ಜಿಎಸ್‌ಟಿ ಇಳಿಕೆಯಿಂದ ಬಡವರಿಗೆ ಭರ್ಜರಿ ಕೊಡುಗೆ: ಶಾಸಕ ಚಂದ್ರು ಲಮಾಣಿ

KannadaprabhaNewsNetwork |  
Published : Sep 23, 2025, 01:04 AM ISTUpdated : Sep 23, 2025, 01:05 AM IST
ಸುದ್ದಿಗೋಷ್ಠಿಯಲ್ಲಿ ಶಾಸಕ ಚಂದ್ರು ಲಮಾಣಿ ಮಾತನಾಡಿದರು. | Kannada Prabha

ಸಾರಾಂಶ

ಜೀವನಾವಶ್ಯಕ ವಸ್ತುಗಳ ಮೇಲೆ ಹಾಗೂ ಶಿಕ್ಷಣದ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸುವ ಮೂಲಕ ಬಡ ಜನರ ಬದುಕಿನ ಹೊರೆ ಕಡಿಮೆ ಮಾಡಿದ್ದಾರೆ.

ಲಕ್ಷ್ಮೇಶ್ವರ: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯ ಹೊರೆಯನ್ನು ಇಳಿಸುವ ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕಿಗೆ ಭರ್ಜರಿ ಕೊಡುಗೆ ನೀಡಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಶ್ಲಾಘಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಈ ಮೊದಲು ಇದ್ದ 4 ಸ್ತರದ ತೆರಿಗೆಯನ್ನು 2 ಸ್ತರಕ್ಕೆ ಇಳಿಸುವ ಮೂಲಕ ಭಾರತದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ. ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಜನರ ದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆಯನ್ನು ಶೇ. 5ಕ್ಕೆ ಇಳಿಸುವ ಮೂಲಕ ದೇಶದ ಜನರ ಬದುಕಿಗೆ ಟಾನಿಕ್ ನೀಡಿದ್ದಾರೆ ಎಂದರು.

ಜೀವನಾವಶ್ಯಕ ವಸ್ತುಗಳ ಮೇಲೆ ಹಾಗೂ ಶಿಕ್ಷಣದ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸುವ ಮೂಲಕ ಬಡ ಜನರ ಬದುಕಿನ ಹೊರೆ ಕಡಿಮೆ ಮಾಡಿದ್ದಾರೆ. ದಿನನಿತ್ಯದ ಬದುಕಿಗೆ ಬೇಕಾದ ವೈದ್ಯಕೀಯ ಸೇವೆ. ಕೃಷಿ ಯಂತ್ರೋಪಕರಣಗಳು ಬೆಲೆಯನ್ನು ಶೇ. 5ಕ್ಕೆ ಇಳಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ. ಮಧ್ಯಮ ವರ್ಗದವರ ಬೇಡಿಕೆಯ ಎಸಿ, ವಾಷಿಂಗ್ ಮೆಷಿನ್, ಟಿವಿ, ಮೊಬೈಲ್‌ಗಳ ಬೆಲೆ ಇಳಿಸಿ ಮಧ್ಯಮ ವರ್ಗದ ಜನರು ಕನಸನ್ನು ನನಸು ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶಿಯ ವಸ್ತುಗಳನ್ನು ಉಪಯೋಗಿಸುವ ಮೂಲಕ ದೇಶದ ಆರ್ಥಿಕ ಶಕ್ತಿ ಬಲಪಡಿಸಬೇಕು ಎಂದು ಹೇಳಿದ್ದು, ಅವರ ಕನಸನ್ನು ನನಸು ಮಾಡಬೇಕು ಎಂದರು.

ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಕೆ ಮಾಡಿರುವುದರಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ನಾಚಿಕೆಗೇಡಿನ ಸಂಗತಿ. ಗ್ಯಾರಂಟಿ ಹೊರೆಯನ್ನು ಜನಸಾಮಾನ್ಯರ ಮೇಲೆ ಹೇರಿ ಅವರ ಬದುಕಿಗೆ ತೆರಿಗೆಯ ಬರೆ ಹಾಕಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ಹಿತ ಕಾಯುವ ಬದಲು ಜನಸಾಮಾನ್ಯರನ್ನು ಲೂಟಿ ಮಾಡುತ್ತಿರುವುದನ್ನು ನಿಲ್ಲಿಸಲಿ ಎಂದು ಕುಟುಕಿದರು.

ರಾಜ್ಯದ ಬಡಜನರಿಗೆ ಆಸರೆಯಾಗಿರುವ ಬಿಪಿಎಲ್ ಕಾರ್ಡ ರದ್ದು ಮಾಡುವ ಮೂಲಕ ಹೊಟ್ಟೆಯ ಮೇಲೆ ಬರೆ ಎಳೆಯುವ ಕಾರ್ಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಈ ವೇಳೆ ಬಿಜೆಪಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಅಶ್ವಿನಿ ಅಂಕಲಕೋಟಿ, ಗಂಗಾಧರ ಮೆಣಸಿನಕಾಯಿ, ಪೂರ್ಣಾಜಿ ಕರಾಟೆ, ಚಂಬಣ್ಣ ಬಾಳಿಕಾಯಿ, ನಿಂಗಪ್ಪ ಬನ್ನಿ, ನೀಲಪ್ಪ ಕರ್ಜಕಣ್ಣವರ, ವಿಜಯ ಮೆಕ್ಕಿ, ನೀಲಪ್ಪ ಹತ್ತಿ. ಎಂ.ಆರ್. ಪಾಟೀಲ, ಮಹಾದೇವಪ್ಪ ಅಣ್ಣಿಗೇರಿ, ಮಂಜುಳಾ ಗುಂಜಳ, ದುಂಡೇಶ ಕೊಟಗಿ, ನಿಂಬಣ್ಣ ಮಡಿವಾಳರ, ಸೋಮಣ್ಣ ಉಪನಾಳ, ಅಶೋಕ ಶಿರಹಟ್ಟಿ, ರಾಮಣ್ಣ ಕಂಬಳಿ, ಸಂತೋಷ ಜಾವೂರ, ಗಂಗಾಧರ ಮೆಣಸಿನಕಾಯಿ, ಶಕ್ತಿ ಕತ್ತಿ, ರಾಜು ರೆಡ್ಡಿ, ತುಕ್ಕಪ್ಪ ಪೂಜಾರ, ಪ್ರವೀಣ ಬೊಮಲೆ, ಭೀಮಣ್ಣ ಯಂಗಾಡಿ, ಮಹೇಶ ಕಲ್ಲಪ್ಪನವರ, ಆನಂದ ಗುರುನಳ್ಳಿ, ನವೀನ್ ಹಿರೇಮಠ, ಮಂಜುನಾಥ ಗಜಾಕೋಶ, ಚಂದ್ರು ಕೊಂಚಿಗೇರಿ, ಸಿದ್ದು ಬಿಜ್ಜೂರಮಠ, ವಿಶಾಲ್ ಬಟಗುರ್ಕಿ, ಆಕಾಶ ಸವದತ್ತಿ, ಅನಿಲ ಮುಳಗುಂದ ಇದ್ದರು.

PREV

Recommended Stories

ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ