ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಭಾನುವಾರ ಮಂತ್ರ ಮಾಂಗಲ್ಯ ಎಂಬ ಹೊಸ ಪರಿಕಲ್ಪನೆಯೊಂದಿಗೆ ಒಲವಿನ ಮದುವೆಗೆ ಸಾಕ್ಷಿಯಾಗಿ ಅವರು ಮಾತನಾಡಿದರು. ದಾರ್ಶನಿಕ ಕವಿ ಕುವೆಂಪು ಅವರ ಜಾತ್ಯತೀತ ಪ್ರಜ್ಞೆ ಮತ್ತು ವೈಚಾರಿಕ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಪೀಠಿಕೆ ವಾಚಿಸಿದ ಮುಖ್ಯ ಶಿಕ್ಷಕ ರಾಜಣ್ಣ ಮಾತನಾಡಿ, ಮಂತ್ರ ಮಾಂಗಲ್ಯ ಸರಳ ವಿವಾಹ ಪರಿಕಲ್ಪನೆ ಜಾತಿ ಮತ ಪಂಥಗಳನ್ನು ಮೀರಿದೆ. ಹೀಗಾಗಿ ಈ ತತ್ವಗಳನ್ನು ಅನುಕರಣೆ ಮಾಡುವ ಮೂಲಕ ಯುವ ಸಮುದಾಯ ಸಮಾಜದಲ್ಲಿ ಮಾದರಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದರು.ಕವಿ ಶಿವಶಂಕರ್ ಸೀಗೆಹಟ್ಟಿ ಮಾತನಾಡಿ, ಗೊಡ್ಡು ಸಂಪ್ರದಾಯಗಳಿಗೆ ಕಡಿವಾಣ ಹಾಕಿ ವೈಚಾರಿಕವಾಗಿ ಸರಳ ವಿವಾಹಗಳು ಪ್ರತಿ ಗ್ರಾಮದಲ್ಲೂ ನಡೆಯುವ ಮೂಲಕ ಸಮಾಜದ ಪರಿವರ್ತನೆ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ದ್ವಾರನ ಕುಂಟೆ ಲಕ್ಷ್ಮಣ, ಜಯರಾಮ ಶಿಕ್ಷಕರು, ಸಕ್ಕರ ನಾಗರಾಜ್, ಭೂತರಾಜು ಶಿಕ್ಷಕರು, ಕೋಡಿಹಳ್ಳಿ ಸಂತೋಷ್,ಜಿಪಂ ಮಾಜಿ ಸದಸ್ಯೆ ಗೀತಾ ನಾಗಕುಮಾರ್,ಶಶಿಧರ, ನಾಗಕುಮಾರ್ ಮುಂತಾದವರು ಹಾಜರಿದ್ದರು.