಗೆ ಮಾತನಾಡಿದ ಅವರು, ಭವಸಾಗರ ದಾಟಲು ಭಕ್ತ ಸಾಗರಬೇಕು.ಭಕ್ತಿ,ಶಕ್ತಿ ಗವಿಮಠದಲ್ಲಿದೆ. ಸತ್ಯ, ಶುದ್ಧವಾಗಿ ಕಾಯಕ ಮಾಡಿದಾಗ ಕೇಳದೆ ಎಲ್ಲವೂ ಬರುತ್ತದೆ.ಲೈಫ್ ಟೈಮ್ ಅಚಿವಮೆಂಟ್ ಅವಾರ್ಡ ಪಡೆದಿದ್ದಕ್ಕಿಂತ ಗವಿಮಠದ ಈ ಜಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವುದು ಸಂತಸ ತಂದಿದೆ. ತೂರು ನಳಿಕೆ ಮೂಲಕ ಶಸ್ತ್ರ ಚಿಕಿತ್ಸೆ ಇಲ್ಲದೆ ಹೃದಯ ರೋಗ ಸರಿಪಡಿಸಿದ್ದೇನೆ.ಇಂದು ಎಷ್ಟೋ ಮಕ್ಕಳು ಸಾಧನೆಯಲ್ಲಿದ್ದಾರೆ. ಭಕ್ತರ ಆರೋಗ್ಯ ಹಾಗೂ ಭಾಗ್ಯಕ್ಕಾಗಿ ಶ್ರೀಗಳು ಭಕ್ತಹಿತಚಿಂತನೆ ಏರ್ಪಡಿಸಿದ್ದಾರೆ. ಆರೋಗ್ಯ ಉಳಿಸಿಕೊಂಡರೆ ಅದುವೇ ಭಾಗ್ಯ.ಆರೋಗ್ಯ ಪಾಲಿಸಲು, ಆರೋಗ್ಯ ಅಂದರೆ ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರ ಆರು ಗುಣಗಳನ್ನು ಗೆಲ್ಲಬೇಕು ಎಂದರು.

ಕಾಮ ವಿಕಾರದಿಂದ ಕೆಟ್ಟತನ ಆಗುತ್ತದೆ. ಕ್ರೋಧದಿಂದ ರಕ್ತದೊತ್ತಡ ಹೆಚ್ಚುತ್ತದೆ.ಇದರಿಂದ ಪ್ಯಾರಾಲಿಸಸ್ ಆಗುವ ಸಂಭವ ಹೆಚ್ಚು.ಸುಖ ಶಾಂತಿ ಇರುವ ಕುಟುಂಬದಲ್ಲಿ ಆರೋಗ್ಯ ಇರುತ್ತದೆ.ಹೃದಯವಂತಿಕೆ ಇಲ್ಲದಿದ್ದರೆ ಬದುಕಿದ್ದರೂ ಸತ್ತಂಗೆ ಅನ್ಯೋನತೆ ಸಂಬಂಧ ಕಲ್ಪಿಸುವುದು ಹೃದಯ. ಅದನ್ನು ಕಾಯ್ದುಕೊಳ್ಳಬೇಕು ಎಂದರು.

ಲೋಭದಿಂದ ಮಾಲಿನ್ಯ ಆಗುತ್ತಿದೆ.ಸ್ವಾರ್ಥಕ್ಕಾಗಿ ಪರಿಸರ ಹಾಳಾಗುತ್ತಿದೆ. ಕೊಪ್ಪಳದ ಸುತ್ತಮುತ್ತ ಸುಚಿತ್ವ ವಾತಾವರಣ ಇರಬೇಕು. ಸುಚಿತ್ವವೇ ದೈವತ್ವ ಎಂದರು.

ಮೋಹದಿಂದ ಜಗತ್ತು ಹಾಳಾಗುತ್ತಿದೆ.ಮನಸ್ಸನ್ನು ದುರಾಸೆ ಕಡೆ ಒಯ್ದು ಅನಾರೋಗ್ಯಕ್ಕೆ ಹೋಗಬಾರದು. ಮೋಹ ಎಂಬುದು ಕೆಟ್ಟದ್ದು. ಶಾಲಾ, ಕಾಲೇಜಿನಲ್ಲಿ 28% ಡ್ರಗ್ಸ್, ಕುಡಿತಕ್ಕೆ ಒಳಗಾಗಿದ್ದಾರೆ. ದುಶ್ಚಟ ಯುವಕರು ಬಿಡಬೇಕು. ನಾವು ಚಿಂತೆ ಮಾಡುವುದು ಬಿಟ್ಟು ಚಿಂತನೆ ಮಾಡಬೇಕು. ಹೇಡಿಯಾಗದೇ ಬದುಕು ಕಟ್ಟಿಕೊಳ್ಳಬೇಕು. ಕಷ್ಟ ಎಂದು ಬೇರೆಯವರ ಬಳಿ ಹೇಳಿಕೊಳ್ಳದೆ ಸಮಾಧಾನ ಮಾಡಿಕೊಂಡು ಉತ್ತಮರಾಗಿರಬೇಕು.

ಮತ್ಸರ ಎಂಬುದು ಹೊಟ್ಟೆಕಿತ್ತು. ಮದ್ದಿಲ್ಲದ ರೋಗ ಹೊಟ್ಟೆಕಿಚ್ಚು.ಇದರಿಂದ ದೇಹದಲ್ಲಿ ಹೈಡ್ರೋಪೊಲಿಕ್ ಆಸಿಡ್ ದೇಹದಲ್ಲಿ ಉತ್ಪಾದನೆ ಆಗಿ,ದೇಹಕ್ಕೆ ತೊಂದರೆ ಆಗುತ್ತದೆ.ಮನಸ್ಸನ್ನು ಮಹಾದೇವನ್ನಾಗಿ ಮಾಡಿಕೊಳ್ಳಬೇಕು ಎಂದರು.

ಸಾಕು ಎನ್ನುವ ಭಾವದಿಂದ ಗವಿಸಿದ್ದೇಶ್ವರರ ಭಕ್ತರಾಗಬೇಕು. ಮನಸ್ಸು ಹಗುರವಾಗಿಟ್ಟುಕೊಂಡರೆ ಮಾತ್ರ ಉತ್ತಮ ಆರೋಗ್ಯ.ಅಭಿನವ ಗವಿಶ್ರೀಗಳು ಮಾನವನಿಂದ ಮಹಾದೇವರಾಗಿದ್ದಾರೆ ಎಂದರು.

ಈ ವೇಳೆ ಕೇರಳದ ಕೊಲ್ಲಂನ ಮಹಿಳೆ ರಮಾಬಾಯಿ ಅವರು ಮನೆಯ ೧೭೦೦ಚದರ ಅಡಿಯ ಮೇಲ್ಚಾವಣಿ ಮೇಲೆ ಮಣ್ಣು ಇಲ್ಲದೆ ವೇಸ್ಟ್ ಕಾಂಪೋಸ್ಟ್ ಹಾಕಿ ೧೭೦೦ಡ್ರ್ಯಾಗನ್ ಗಿಡ ಹಚ್ಚಿ ತಿಂಗಳಿಗೆ ಲಕ್ಷ ಆದಾಯ ಗಳಿಸುವ ಸಾಧಕರಾದ ಕೇರಳದ ಕೊಲ್ಲಂನ ಮಹಿಳೆ ರಮಾಬಾಯಿ ಅವರನ್ನು ಗವಿಶ್ರೀಗಳು ಸನ್ಮಾನಿಸಿದರು. ಮಹಾಲಿಂಗಪೂರದ ಚಿಮ್ಮಡದ ಗ್ರಾಮಸ್ಥರು ಜಾತ್ರೆ ಬರುವ ಲಕ್ಷಾಂತರ ಭಕ್ತರ ಪಾದರಕ್ಷೆ ಕಾಯ್ದು, ಗ್ರಾಮದ ಅಭಿವೃದ್ಧಿ ಮಾಡಿದ ಗ್ರಾಮದ ಹಿರಿಯರೊಬ್ಬರಿಗೆ ಸಹ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ