ಪ್ರತಿ ಹಬ್ಬ ಆಚರಣೆಗೂ ಉಂಟು ವೈಜ್ಞಾನಿಕ ಹಿನ್ನೆಲೆ: ವಿಶ್ವನಾಥ ಮಹಾಂತಶೆಟ್ಟರ

KannadaprabhaNewsNetwork |  
Published : Sep 23, 2025, 01:04 AM ISTUpdated : Sep 23, 2025, 01:05 AM IST
ಪೊಟೋ- ಲಕ್ಷ್ಮೇಶ್ವರದ ಅಂಭಾಭವಾನಿ ದೇವಸ್ಥಾನದಲ್ಲಿ ಎಸ್‌ಎಸ್‌ಕೆ ಸಮಾಜದ ವತಿಯಿಂದ ಶರನ್ನವರಾತ್ರಿ ಅಂಗವಾಗಿ ಘಟಸ್ಥಾಪನೆಯ ಕಾರ್ಯಕ್ರಮಕ್ಕೆ  ಜೀವಣ್ಣ ಗೋಗಿ ಹಾಗೂ ವಿಶ್ವನಾಥ ಮಹಾಂತಶೆಟ್ಟರ ಚಾಲನೆ ನೀಡಿದರು. ಸಮಾಜದ ಮುಖಂಡರಾದ ಪರಶುರಾಮಸಾ ಬದಿ ಮತ್ತು ನಾರಾಯಣಸಾ ಪವಾರ ಇದ್ದರು. | Kannada Prabha

ಸಾರಾಂಶ

ಈ ವೇಳೆ ಮಾತನಾಡಿದ ವಿಶ್ವನಾಥ ಮಹಾಂತಶೆಟ್ಟರ ಅವರು, ಭಾರತವು ಭವ್ಯ ಪರಂಪರೆ, ಇತಿಹಾಸ ಹೊಂದಿದ ಪವಿತ್ರ ದೇಶವಾಗಿದೆ. ಪ್ರತಿಯೊಂದು ಹಬ್ಬ ಹರಿದಿನಗಳ ಆಚರಣೆಯ ಹಿಂದೆ ಧಾರ್ಮಿಕವಾಗಿ ಹಾಗೂ ಐತಿಹಾಸಿಕ, ವೈಜ್ಞಾನಿಕ ಹಿನ್ನೆಲೆ ಇದೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳು ನಮಗೆ ಹೆಚ್ಚು ಶ್ರೇಷ್ಠವಾಗಿವೆ ಎಂದರು.

ಲಕ್ಷ್ಮೇಶ್ವರ: ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಎಸ್‌ಎಸ್‌ಕೆ ಸಮಾಜ ಹಾಗೂ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಶರನ್ನವರಾತ್ರಿ ಪೂಜಾ ಕಾರ್ಯಕ್ರಮಕ್ಕೆ ವರ್ತಕರಾದ ಜೀವಣ್ಣ ಗೋಗಿ ಮತ್ತು ವಿಶ್ವನಾಥ ಮಹಾಂತಶೆಟ್ಟರ ಸೋಮವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ವಿಶ್ವನಾಥ ಮಹಾಂತಶೆಟ್ಟರ ಅವರು, ಭಾರತವು ಭವ್ಯ ಪರಂಪರೆ, ಇತಿಹಾಸ ಹೊಂದಿದ ಪವಿತ್ರ ದೇಶವಾಗಿದೆ. ಪ್ರತಿಯೊಂದು ಹಬ್ಬ ಹರಿದಿನಗಳ ಆಚರಣೆಯ ಹಿಂದೆ ಧಾರ್ಮಿಕವಾಗಿ ಹಾಗೂ ಐತಿಹಾಸಿಕ, ವೈಜ್ಞಾನಿಕ ಹಿನ್ನೆಲೆ ಇದೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳು ನಮಗೆ ಹೆಚ್ಚು ಶ್ರೇಷ್ಠವಾಗಿವೆ ಎಂದರು.ರಾಜ್ಯಮಟ್ಟದ ಗುರುಶ್ರೀ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಈಶ್ವರ ಮೇಡ್ಲೇರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಇತಿಹಾಸ ವಿಶಿಷ್ಟವಾಗಿದೆ. ದುಷ್ಟರನ್ನು ಶಿಕ್ಷಿಸುವ ಮತ್ತು ಶಿಷ್ಟರನ್ನು ರಕ್ಷಿಸುವ ಉದ್ದೇಶವೇ ಈ ಸಹಸ್ರಾರ್ಜುನ ಸಮಾಜದ್ದಾಗಿದ್ದು, ಇಂತಹ ಸಮಾಜ ಪಟ್ಟಣದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಇದೇ ಸಂದರ್ಭದಲ್ಲಿ ಕೆಯುಡಬ್ಲ್ಯುಜೆ ರಾಜ್ಯ ಪ್ರಶಸ್ತಿ ಪುರಸ್ಕೃತ ದಿಗಂಬರ ಪೂಜಾರ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಪರಶುರಾಮಸಾ ಬದಿ ವಹಿಸಿದ್ದರು. ಉಪಾಧ್ಯಕ್ಷ ನಾರಾಯಣಸಾ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಎಸ್‌ಕೆ ಸಮಾಜ ಟ್ರಸ್ಟ್ ಕಮೀಟಿ, ಎಸ್‌ಎಸ್‌ಕೆ ತರುಣ ಸಂಘ, ಮಹಿಳಾ ಮಂಡಳ, ಭಾವಸಾರ ಕ್ಷತ್ರೀಯ ಸಮಾಜ, ಗೋಂದಳಿ ಸಮಾಜದ ಮುಖಂಡರು ಇದ್ದರು. ವಿಠ್ಠಲಸಾ ಶಿದ್ಲಿಂಗ ಸ್ವಾಗತಿಸಿದರು. ತರುಣ ಸಂಘದ ಅಧ್ಯಕ್ಷ ಭರತ ಬಾಕಳೆ ನಿರೂಪಿಸಿದರು.

ಅ. 2ರಿಂದ ಯಚ್ಚರ ಸ್ವಾಮಿಗಳ ಜಾತ್ರೆ

ನರಗುಂದ: ನಾಡಿನಲ್ಲಿ ಹಲವಾರು ಪವಾಡಗಳ ಮೂಲಕ ಭಕ್ತರ ಉದ್ಧಾರ ಮಾಡಿದರು ಯಚ್ಚರ ಸ್ವಾಮಿಗಳ ಜಾತ್ರೆ ಅ. 2ರಿಂದ 6ರ ವರಗೆ ಜರುಗಲಿದೆ ಎಂದು ಶಿರೋಳ ಗವಿಮಠದ ಅಭಿನವ ಯಚ್ಚರ ಶ್ರೀಗಳು ತಿಳಿಸಿದರು.ತಾಲೂಕಿನ ಶಿರೋಳ ಗ್ರಾಮದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರೋಳ ಗ್ರಾಮದ ಮಲಪ್ರಭೆ ನದಿ ದಂಡೆಗೆ ಹೊಂದಿಕೊಂಡಿರುವ ಶಿರೋಳ ಗ್ರಾಮದ ಯಚ್ಚರ ಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ತ ಸೆ. 22ರಿಂದ ಅ. 1ವರಗೆ ಶ್ರೀ ಮಠದಲ್ಲಿ ಶ್ರೀದೇವಿ ಪುರಾಣ ಜರುಗಲಿದೆ.ಅ. 2ರಂದು ಯಚ್ಚರ ಸ್ವಾಮಿಗಳ ಜಾತ್ರಾ ಮಹೋತ್ಸವ ನಡೆಯಲಿದೆ. ಅ. 3ರಂದು ಅನ್ನದಾತರಿಗೆ ಮತ್ತು ದೇಶ ಗಡಿ ಕಾಯುವ ಸೈನಿಕರ ಪಾದಪೂಜೆ ಕಾರ್ಯಕ್ರಮ ಜರುಗಲಿದೆ. ಅ. 4ರಂದು ಭಕ್ತಿ ಹಿತಚಿಂತನೆ ಧರ್ಮಸಭೆ ಜರುಗಲಿದೆ. ಅ. 5ರಂದು ಜೀವನಮೃತ ಮತ್ತು ಆರೋಗ್ಯ ತಪಾಸಣಿ ಕಾರ್ಯಕ್ರಮಗಳು ನಡೆಯಲಿವೆ.

ಅ. 6ರಂದು ಶ್ರೀಮಠದಲ್ಲಿ 24ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಮತ್ತು ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭ ಜರುಗಲಿದೆ ಎಂದರು.ಶ್ರೀಮಠದ ಭಕ್ತರಾದ ಪ್ರಕಾಶಗೌಡ ತಿರಕನಗೌಡ್ರ ಮಾತನಾಡಿದರು. ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶರಣಪ್ಪಗೌಡ ಮುಲ್ಕಿಪಾಟೀಲ, ಉಪಾಧ್ಯಕ್ಷ ಶಂಕರಪ್ಪ ಕಾಡಪ್ಪನವರ, ಕಾರ್ಯದರ್ಶಿ ಶೇಖಣ್ಣ ಕಟಗೇರಿ, ಸಹ ಕಾರ್ಯದರ್ಶಿ ಶ್ರೀಕಾಂತ ಉಳ್ಳಾಗಡ್ಡಿ, ಹನುಮಂತಗೌಡ ತಿರಕನಗೌಡ್ರ, ಜಂಬಯ್ಯ ಅಂಕಲಿಮಠ, ಶಿಕ್ಷಕ ವಿನಾಯಕ ಶಾಲದಾರ, ಶ್ರೀಕಾಂತ ದೊಡ್ಡಮನಿ, ಮಲ್ಲಪ್ಪ ಪೂಜಾರ, ಉತ್ಸವ, ದಾಸೋಹ, ಕಾರ್ಯಕ್ರಮ, ಸ್ವಾಗತ ಸಮಿತಿಯ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು