- ದಾವಣಗೆರೆ ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ।
- - -
ಕನ್ನಡ ಪ್ರಭ ವಾರ್ತೆ ದಾವಣಗೆರೆಈ ನಾಡಿನ ಪ್ರತಿಯೊಬ್ಬ ಹೆಣ್ಣುಮಗಳೂ ಹುಟ್ಟಿನಿಂದಲೇ ನಾಯಕಿ. ಅವರಿಗೆ ಅವಕಾಶಗಳು ಸಿಗಬೇಕು ಅಷ್ಟೇ. ಅವಕಾಶ ಸಿಕ್ಕರೆ ತೊಟ್ಟಿಲು ತೂಗುವ ಕೈ ಜಗವನ್ನೇ ಆಳುತ್ತೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ದಾವಣಗೆರೆಯಲ್ಲಿ ಭ್ರೂಣಹತ್ಯೆ, ಬಾಲ್ಯವಿವಾಹ, ಪೋಕ್ಸೋ ಕೇಸುಗಳು, ಕೊಲ್ಲುವಂಥ ಘಟನೆಗಳು ನಡೆಯುತ್ತಿವೆ. ಇಂದು ಜನನ ಪ್ರಮಾಣ ನೋಡಿದರೆ ಗಂಡುಮಕ್ಕಳೇ ಜಾಸ್ತಿ. ಪ್ರಕೃತಿಗೆ ವಿರುದ್ಧವಾದ ವ್ಯವಸ್ಥೆ ಸೃಷ್ಟಿ ಮಾಡಿದ್ದೇವೆ. ನಮ್ಮ ತಾಯಂದಿರು, ಮಹಿಳಾ ಸಾಹಿತಿಗಳ ಲೇಖನಿಯಲ್ಲಿ ಕ್ರಾಂತಿಯನ್ನು ಮೂಡಲಿ, ಆ ಹೆಣ್ಣುಮಗಳ ಹೊಟ್ಟೆಯಲ್ಲಿ ಸಾಯುವ ಕುಡಿಗೆ ಜೀವವನ್ನು ಕೊಡುವಂತಾಗಲಿ ಎಂದು ಆಶಿಸಿದರು.
ಗಂಡಸ್ಥನ ಅಂದರೆ ನಾನು ಹೆಚ್ಚು, ನಾನು ಮುಂದೆ ಅಂತಲ್ಲ. ನಿಜವಾದ ಗಂಡಸ್ಥನ ಮಾತೃಹೃದಯ, ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಾಗಿದೆ. ಶಿವ-ಪಾರ್ವತಿಯರ ತರಹ ಅರ್ಧನಾರೀಶ್ವರರಂತೆ ಒಂದಾಗಿ ಇರುವುದೇ ಗಂಡಸ್ಥನ. ವಿಶ್ವ ಕನ್ನಡ ಸಮ್ಮೇಳನ ಖಂಡಿತವಾಗಿಯೂ ದಾವಣಗೆರೆಯಲ್ಲಿ ಆಗಬೇಕು. ಈ ಬಗ್ಗೆ ನಾನೂ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡುವೆ ಎಂದು ತಿಳಿಸಿದರು.
ಗಿರಿಜಮ್ಮ ಹೆಸರಿನವರಿಗೆ ಶಕ್ತಿ:
ಯಾವುದಾದರೂ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ವಯಸ್ಸು ಅಡ್ಡ ಬರಲ್ಲ. ನಾವು ಏನೂ ಮಾಡದೇ ಮನೆಯಲ್ಲಿದ್ದಾಗ ಮಾತ್ರ ವಯಸ್ಸು ಅಡ್ಡ ಬರುತ್ತದೆ. ಏನಾದರೂ ಸಾಧನೆ ಮಾಡಬೇಕು ಅಂದುಕೊಂಡಾಗ ವಯಸ್ಸು ಅಡ್ಡ ಬರಲ್ಲ. ಇದಕ್ಕೆ ಸಾಕ್ಷಿ ತುಮಕೂರು ಡಾ.ಸಿದ್ಧಗಂಗಾ ಶ್ರೀಗಳು. ನಾವು ಗಮನ ಕೊಡಬೇಕಾದದ್ದು ನಮ್ಮ ಮುಂದಿನ ಸಾಧನೆ, ಗುರಿ ಬಗ್ಗೆ. ನಾವೆಲ್ಲಾ ಮುಂದೆ ಗುರಿ ಇಟ್ಟುಕೊಂಡು ಸಾಗೋಣ. ಕ.ಸಾ.ಪ. ಅಧ್ಯಕ್ಷರ ಆಶಯದಂತೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ದಾವಣಗೆರೆಯಲ್ಲಿಯೇ ಆಗಬೇಕೆಂಬ ಮಹದಾಸೆ ಇದೆ. ಅದು ಆದಷ್ಟು ಬೇಗ ಈಡೇರಲಿ. ಇದರಿಂದ ದಾವಣಗೆರೆಗೆ ಸಾಕಷ್ಟು ಯೋಜನೆಗಳು ಬರಲಿ ಎಂದು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ದಿಕ್ಸೂಚಿ ಭಾಷಣ ಮಾಡುತ್ತ, ಕನ್ನಡ ಭಾಷೆ ಸುಂದರವಾದ ಭಾಷೆ, ವಿನೋಬಾ ಭಾವೆ ಹೇಳಿದಂತೆ ಕನ್ನಡ ವಿಶ್ವದ ಎಲ್ಲ ಲಿಪಿಗಳಿಗಿಂದ ಸುಂದರವಾಗಿ ಕಂಗೊಳಿಸುವಂತಹ ಲಿಪಿ. ಕನ್ನಡ ಭಾಷೆಗೆ ಹೆಚ್ಚಿನ ಮಹತ್ವ ಕೊಡಬೇಕು. ಎಲ್ಲ ಮಹಿಳೆಯರನ್ನು ಉತ್ಕೃಷ್ಟಗೊಳಿಸಿ ಅವರಿಗೆ ಸಂಗೀತ, ಸಾಹಿತ್ಯ, ನೃತ್ಯ ಕ್ಷೇತ್ರ, ಜಾನಪದ ಕಲೆ, ಎಲ್ಲ ಪ್ರಕಾರಗಳನ್ನು ಪರಿಚಯಿಸುವ ಕನ್ನಡದ ಕೆಲಸವನ್ನು ಈ ಸಮ್ಮೇಳನ ಮಾಡುತ್ತಾ ಇದೆ. ಇಲ್ಲಿ ಕೈಗೊಳ್ಳುವ ತೀರ್ಮಾನಗಳು ಇಡೀ ನಾಡಿಗೇ ದಿಕ್ಸೂಚಿಯಾಗಲಿ. ನನ್ನ ನಾಲ್ಕು ವರ್ಷ ಎಂಟು ತಿಂಗಳ ಅವಧಿಯಲ್ಲಿ ಸಾಕಷ್ಟು ಕನ್ನಡಪರ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಅವಧಿ ಇನ್ನು ಕೆಲವೇ ತಿಂಗಳುಗಳಿವೆ, ಅದರಲ್ಲಿ ಇನ್ನೂ ಸಾಕಷ್ಟು ಕನ್ನಡಪರ ಕೆಲಸಗಳನ್ನು ಮಾಡಲು ಆಸಕ್ತನಾಗಿದ್ದೇನೆ. ಎಲ್ಲರ ಸಹಕಾರ ಅತ್ಯವಶ್ಯಕ ಎಂದರು.
ಸುಗಮ ಸಂಗೀತ ತಂಡದವರು ನಾಡಗೀತೆ, ಸಾಧನಾ ಗೀತೆ, ರೈತ ಗೀತೆಯನ್ನು ಹಾಡಿದರು. ತಾ.ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಸ್ವಾಗತಿಸಿದರೆ, ಸೌಭಾಗ್ಯ ಹಿರೇಮಠ, ಹೇಮಾ ಗಣೇಶ ಶೇಠ್ ನಿರೂಪಿಸಿದರು. ಇಂದಿರಾ ರಂಗನಾಥ ರೆಡ್ಡಿ ವಂದಿಸಿದರು. ಸಮ್ಮೇಳನದ ಅಂಗವಾಗಿ ನಡೆದ ತಾಯಿ ಭುವನೇಶ್ವರಿ, ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿ ಶುಭ ಕೋರಿದರು.
- - --8ಕೆಡಿವಿಜಿ31: ದಾವಣಗೆರೆಯಲ್ಲಿ ಶನಿವಾರ ನಡೆದ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಾ.ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ಹರಿಹರ ಶಾಸಕ ಬಿ.ಪಿ.ಹರೀಶ್, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಇತರರು ಇದ್ದರು.
-8ಕೆಡಿವಿಜಿ32: ದಾವಣಗೆರೆಯಲ್ಲಿ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಾ.ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿ ಮಾತನಾಡಿದರು.-8ಕೆಡಿವಿಜಿ33: ದಾವಣಗೆರೆಯಲ್ಲಿ ನಡೆದ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ನಾಗಲಕ್ಷ್ಮೀ ಚೌಧರಿ, ಇತರೆ ಗಣ್ಯರು ಮಹಿಳಾ ನುಡಿತೇರು ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು.
- - -