ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪದವೀಧರರ ಕ್ಷೇತ್ರಕ್ಕೆ ಈ ಬಾರಿ ನಡೆದ ಚುನಾವಣೆ ರೀತಿ ಹಿಂದೆಂದೂ ನಡೆದಿರಲಿಲ್ಲ. ಮತದಾನದವರೆಗೆ ಗುಂಡು-ತುಂಡು ಪಾರ್ಟಿಗಳು ಜೋರಾಗಿ ನಡೆದಿವೆ. ಇದರ ಮಧ್ಯೆಯೂ ಪದವೀಧರರು ನನ್ನನ್ನು ಬೆಂಬಲಿಸಿದ್ದು, ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದರು.
ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಗುರುವಾರ ಫಲಿತಾಂಶ ಹೊರಬೀಳಲಿದ್ದು, ಈ ಬಾರಿ ಕಾಂಗ್ರೆಸ್‍ನ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತೇವೆ. ಕಳೆದ ಬಾರಿಗಿಂತ ಈ ಬಾರಿ ಸುಮಾರು 20 ಸಾವಿರ ಹೆಚ್ಚು ಮತದಾನವಾಗಿದೆ. 85 ಸಾವಿರ ಮತದಾರರಿದ್ದರು. 69 ಸಾವಿರ ಮತ ಚಲಾವಣೆಯಾಗಿದೆ. ಎಲ್ಲಾ ಕಡೆ ಒಳ್ಳೆ ವಾತಾವರಣವಿತ್ತು. ನಾನು ಸೇರಿ ಶಿಕ್ಷಕರ ಕ್ಷೇತ್ರದ ಡಾ.ಕೆ.ಕೆ. ಮಂಜುನಾಥ್ ಕೂಡ ಗೆಲ್ಲಲಿದ್ದಾರೆ ಎಂದರು.ಹೋರಾಟ ಮತ್ತು ಹಣದ ನಡುವೆಯ ಚುನಾವಣೆ ಇದಾಗಿತ್ತು. ಎರಡು ಪಕ್ಷಗಳಲ್ಲಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ನೀಡಿದ್ದರು. ನನಗೆ ಬಿಜೆಪಿ ಅಭ್ಯರ್ಥಿಗಿಂತ ಬಂಡಾಯ ಅಭ್ಯರ್ಥಿಯಾಗಿದ್ದ ರಘುಪತಿಭಟ್ ಅವರೇ ಪೈಪೋಟಿ ನೀಡಿದ್ದಾರೆ ಎನಿಸಿದೆ. ನಾನು ಮೊದಲ ಸ್ಥಾನದಲ್ಲಿದ್ದೇನೆ. ನಂತರ ಸ್ಥಾನದಲ್ಲಿ ಉಳಿದವರು ಇದ್ದಾರೆ ಎಂದರು.
ಶಿವಮೊಗ್ಗದಲ್ಲಿ ಮೋದಿ ಗೆದ್ದರು, ದೇಶದಲ್ಲಿ ಮೋದಿ ಗೆಲ್ಲಲು ಆಗಲಿಲ್ಲ. 400ಕ್ಕೂ ಹೆಚ್ಚು ಸೀಟು ಪಡೆಯುತ್ತೇವೆ ಎಂದಿದ್ದರು, ಆದರೆ ಸರಳ ಬಹುಮತವು ಬರಲಿಲ್ಲ. ಶ್ರೀರಾಮನನ್ನು ಮಧ್ಯ ತಂದರು. ಅದು ಕೆಲಸ ಮಾಡಲಿಲ್ಲ. ಉತ್ತರ ಪ್ರದೇಶದಲ್ಲಿ ಅವರು 35 ಸ್ಥಾನ ಕಳೆದುಕೊಂಡಿದ್ದಾರೆ ಎಂದರು.
ಭಾವನೆಗಳ ಮೇಲೆ ಗೆಲ್ಲುವ ಅಧ್ಯಯನ ಮೋದಿ ಪಾಲಿಗೆ ಮುಗಿದಿದೆ. ಭಾವನೆಯೇ ಬೇರೆ, ಬದುಕೆ ಬೇರೆ. ಈಗ ಮೋದಿಯವರು ಬೇರೆಯವರ ಹೆಗಲ ಮೇಲೆ ಕೈಯಿಟ್ಟು ನಡೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ಅಹಂಗೆ ತಕ್ಕ ಪಾಠವಾಗಿದೆ. ಜನರು ಬಿಜೆಪಿ ತಿರಸ್ಕರಿಸಿ ಕಾಂಗ್ರೆಸ್‍ಗೆ ಪುರಸ್ಕಾರ ಮಾಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರದ ಫಲಿತಾಂಶ ಕಾಂಗ್ರೆಸ್ ಪಾಲಿಗೆ ಉತ್ತಮವಾಗಿಯೇ ಇದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಜಿ.ಪದ್ಮನಾಭ್, ಲಕ್ಷ್ಮಣಪ್ಪ, ಮಲ್ಲೇಶ್, ಧೀರರಾಜ್ ಹೊನ್ನಾವಿಲೆ ಇದ್ದರು.