ಹರಿಹರಪುರದಲ್ಲಿ ಬ್ರಹ್ಮೋತ್ಸವದ ಪ್ರಯುಕ್ತ 2ನೇ ದಿನದ ಧರ್ಮಸಭೆ ಉದ್ಘಾಟನೆಕನ್ನಡಪ್ರಭ ವಾರ್ತೆ, ಹರಿಹರಪುರ (ಚಿಕ್ಕಮಗಳೂರು)
ಹರಿಹರಪುರದಲ್ಲಿ ಬ್ರಹ್ಮೋತ್ಸವದ ಪ್ರಯುಕ್ತ 2ನೇ ದಿನವಾದ ಶನಿವಾರ ನಡೆದ ಧರ್ಮಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮಲ್ಲಿ ಧರ್ಮ ಸಂಘರ್ಷಗಳು ನಡೆಯುತ್ತಿವೆ. ಅದನ್ನು ತಾಳ್ಮೆಯಿಂದ ನಿವಾರಣೆ ಮಾಡಬೇಕು. ಧರ್ಮ, ಪಂಥ ಆಚರಣೆ ಮಾಡಿ, ಆದರೆ, ನಾವೆಲ್ಲಾ ಒಂದು ಎಂಬ ಭಾವನೆ ಮರೆಯಬಾರದು ಎಂದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಶ್ರೀ ಸರ್ಪ ಭೂಷಣ ಮಠದ ಪೀಠಾಧಿಪತಿ ಶ್ರೀ ನಿರಂಜನ ಪ್ರಣವ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಜನ್ಮ ಎಲ್ಲಾ ಜನ್ಮಕ್ಕಿಂತಲೂ ಶ್ರೇಷ್ಠವೆಂದು ಪ್ರತಿಯೊಬ್ಬರು ಪ್ರತಿಪಾದಿಸಿದ್ದಾರೆ. ಸಾಧನೆಯಿಂದ ಮಾತ್ರ ಜನ್ಮ ಶ್ರೇಷ್ಠವಾಗಲು ಸಾಧ್ಯ. ಹಾಗಾಗಿ ಮನುಷ್ಯ ಏನು ಸಾಧನೆ ಮಾಡಬೇಕು. ಹೇಗೆ ಸಾಧನೆ ಮಾಡಬೇಕು. ಆ ಮಾರ್ಗವನ್ನು ಅವಲೋಕಿಸುತ್ತಾ ಯಾವುದು ಸತ್ಯ, ಯಾವುದು ಮಿತ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.ಪರಮಾತ್ಮ ಯಾವ ಸ್ವರೂಪದಲ್ಲಿದ್ದಾನೆ ಎಂದು ತಿಳಿಯುವ ವಿವೇಕ ನಮ್ಮಲ್ಲಿ ಇರಬೇಕು. ಮನುಷ್ಯ ಶ್ರೇಷ್ಠತೆ ಹೊಂದಲು ಆಂತರಿಕ ಸಾಧನೆ ಮಾಡಬೇಕು. ಸಂಸ್ಕಾರದಿಂದ ಜ್ಞಾನ ಬರಲು ಸಾಧ್ಯ. ಸಂಸ್ಕಾರದಿಂದ ಜೀವನ ಮುಕ್ತಿ ಆಗುತ್ತದೆ. ಜೀವನದಲ್ಲಿ ಶಿಸ್ತಿನ ಪಥ ಬಿಡಬಾರದು. ಭಾರತೀಯ ಧರ್ಮವನ್ನು ವಿಶ್ವಕ್ಕೆ ಸಾರಿ ಸಾರಿ ಹೇಳಬೇಕು ಎಂದರು.
ಬೆಳಿಗ್ಗೆ ಶ್ರೀಮಠದಲ್ಲಿ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪತ್ರಕರ್ತ ಶಾಮ್ ಸುದರ್ಶನ್, ತೆಲುಗು ಚಿತ್ರರಂಗದ ನಿರ್ಮಾಪಕ ಕೊರ್ರಾ ಪಾಟಿ ಸಾಯಿರವರು ಪಾಲ್ಗೊಂಡಿದ್ದರು. ಸಾಹಿತಿ ಕಲ್ಕಟ್ಟೆ ನಾಗರಾಜ್, ಕೃಷಿಕ ಕಳಸಾದ ಬಿ.ಕೆ. ಮಂಜಪ್ಪಯ್ಯ, ಹರಿಹರಪುರ ಮಠದ ಆಸ್ಥಾನ ವಿಶ್ವಕರ್ಮ ನಾಗರಾಜ್ ಆಚಾರ್ ರನ್ನು ಸನ್ಮಾನಿಸಲಾಯಿತು. ಶ್ರೀಮಠದ ಆಡಳಿತಾಧಿಕಾರಿ ಡಾ. ಬಿ.ಎಸ್. ರವಿಶಂಕರ್ ಮಾತನಾಡಿದರು.
20 ಕೆಸಿಕೆಎಂ 6ಹರಿಹರಪುರದಲ್ಲಿ ಬ್ರಹ್ಮೋತ್ಸವದ ಪ್ರಯುಕ್ತ ಶನಿವಾರ ನಡೆದ ಧರ್ಮಸಭೆಯನ್ನು ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಮಹಾಸ್ವಾಮೀಜಿ, ಶ್ರೀ ಸರ್ಪ ಭೂಷಣ ಮಠದ ಪೀಠಾಧಿಪತಿ ಶ್ರೀ ನಿರಂಜನ ಪ್ರಣವ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಇದ್ದರು.