ಕನ್ನಡಪ್ರಭ ವಾರ್ತೆ ಪಾಂಡವಪುರ
ಪೌರ ಕಾರ್ಮಿಕರಿಗೆ ದೇಶದ ಪ್ರತಿಯೊಬ್ಬ ನಾಗರಿಕರು ನಮಿಸಬೇಕು. ನಾವೆಲ್ಲರೂ ಆರೋಗ್ಯವಂತರಾಗಿರಲು ಪೌರ ಕಾರ್ಮಿಕರು ಮೂಲ ಕಾರಣ ಎಂದು ತಹಸೀಲ್ದಾರ್ ಬಸವರಡ್ಡೆಪ್ಪ ರೋಣದ ಹೇಳಿದರು.ಪಟ್ಟಣದ ಪುರಸಭೆಯಿಂದ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸದಿದ್ದರೆ ಜನರಿಗೆ ಕಾಯಿಲೆ ಬಂದು ಆಸ್ಪತ್ರೆಗಳೆಲ್ಲವೂ ಭರ್ತಿಯಾಗುತ್ತಿತ್ತು ಎಂದರು.
ಪೌರಕಾರ್ಮಿಕರು ನಿತ್ಯ ನಮ್ಮ ಮನೆ ಕಸವನ್ನು ಸಂಗ್ರಹಿಸುತ್ತಾರೆ. ಅಲ್ಲದೇ, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುತ್ತಾರೆ. ಅವರು ಮಾಡುವಷ್ಟು ಸ್ವಚ್ಛತೆಯ ಕೆಲಸ ಬೇರೆ ಯಾರೂ ಮಾಡುವುದಿಲ್ಲ ಎಂದರು.ಹಿರಿಯ ಸದಸ್ಯ ಎಂ.ಗಿರೀಶ್ ಪೌರಕಾರ್ಮಿಕರಿಗೆ ದೊರಕುವ ಎಲ್ಲಾ ರೀತಿಯ ಮೂಲ ಸೌಕರ್ಯಗಳ ಬಗ್ಗೆ ಅವರು ತಿಳಿಸಿದರು.
ಪುರಸಭೆ ಸದಸ್ಯ ಚಂದ್ರು ಮಾತನಾಡಿ, ಪೌರಕಾರ್ಮಿಕರು ಪ್ರತಿ ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.ಪೌರ ಸೇವಾ ಕಾರ್ಮಿಕರ ಸಂಘದ ಅಧ್ಯಕ್ಷ ಈಶ್ವರ್ ಮಾತನಾಡಿದರು. ಇದೇ ವೇಳೆ ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಬಿ.ವೈ.ಬಾಬು, ಸದಸ್ಯರಾದ ಶಿವಕುಮಾರ್, ಆರ್.ಸೋಮಶೇಖರ್, ಪಾರ್ಥಸಾರಥಿ ಪೌರ ಕಾರ್ಮಿಕರ ಕುರಿತು ಮಾತನಾಡಿದರು.
ಈ ವೇಳೆ ಆರೋಗ್ಯ ನಿರೀಕ್ಷಕಿ ಧನಲಕ್ಷೀ ಅವರಿಗೆ ಸೀಮಂತಶಾಸ್ತ್ರವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಬಿಳಿ ಪಂಚೆ, ಬಿಳಿ ಶರ್ಟ್ ಹಾಗೂ ಟವಲ್ ಧರಿಸಿ ನವ ವಧು-ವರರಂತೆ ಕಾಣಿಸುತ್ತಿದ್ದ ಪೌರಕಾರ್ಮಿಕರು ನೋಡುಗರ ಕಣ್ಣಿಗೆ ಬಹಳ ಆಕರ್ಷಣೀಯವಾಗಿ ಕಾಣಿಸಿದರು. ಇದೇ ವೇಳೆ ಪೌರಕಾರ್ಮಿಕರ ಜತೆಗೂಡಿ ಪುರಸಭಾ ಅಧ್ಯಕ್ಷ ಹಾಗೂ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಜತೆಗೆ ಕ್ರೀಡಾಕೂಟದಲ್ಲಿ ವಿಜೇತರಾದ ಪೌರ ಕಾರ್ಮಿಕರಿಗೆ ಹಾಗೂ ಸೌಹಾರ್ಧಯುತ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಪತ್ರಕರ್ತರ ಕೊರೊನಾ ತಂಡಕ್ಕೂ ಬಹುಮಾನ ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ್, ಸದಸ್ಯರಾದ ಲಕ್ಷ್ಮಮ್ಮ, ಗೀತಾ, ಅರ್ಚನಾ ಚಂದ್ರು, ಮಂಗಳಾಕೃಷ್ಣೇಗೌಡ, ಧನಲಕ್ಷ್ಮಿ, ಲಕ್ಷ್ಮೇಗೌಡ, ಪಟೇಲ್ ರಮೇಶ್, ಮಹಮ್ಮದ್ ಹನೀಫ್ (ಪಾಪು), ಯಶ್ವಂತ್, ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಪೌರ ಕಾರ್ಮಿಕರಾದ ಡಿ.ರಂಗ, ಶಿವು, ಗಣೇಶ್, ಮಧು, ಸುಬ್ರಮಣಿ, ಶಿವರಾಜು, ಸೀನ, ಸಾನಿಟರಿ ಸೂಪರ್ ವೈಸರ್ ಬೀರಶೆಟ್ಟಹಳ್ಳಿ ರಮೇಶ್ ಇತರರಿದ್ದರು.