ಉಡುಪಿಯ ಪ್ರತಿ ಕಾರ್ಯಕ್ರಮದಲ್ಲೂ ಮಣ್ಣಿನ, ಪದ್ಧತಿಗಳ ಬಾಂಧವ್ಯ: ಹರಿರಾಮ್ ಶಂಕರ್

KannadaprabhaNewsNetwork |  
Published : Jun 17, 2026, 02:45 AM IST
16ಪ್ರಶಸ್ತಿ | Kannada Prabha

ಸಾರಾಂಶ

ಉಡುಪಿಯವರು ನಡೆಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಇಲ್ಲಿನ ಮಣ್ಣಿನ ಮತ್ತು ಪದ್ಧತಿಗಳ​ ಬಾಂಧವ್ಯ ಕಂಡುಬರುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರ್ ಹೇಳಿದರು.​

ಉಡುಪಿ: ಉಡುಪಿಯವರು ನಡೆಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಇಲ್ಲಿನ ಮಣ್ಣಿನ ಮತ್ತು ಪದ್ಧತಿಗಳ​ ಬಾಂಧವ್ಯ ಕಂಡುಬರುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರ್ ಹೇಳಿದರು.​

ಬೆಂಗಳೂರಿನ ರಾಜಾಜಿನಗರದ ಸ್ಪಂದನ ಸೇವಾ ಸಂಸ್ಥೆ ವತಿಯಿಂದ ಇಲ್ಲಿನ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ವಿಜಯ ಕರ್ನಾಟಕ ಉಡುಪಿ ಜಿಲ್ಲಾ ವರದಿಗಾರ ಸುಬ್ರಮಣ್ಯ ಜಿ. ಕುರ್ಯ ಅವರಿಗೆ ‘ಯಶೋ ಮಾಧ್ಯಮ-2026’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಾನು ನೋಡಿದ ಪ್ರಕಾರ ಉಡುಪಿಯಲ್ಲಿ ಆಗುವ ಹೆಚ್ಚಿನ ಕಾರ್ಯಕ್ರಮಗಳೆಲ್ಲ ಅದು ಸಣ್ಣದಿರಲಿ, ದೊಡ್ಡದಿರಲಿ, ತುಂಬಾ ಅರ್ಥಪೂರ್ಣವಾಗಿರುತ್ತವೆ. ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆಯವರು ಈ ಶಾಲೆಯ ಮಕ್ಕಳಿಗೆ ನೀಡುವ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಈ ಸಂಸ್ಥೆಯಿಂದ ಈ ತರದ ಅರ್ಥವತ್ತಾದ ಕಾರ್ಯಕ್ರಮಗಳು ಮಾಡಲಿಕ್ಕೆ ಶಕ್ತಿ ಸಿಗಲಿ. ಇನ್ನು ಮುಂದೆಯು ಸಹ ಈ ಮಕ್ಕಳ ಕೈ ಹಿಡಿದು ಅವರಿಗೆ ಅವರು ಆಸೆ ಪಡುವಂತಹ ಹುದ್ದೆಗಳಿಗೆ ಮುಂದುವರಿಯಲು ಅವಕಾಶ ಕೊಡಲಿಕ್ಕೆ ಈ ಸಂಸ್ಥೆಗೆ ಆಗಲಿ​ ಎಂದರು. ಪತ್ರಕರ್ತ ಜನಾರ್ದನ್ ಕೊಡವೂರು ಮಾತನಾಡಿ, ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಜೊತೆಗೆ ಉಡುಪಿ ಜಿಲ್ಲೆಯ ಪತ್ರಕರ್ತರಿಗೆ ನೀಡುವ ‘ಯಶೋ ಮಾಧ್ಯಮ-2026’ ಪ್ರಶಸ್ತಿಯನ್ನು ಸುಬ್ರಹ್ಮಣ್ಯ ಜಿ. ಕುರ್ಯ ಅವರಿಗೆ ನೀಡಿರುವುದು ಶ್ಲಾಘನೀಯ ಎಂದು ಹೇಳಿದರು. ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮರಾಯ್ ಕಿಣಿ ಅವರು ದೇವಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಏಳು ಜನ ಆಡಳಿತ ಮಂಡಳಿಯವರನ್ನು ಗೌರವಿಸುವುದಕ್ಕೆ ಧನ್ಯವಾದ​ ಹೇಳಿದರು. ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ​ ಸುಬ್ರಮಣ್ಯ ಕಾರಂತ್, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ ಸಹಾಯಕ ಪ್ರಾಧ್ಯಾಪ​ಕಿ ಡಾ. ಮರಿಯಾ ಪಾಯಸ್,​ ಕಲ್ಯಾಣಪುರ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ​, ಸ್ಪಂದನಾ ಸೇವಾ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ​ರಾಘವೇಂದ್ರ ಪ್ರಭು ಕರ್ವಾಲು ಅವರ ನೇತೃತ್ವದಲ್ಲಿ ‘ಪರಿಸರ ದಿನಾಚರಣೆ’ ಅಂಗವಾಗಿ ಶಾಲೆಯ ಸುತ್ತಮುತ್ತ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು. ಹಾಗೆಯೇ ಜಿಎಸ್ ಬಿ ಸಮುದಾಯದ ‘ರುದ್ರ ಭೂಮಿ’ಯ ಅಭಿವೃದ್ಧಿಗೆ ಸದಾ ದುಡಿಯುತ್ತಿರುವ ಸಮಾಜ ಸೇವಕರಾದ ಪ್ರಕಾಶ್ ಕಾಮತ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.ಈ ಸಂದರ್ಭ ಸುಮನ ಪೈ,​ ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ ಪೈ,​ ಖಜಾಂಚಿ ರಜನಿ ವಿ. ಪೈ, ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್ ಶೆಟ್ಟಿ, ಯೂತ್ ಆಫ್ ಜಿಎಸ್ ಬಿಯ ಸದಸ್ಯ ಅಜಿತ್ ಪೈ ಉಪಸ್ಥಿತರಿದ್ದರು. ವೆಂಕಟೇಶ್ ಪೈ ಸ್ವಾಗತಿಸಿದರು. ಸಂತೋಷ್ ಕಾಮತ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುವವರೇ ಸಾಧಕರು: ಸ್ವಾಮೀಜಿ
ಮರಾಠ ಸಮಾಜ ಸೇವಾ ಸಂಘ ೩೦ನೇ ವಾರ್ಷಿಕೋತ್ಸವ