ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕೇಂದ್ರದೊಳಗೆ ಕ್ರೀಡಾಂಗಣಕ್ಕೆ ಜಾಗ ನೀಡುವುದು ಕಷ್ಟವಾಗಬಹುದು. ಅದಕ್ಕಾಗಿ ಜಿಲ್ಲಾ ಕೇಂದ್ರದಿಂದ ೫ ಕಿ.ಮೀ. ಒಳಗೆ ಬ್ಯಾಡ್ಮಿಂಟನ್ ಕ್ರೀಡಾಂಗಣದ ಜೊತೆಗೆ ಇತರೆ ಕ್ರೀಡಾಭ್ಯಾಸಕ್ಕೂ ಅನುಕೂಲವಾಗುವಂತೆ ಕ್ರೀಡಾಂಗಣ ನಿರ್ಮಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಮಂಡ್ಯ ಜಿಲ್ಲಾ ಕೇಂದ್ರದ ಹೊರಗೆ ಐದು ಎಕರೆ ಜಾಗ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಖೇಲೋ ಇಂಡಿಯಾದಲ್ಲಿ ಹಣವಿದ್ದು ಅದನ್ನು ಕ್ರೀಡಾಂಗಣ ನಿರ್ಮಾಣಕ್ಕೆ ನೀಡುವುದಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಇದರಿಂದ ಉತ್ತಮ ಕ್ರೀಡಾಂಗಣ ನಿರ್ಮಾಣವಾಗುವ ಆಶಯ ವ್ಯಕ್ತಪಡಿಸಿದರು.ತಾಲೂಕು ವ್ಯಾಪ್ತಿಯಲ್ಲಿ ೫ ಸಾವಿರ ಚದರಡಿ ಜಾಗ ಸಿಕ್ಕರೂ ಸಾಕು. ಅದನ್ನೇ ಕ್ರೀಡಾಂಗಣವಾಗಿ ಪರಿವರ್ತನೆ ಮಾಡಿಕೊಂಡು ಅಭ್ಯಾಸ ನಡೆಸಬಹುದು. ಸೊರಬ ಕ್ಷೇತ್ರದಲ್ಲಿ ಬಸ್‌ನಿಲ್ದಾಣದ ಮೇಲೆ ಬ್ಯಾಡ್ಮಿಂಟನ್ ಕೋರ್ಟ್ ಮಾಡಿಸಿದ್ದು ಕ್ರೀಡಾಪಟುಗಳಿಗೆ ಬಸ್ ನಿಲ್ದಾಣಕ್ಕೆ ಬಂದು ಅಲ್ಲೇ ಅಭ್ಯಾಸ ಮಾಡುತ್ತಿದ್ದಾರೆ. ಆ ಸೌಲಭ್ಯ ರಾಜ್ಯದ ಎಲ್ಲಾ ತಾಲೂಕುಗಳಲ್ಲಿಯೂ ಸಿಗುವಂತಾಗಬೇಕು ಎಂದು ಆಶಿಸಿದರು.
ಪುಟ್ಟವೀರಮ್ಮನವರಿಗೆ ಅಧಿಕಾರ ಹಸ್ತಾಂತರಿಸದೆ ಕಿರುಕುಳ: ಆರೋಪ
ಕನ್ನಡಪ್ರಭ ವಾರ್ತೆ ಮಂಡ್ಯ
ಪುಟ್ಟವೀರಮ್ಮ ಮುಖ್ಯ ಶಿಕ್ಷಕಿಯಾಗಿ ಕಳೆದ ಮೇ ೮ರಂದು ಬಡ್ತಿ ಹೊಂದಿ ಮಳವಳ್ಳಿ ತಾಲೂಕು ಅಮೃತೇಶ್ವರನಹಳ್ಳಿ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ತವ್ಯಕ್ಕೆ ಹಾಜರಾದರೂ ಪ್ರಭಾರ ಮುಖ್ಯ ಶಿಕ್ಷಕ ಟಿ.ಎನ್.ಮಹೇಶ ಅವರು ಅಧಿಕಾರ ಸ್ವೀಕರಿಸದಂತೆ ತಡೆಹಿಡಿದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ಸಂಬಂಧ ಶಾಲೆಗೆ ಭೇಟಿ ನೀಡಿದ ಬಿಆರ್‌ಸಿ, ಸಿಇಒ, ಸಿಆರ್‌ಪಿ ಅಧಿಕಾರಿಗಳು ಟಿ.ಎನ್.ಮಹೇಶ್ ಅವರೇ ಮುಖ್ಯ ಶಿಕ್ಷಕರಾಗಿ ಮುಂದುವರೆಯಲಿ ಎಂದು ಹೇಳಿದ್ದಾರೆ. ಅಲ್ಲದೇ, ಪುಟ್ಟವೀರಮ್ಮ ಅವರನ್ನು ನಿಂದಿಸಿ, ಮಾನಸಿಕವಾಗಿ ಘಾಸಿಗೊಳಿಸಿದ್ದಾರೆ. ಈ ಸಂಬಂಧ ಬಿಇಒ ಉಮಾ ಅವರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈ ಡಿಡಿಪಿಐ ಅವರು ಮಧ್ಯಪ್ರವೇಶಿಸಿ ಪುಟ್ಟವೀರಮ್ಮ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.