ಸಮಾಜದಲ್ಲಿ ಸರ್ವರೂ ನಮ್ಮವರೆಂದು ಬದುಕಬೇಕು-ಮಂಜುನಾಥ ಶ್ರೀಗಳು

KannadaprabhaNewsNetwork |  
Published : Jul 28, 2025, 12:33 AM IST
(27ಎನ್.ಆರ್.ಡಿ4 ಅನುಷ್ಠಾನ ಮುಕ್ತಾಯ ಸ್ವಾಗತ ಕಾರ್ಯಕ್ರಮದಲ್ಲಿ ಶಾಂತಲಿಂಗ ಶ್ರೀಗಳು ಆರ್ಶೀವಚನ ನೀಡುತ್ತಿದ್ದಾರೆ.)   | Kannada Prabha

ಸಾರಾಂಶ

ಬಹಿರಂಗದ ತೂಕವನ್ನು ಕಡಿಮೆ ಮಾಡಿ ಅಂತರಂಗದ ತೂಕವನ್ನು ಇಮ್ಮಡಿಗೊಳಿಸುವುದೆ ಅನುಷ್ಠಾನ. ಆತ್ಮ ಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣ ಮಾಡುವುದು ನಮ್ಮ ಆದ್ಯಕರ್ತವ್ಯವಾಗಿದೆ

ನರಗುಂದ: ಸ್ವಾಮಿಗಳಾದವರು ಗಾಳಿ, ನೀರಿನಂತಿರಬೇಕೆಂದು ಗದುಗಿನ ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳು ಹೇಳುತ್ತಿದ್ದರು. ಅದಕ್ಕೆ ನಿದರ್ಶನವೆಂಬಂತೆ ಸರ್ವರೂ ನಮ್ಮವರೆಂದು ಬದುಕುತ್ತಿರುವ ಅನುಷ್ಠಾನ ಮೂರ್ತಿಗಳಾದ ಶಾಂತಲಿಂಗ ಶ್ರೀಗಳ ಜೀವನ ನಮಗೆಲ್ಲ ಆದರ್ಶ ಎಂದು ಕಿತ್ತಲಿ ಸಿದ್ಧರಾಮೇಶ್ವರ ಮಠದ ಮಂಜುನಾಥ ಶ್ರೀಗಳು ಹೇಳಿದರು.

ಅವರು ಭಾನುವಾರ ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅನುಷ್ಠಾನ ಪೂರೈಸಿ ಗ್ರಾಮಕ್ಕೆ ಮರಳಿದ ಶಾಂತಲಿಂಗ ಶ್ರೀಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಸ್ವತಃ ಕವಿಗಳಾದ ಪೂಜ್ಯರು ಯಡಿಯೂರು ಯತಿ ತೋಂಟದ ಸಿದ್ಧಲಿಂಗೇಶ್ವರರ ಚರಿತ್ರೆಯನ್ನು ಜಾನಪದ ತ್ರಿಪದಿಯನ್ನು ರಚನೆ ಮಾಡುತ್ತಿದ್ದಾರೆ. ಇದು ಲೋಕಾರ್ಪಣೆಯಾದರೆ ಶ್ರೀಗಳ ಸಾಧನೆಗೆ ಮತ್ತೊಂದು ಗರಿ ಬಂದಂತಾಗುತ್ತದೆ ಎಂದು ಹೇಳಿದರು.

ಶಾಂತಲಿಂಗ ಶ್ರೀಗಳು ಮಾತನಾಡಿ, ಬಹಿರಂಗದ ತೂಕವನ್ನು ಕಡಿಮೆ ಮಾಡಿ ಅಂತರಂಗದ ತೂಕವನ್ನು ಇಮ್ಮಡಿಗೊಳಿಸುವುದೆ ಅನುಷ್ಠಾನ. ಆತ್ಮ ಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣ ಮಾಡುವುದು ನಮ್ಮ ಆದ್ಯಕರ್ತವ್ಯವಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣೆಯ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಬಂಡಾಯ ನಾಡು ನರಗುಂದ 10ನೇ ಸ್ಥಾನ ಪಡೆದಿದ್ದು ಅತೀವ ಸಂತಸ ತಂದಿದೆ ಎಂದರು. ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿವರು ಮನ್‌ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಿ ಬಂಡಾಯದ ನಾಡು ನರಗುಂದ ಪಟ್ಟಣವನ್ನು ದೇಶಕ್ಕೆ ಪರಿಚಯಿಸಿದ್ದು ನರಗುಂದಕ್ಕೆ ಮತ್ತೊಂದು ಗರಿ ಬಂದಂತಾಗಿದೆ. ನರಗುಂದ ಎಂದಾಕ್ಷಣ ಸ್ವಾತಂತ್ರ್ಯ ಹಾಗೂ ರೈತ ಬಂಡಾಯದ ನೆನಪು ಸದಾ ಹಚ್ಚ ಹಸಿರಾಗಿದೆ. ಇದರ ಜೊತೆಗೆ ಇದೀಗ ಸ್ವಚ್ಛ ನಗರ ಪಟ್ಟಿಯಲ್ಲಿ ಬಂದಿದ್ದು ನರಗುಂದ ಐತಿಹಾಸಿಕ ಪುಟಗಳಲ್ಲಿ ಅಜರಾಮರವಾಗಿ ಉಳಿಯಲಿದೆ.

ಇದಕ್ಕೆ ಶ್ರಮಿಸಿದ ಪೌರಕಾರ್ಮಿಕರಿಗೆ, ಪುರಸಭೆ ಮುಖ್ಯಾಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆಡಳಿತ ಮಂಡಳಿಯ ಎಲ್ಲ ಸದಸ್ಯರಿಗೆ ಮಾರ್ಗದರ್ಶನ ನೀಡಿದಶಾಸಕರಿಗೆ ಅಭಿನಂದನೆ ತಿಳಿಸಿದರು.

ಬಾದಾಮಿ ಶಕ್ತಿಪೀಠದ ಹಜರತ್ ಸಯ್ಯದಭಾಷಾ ಅಜ್ಜನವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಹೇಶಗೌಡ ಪಾಟೀಲ, ಪ್ರವೀಣ ಯಾವಗಲ್, ಬಿ.ಜಿ. ಭೂಸರೆಡ್ಡಿ, ಬಿ.ಬಿ. ಐನಾಪೂರ, ಗುರುಪಾದಪ್ಪ ಕುರಹಟ್ಟಿ, ಎಸ್.ಬಿ. ದಂಡಿನ, ಪ್ರಕಾಶಗೌಡ ತಿರಕನಗೌಡ್ರ, ಚಂದ್ರಶೇಖರ ದಂಡಿನ, ಕೆ.ಡಿ. ಬಿಜಾಪೂರ, ಶಿವಾನಂದ ಶೇಬಣ್ಣವರ, ಧರ್ಮರಾಜಪ್ಪ ತೆಗ್ಗಿನಮನಿ, ಸಿದಪ್ಪ ಪೂಜಾರ, ಚಂದ್ರಶೇಖರ ಸೊಬರದ, ಜಗದೀಶ ಜಾಧವ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಶಿಕ್ಷಕ ಮಹಾಂತೇಶ ಹಿರೇಮಠ ಸ್ವಾಗತಿಸಿದರು.ಪ್ರೊ. ಆರ್.ಬಿ. ಚಿನವಾಲರ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಲ್ಲೂ ದರ್ಶನ್‌ಗೆ ‘ಅಭಿಮಾನಿಗಳು’ ಕಾಟ!
ನಾಳೆ ಹಲವು ಸಾಧಕರಿಗೆ ಗಾಂಧಿ ಪುರಸ್ಕಾರ ಪ್ರದಾನ