ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ದೇವರಾಜ ಅರಸು ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ ಭಾನುವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ. ವತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ, ರಕ್ಷಾಬಂಧನ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯರ ಒಂದೊಂದು ಹಬ್ಬಕ್ಕೂ ಅದರದೇ ಆದ ಮಹತ್ವವಿದೆ. ಅದನ್ನು ಅರಿತು ಪಾಲಿಸಿದಾಗ ಆಚರಣೆಗೆ ಅರ್ಥ ಬರುತ್ತದೆ ಎಂದರು.
ಹಬ್ಬಗಳು ಅರ್ಥವಾದರೆ ಪ್ರಯೋಜನ:ಭಾರತದಲ್ಲಿ ಆಚರಿಸಲ್ಪಡುವ ಎಲ್ಲ ಹಬ್ಬಗಳು ವಿಶಿಷ್ಟವಾಗಿವೆ. ಒಂದು ಹಬ್ಬದಂತೆ ಇನ್ನೊಂದು ಹಬ್ಬದ ಆಚರಣೆ ಇರುವುದಿಲ್ಲ. ನಮ್ಮ ಹಿರಿಯರು ನಿರ್ದಿಷ್ಟ ಉದ್ದೇಶದಿಂದ ಹಬ್ಬಗಳ ಆಚರಣೆ ಜಾರಿಗೆ ತಂದಿದ್ದಾರೆ. ಅವುಗಳ ಅರ್ಥ ಗೊತ್ತಿಲ್ಲದೇ ಆಚರಿಸುವುದರಿಂದ ಹಬ್ಬಗಳ ಮಹತ್ವ ಗೊತ್ತಾಗುವುದಿಲ್ಲ. ಹಬ್ಬದ ಸಂದೇಶ, ಸಾರ್ಥಕತೆ ಅರಿತು ಆಚರಿಸಿದಾಗ ಅವುಗಳಿಂದ ಹೆಚ್ಚಿನ ಪ್ರಯೋಜನ ಸಿಗುತ್ತದೆ ಎಂದು ಹೇಳಿದರು.
ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ ಮಾತನಾಡಿ, ಬಂಧನವನ್ನು ಯಾರೂ ಬಯಸುವುದಿಲ್ಲ. ಎಲ್ಲರೂ ಜೀವನದಲ್ಲಿ ಬಿಡುಗಡೆ ಬಯಸುತ್ತಾರೆ. ಆದರೆ, ಗೊತ್ತಿಲ್ಲದೇ ಅಥವಾ ಇಷ್ಟಪಟ್ಟು ಒಳಗಾಗುವ ಬಂಧನಗಳೂ ಇರುತ್ತವೆ. ಜಗತ್ತಿಗೆ ಶಾಂತಿ ಬಯಸುವ ಬಂಧನ ಬೇಕು. ಮನಃಶಾಂತಿ, ಸಮಾಧಾನ ಇರುವವರು ಸಮಾಜಕ್ಕೆ ಕೇಡು ಮಾಡುವುದಿಲ್ಲ. ಎಲ್ಲರಲ್ಲೂ ಸೋದರ ಭಾವ ಮೂಡಿದರೆ ಅನ್ಯಾಯ, ಅತ್ಯಾಚಾರ, ಅನಾಚಾರ ಸಂಪೂರ್ಣ ನಿಲ್ಲುತ್ತವೆ. ಶ್ರೀಕೃಷ್ಣನು ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ಸಂದೇಶ ಸಾರಿದರು. ಪ್ರತಿಯೊಬ್ಬರೂ ಕರ್ಮಫಲ ತೊರೆದು ಕೆಲಸ ಮಾಡಿದರೆ ಸಮಾಜ ಸಮೃದ್ಧವಾಗುತ್ತದೆ ಎಂದರು.
ಅಭಿನಂದನೆ:
ಕಾರ್ಯಕ್ರಮದಲ್ಲಿ ಸಿಂಚನ ಮತ್ತು ಸಂಗಡಿಗರು ಸ್ವಾಗತ ನೃತ್ಯ ಮಾಡಿದರು. ಗೀತಕ್ಕ ಸ್ವಾಗತಿಸಿದರು. ಶಾಂತಕ್ಕ ವಂದನಾರ್ಪಣೆ ಮಾಡಿದರು. ಡಾ.ಬಿಸ್ನಳ್ಳಿ ಸಿದ್ದೇಶ್ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್ * ರಕ್ಷಾಬಂಧನದಲ್ಲಿ ವಿಶ್ವ ಭ್ರಾತೃತ್ವ ಸಂದೇಶ ರಕ್ಷಾ ಬಂಧನವು ಸೋದರ ಭಾವನೆ ಪ್ರೇರೇಪಿಸುವ ಪವಿತ್ರ ಹಬ್ಬ. ಒಡಹುಟ್ಟಿದವರೊಂದಿಗೆ ಮಾತ್ರ ಈ ಭಾವನೆ ಸೀಮಿತವಲ್ಲ. ಸುತ್ತಲಿನ ಎಲ್ಲರನ್ನೂ ಅದೇ ದೃಷ್ಟಿಯಿಂದ ನೋಡಬೇಕೆಂಬ ವಿಶ್ವಭ್ರಾತೃತ್ವದ ವಿಶಾಲ ಸಂದೇಶ ಹಬ್ಬದಲ್ಲಿದೆ. ಪಾರಮಾರ್ಥಿಕವಾಗಿ ನೋಡುವುದಾದರೆ, ಸಂಸಾರ ಬಂಧನದಿಂದ ಮುಕ್ತಗೊಂಡು ಪರಮಾತ್ಮನ ರಕ್ಷಣೆ ಪಡೆಯುವ ಹಬ್ಬವೇ ರಕ್ಷಾಬಂಧನ. ಹಬ್ಬದ ಸಂದರ್ಭದಲ್ಲಿ ಕೆಟ್ಟ ಅಭ್ಯಾಸ, ಹವ್ಯಾಸ ಕೈ ಬಿಟ್ಟು, ಜೀವನದಲ್ಲಿ ಒಳ್ಳೆಯ ಗುಣ ಬೆಳೆಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ಅವರು ಲೀಲಾಜಿ ಸಲಹೆ ನೀಡಿದರು.