ರಾಣಿಬೆನ್ನೂರು: ಪೌರಾಣಿಕ ಯುಗದಿಂದ ಇಂದಿನ ಮೊಬೈಲ್ ಯುಗದವರೆಗೂ ಜಾನಪದ ಕಲೆಗೆ ಪ್ರಾಮುಖ್ಯವಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ ಹೇಳಿದರು.
ಹಿಂದಿನ ಕಾಲದಲ್ಲಿ ಹೊಲ ಗದ್ದೆಯಲ್ಲಿ, ಕೃಷಿ ಮಾಡುವಾಗ, ಮದುವೆ, ಜಾತ್ರೆ, ಮನೆಯಲ್ಲಿ ನಡೆಯುವ ಶುಭ ಸಮಾರಂಭದಲ್ಲಿ ಜಾನಪದ ಹಾಡು ಹೇಳಿಕೊಂಡು ಕೆಲಸ ಮಾಡುತ್ತಿದ್ದರು. ಇಂದಿನ ಕಾಲಘಟ್ಟದಲ್ಲಿ ಅವುಗಳು ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾನಪದ ಮೂಲ ಸೊಗಡುಗಳನ್ನು ಪ್ರತಿಬಿಂಬಿಸುವ ಕಲೆಗಳಿಗೆ ಪ್ರೋತ್ಸಾಹ ಕೊಡಬೇಕು ಎಂದರು.
ಯಕಲಾಸಪುರದ ಜನನಿ ಜಾನಪದ ಕಲಾ ವೇದಿಕೆ ಮುಖ್ಯಸ್ಥ, ಜಾನಪದ ಕಲಾವಿದ ಪರಶುರಾಮ ಬಣಕಾರ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಶಿಡೇನೂರ, ಶಿವಕುಮಾರ ಜಾಧವ್, ರಾಜು ಸೂರ್ವೆ, ಉದಯರಾಜ್ ಕೊಳಜಿ, ಮಣಿಕಂಠ ಬಣಕಾರ, ಗಂಗಾ ಮೊಟೇಬೆನ್ನೂರು, ಪ್ರಕಾಶ ಗಚ್ಚಿನಮಠ, ಈರಣ್ಣ ಅಟವಾಳಗಿ, ಕುಮಾರ ಧಾರವಾಡ, ಬಸವರಾಜ ಕೋಪರ್ಡೆ, ಸಿ.ಸಿ. ಪಾಟೀಲ, ಶಾರದ ಕಸವಾಳ, ಕೊಟ್ರೇಶಪ್ಪ ಎಮ್ಮಿ, ಚಂದ್ರಪ್ಪ ಬಣಕಾರ, ಮಲ್ಲಿಕಾರ್ಜುನ ಸಾವಕ್ಕಳವರ ಮತ್ತಿತರರಿದ್ದರು. ನಂತರ ಜನನಿ ಜಾನಪದ ಕಲಾ ವೇದಿಕೆ ಕಲಾವಿದರು ವೈವಿಧ್ಯಮಯ ಜಾನಪದ ಸಂಗೀತ ಪ್ರಸ್ತುತ ಪಡಿಸಿದರು.ಹಿಂದಿನ ಕಾಲದಲ್ಲಿ ಹೊಲ ಗದ್ದೆಯಲ್ಲಿ, ಕೃಷಿ ಮಾಡುವಾಗ, ಮದುವೆ, ಜಾತ್ರೆ, ಮನೆಯಲ್ಲಿ ನಡೆಯುವ ಶುಭ ಸಮಾರಂಭದಲ್ಲಿ ಜಾನಪದ ಹಾಡು ಹೇಳಿಕೊಂಡು ಕೆಲಸ ಮಾಡುತ್ತಿದ್ದರು. ಇಂದಿನ ಕಾಲಘಟ್ಟದಲ್ಲಿ ಅವುಗಳು ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾನಪದ ಮೂಲ ಸೊಗಡುಗಳನ್ನು ಪ್ರತಿಬಿಂಬಿಸುವ ಕಲೆಗಳಿಗೆ ಪ್ರೋತ್ಸಾಹ ಕೊಡಬೇಕು ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ ಹೇಳಿದರು.