ಪ್ರತಿಯೊಬ್ಬರು ರಕ್ತದಾನ ಮಾಡಿ ಸಂತ್ರಸ್ತರಿಗೆ ನೆರವಾಗಿ: ಬಿ.ಬಿ.ಚಿಮ್ಮನಕಟ್ಟಿ

KannadaprabhaNewsNetwork |  
Published : Dec 27, 2024, 12:46 AM IST
ರಕ್ತದಾನ ಶಿಬಿರವನ್ನು ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಮತ್ತು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರತಿಯೊಬ್ಬರು ರಕ್ತದಾನ ಮಾಡಿ ಬಡವರಿಗೆ, ಅಪಘಾತದಲ್ಲಿ ಗಾಯವಾದವರಿಗೆ ಸಹಾಯ ಮಾಡಿ

ಕನ್ನಡಪ್ರಭ ವಾರ್ತೆ ಬಾದಾಮಿ

ರಕ್ತದಾನ ಮಾಡುವುದರಿಂದ ಬಡವರಿಗೆ ಇತರರಿಗೆ ಸಹಾಯವಾಗುತ್ತದೆ ಎಂದು ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಹೇಳಿದರು.

ಗುರುವಾರ ಪಟ್ಟಣದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಮ್ಮನಕಟ್ಟಿ ಅಭಿಮಾನಿ ಬಳಗ, ಜಿಲ್ಲಾ ರಕ್ತ ಭಂಡಾರ, ತಾಲೂಕಾಸ್ಪತ್ರೆ ಸಹಯೋಗದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ರವರ 42ನೇ ಜನ್ಮ ದಿನಾಚರಣೆ ನಿಮಿತ್ತ ರಕ್ತದಾನ ಶಿಬಿರ ಮತ್ತು ಬಿಪಿ ಸುಗರ್ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ರಕ್ತದಾನ ಮಾಡಿ ಬಡವರಿಗೆ, ಅಪಘಾತದಲ್ಲಿ ಗಾಯವಾದವರಿಗೆ ಸಹಾಯ ಮಾಡಬೇಕೆಂದರು.

ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ ಡಿ.ಎನ್.ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಮೌಲಾನಾ ಕೌಶಿಪ್ ತಕಾತಿ, ಹಜರತ್ ಸೈಯದ್ ಮುಬಾರಕ್, ಮರುಳಸಿದ್ದಲಿಂಗ ಶ್ರೀಗಳು, ಚಿಮ್ಮನಕಟ್ಟಿ ಅವರ ಧರ್ಮಪತ್ನಿ ರತ್ನಮ್ಮ ಚಿಮ್ಮನಕಟ್ಟಿ, ನಿವೃತ್ತ ಸರ್ಜನ್ ಡಾ.ಕೆ.ವಿ.ಕ್ಯಾಲಕೊಂಡ, ವೈದ್ಯ ಡಾ.ಆರ್.ಸಿ.ಭಂಡಾರಿ, ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ, ತಾಪಂ ಇಓ ಸುರೇಶ ಕೊಕರೆ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ, ಮುಖಂಡರಾದ ಅಶೋಕ ಕೋಟನಕರ, ಎಸ್.ಸಿ.ಪಾಟೀಲ, ಡಾ.ಕುಸುಮಾ, ತಾಲೂಕಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಿ.ಕೆ.ಶೆಟ್ಟರ್, ಚಿಕ್ಕಮಕ್ಕಳ ತಜ್ಞ ಡಾ.ಕಿರಣ ಕುಳಗೇರಿ, ಅವಳಿ ಜಿಲ್ಲೆಯ ಕೆ.ಎಂ.ಎಫ್.ಅಧ್ಯಕ್ಷ ಈರಣ್ಣ ಕರಿಗೌಡರ ಸೇರಿದಂತೆ ಇತರರು ಹಾಜರಿದ್ದರು. ಡಾ.ಬಿ.ಎಚ್.ರೇವಣಸಿದ್ದಪ್ಪ ಸ್ವಾಗತಿಸಿದರು. ಸಹಶಿಕ್ಷಕ ಉಜ್ವಲ ಬಸರಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ರಕ್ತದಾನ, ಆರೋಗ್ಯ ತಪಾಸಣೆ:

ಬಾದಾಮಿ ಮತಕ್ಷೇತ್ರದ ಶಾಸಕ ಭಿಮಸೇನ ಚಿಮ್ಮನಕಟ್ಟಿಯವರ 42ನೇ ಜನ್ಮ ದಿನಾಚರಣೆ ನಿಮಿತ್ತ ತಾಲೂಕಾಸ್ಪತ್ರೆಯಲ್ಲಿ ನಡೆದ ರಕ್ತದಾನದಲ್ಲಿ 102 ಜನರು ರಕ್ತದಾನ ಮಾಡಿದರು ಮತ್ತು 253ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ ತಾಲೂಕಾಸ್ಪತ್ರೆ ಎಲ್ಲ ವೈದ್ಯರು, ಸಿಬ್ಬಂದಿ, ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ