ಬಳ್ಳಾರಿ: ಕಸಾಪ ತಾಲೂಕು ಘಟಕ, ಕವನ ಪ್ರಕಾಶನ ಸಹಯೋಗದಲ್ಲಿ ಇಲ್ಲಿನ ತಾಳೂರು ರಸ್ತೆಯ ಬಾಲಾಜಿ ಕಾಲೊನಿಯಲ್ಲಿ "ಡಸ್ಟ್ ಬಿನ್ " ಕುರಿತ ಕವಿಗೋಷ್ಠಿ ಆಯೋಜಿಸಲಾಯಿತು.
ಕವಿಯಾದವನು ಪ್ರತಿಯೊಂದು ವಸ್ತುವನ್ನು ಒಳಗಣ್ಣಿನಿಂದ ನೋಡುತ್ತಾನೆ. ಅನೇಕ ಕವಿಗಳು ಕಾವ್ಯ ವಾಚಿಸಿದ ಬಳಿಕ ಡಸ್ಟ್‌ಬಿನ್ ಗೂ ಎಂತಹ ಮಹತ್ವವಿದೆ ಎಂದೆನಿಸಿತು ಎಂದರು.
ಕವಿತಾ ವಿರೂಪಾಕ್ಷ ರವರ ಕವನವು ನಮ್ಮೆಲ್ಲರ ಗಮನ ಸೆಳೆಯುವುದರ ಜೊತೆಗೆ ಕಣ್ಣಂಚಿನಲ್ಲಿ ನೀರು ತರುವಂತಿತ್ತು. ನಿರ್ದಿಷ್ಟ ವಸ್ತುವನ್ನಿಟ್ಟುಕೊಂಡು ಕವಿಗೋಷ್ಠಿ ಆಯೋಜಿಸಿರುವುದು ಅತ್ಯಂತ ವಿಶೇಷ ಹಾಗೂ ವಿಶಿಷ್ಟವಾದದ್ದು. ಬಳ್ಳಾರಿಯ ಕವಿಗಳು ಕವಿಗೋಷ್ಠಿಯ ಮೂಲಕ ಡಸ್ಟ್‌ಬಿನ್ ನ ಮಹತ್ವ ತಿಳಿಸಿಕೊಡುವ ಪ್ರಯತ್ನ ಮಾಡಿದ್ದು ಕಾವ್ಯ ಪ್ರಕಾರದಲ್ಲಿ ಈ ರೀತಿಯ ಪ್ರಯತ್ನಗಳಾಗಬೇಕು ಎಂದರು.ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಟಿರುದ್ರಪ್ಪ ಕವಿಗೋಷ್ಠಿ ಉದ್ಘಾಟಿಸಿ, ಯಾವ ವಸ್ತುವು ನಿರೂಪಯುಕ್ತವಲ್ಲ ಡಸ್ಟ್ ಬಿನ್ ಇಲ್ಲದಿದ್ದರೆ ಮನೆಗಳು ಸ್ವಚ್ಛವಾಗಿರುತ್ತಿರಲಿಲ್ಲ ಎಂದು ತಿಳಿಸಿದರು.ತಾಲೂಕು ಘಟಕದ ಅಧ್ಯಕ್ಷ ಕೆ.ವಿ.ನಾಗರೆಡ್ಡಿ ಮಾತನಾಡಿ, ಕವನಗಳ ರಚನೆಗೆ ಕವಿಗಳ ಭಾವ, ಕವಿ ಸಮಯ ಬಹಳ ಮುಖ್ಯ, ಕವನಗಳು ಓದುಗರ ಧ್ವನಿ ಯಾಗಬೇಕು ಎಂದು ತಿಳಿಸಿದರು.
ಡಸ್ಟ್ ಬಿನ್ ವಿಷಯಕ್ಕೆ ಸಂಬಂಧಿಸಿದಂತೆ 11 ಕವಿಗಳು ಕವನ ವಾಚಿಸಿದರು.ಕವಿಗಳಾದ ಜಯಶ್ರೀ, ವಾಣಿ ಅಜಯ ಬಣಕಾರ್, ಅಜಯ್ ಬಣಕಾರ್ ಕಾರ್ಯಕ್ರಮ ನಿರ್ವಹಿಸಿದರು. ಕವಿಗಳಾದ ಡಾ.ಅರವಿಂದ ಪಾಟೀಲ್, ದಸ್ತಗೀರ್ ಸಾಬ್ ದಿನ್ನಿ, ತಿಪ್ಪೇರುದ್ರಪ್ಪ, ಶ್ರೀನಿವಾಸಮೂರ್ತಿ, ವೀರೇಂದ್ರ ರಾವಿಹಾಳ್, ಅಬ್ದುಲ್ ಹೈ ತೋರಣಗಲ್, ಪಿ.ಆರ್.ವೆಂಕಟೇಶ್ ಇದ್ದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಡಾ.ರಾಜಶೇಖರ್ ಜಮದಂಡಿ ಅವರಿಗೆ ಕವನ ಪ್ರಕಾಶನದಿಂದ ಸನ್ಮಾನಿಸಲಾಯಿತು.