ಸಂವಿಧಾನದಡಿ ಎಲ್ಲರೂ ಸಮಾನರು

KannadaprabhaNewsNetwork |  
Published : Oct 26, 2025, 02:00 AM IST
೨೫ ವೈಎಲ್‌ಬಿ ೦೨ಯಲಬುರ್ಗಾದ ಎಸ್.ಎ.ನಿಂಗೋಜಿ ಬಿ.ಇಡಿ ಕಾಲೇಜಿನಲ್ಲಿ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಮಾನವೀಯ ಮೌಲ್ಯಗಳ ಪುನರುತ್ಥಾನ ಆಗುವುದರ ಜತೆಗೆ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಜಾತ್ಯಾತೀತ ಗುಣ ಬೆಳೆಸಲು ಪೌರತ್ವ ತರಬೇತಿಯಿಂದ ಸಾಧ್ಯ

ಯಲಬುರ್ಗಾ: ಜಾತಿ, ಮತ, ಪಂಥಗಳಿಗೆ ಅವಕಾಶ ನೀಡದೆ ಸಂವಿಧಾನದಡಿಯಲ್ಲಿ ಸರ್ವರೂ ಸಮಾನರೆಂದು ಜೀವನ ನಡೆಸಬೇಕು ನಿವೃತ್ತ ನ್ಯಾಯಾಧೀಶ ಹಾಗೂ ಗದಗ ಜಿಲ್ಲಾಧಿಕಾರಿಗಳ ಗೌರವ ಸಲಹೆಗಾರ ಎಸ್.ಜಿ. ಪಲ್ಲೇದ ಹೇಳಿದರು.

ಪಟ್ಟಣದ ಎಸ್.ಎ. ನಿಂಗೋಜಿ ಬಿ.ಇಡಿ ಕಾಲೇಜಿನಲ್ಲಿ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಾನವೀಯ ಮೌಲ್ಯಗಳ ಪುನರುತ್ಥಾನ ಆಗುವುದರ ಜತೆಗೆ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಜಾತ್ಯಾತೀತ ಗುಣ ಬೆಳೆಸಲು ಪೌರತ್ವ ತರಬೇತಿಯಿಂದ ಸಾಧ್ಯ. ಸಮಾನತೆಯ ಸಹಬಾಳ್ವೆ ನಡೆಸಿ, ಸರ್ವರಲ್ಲಿ ಒಂದೊಂದು ಪ್ರತಿಭೆ ಇರುತ್ತದೆ ಹಾಗಾಗಿ ಸಕಲರನ್ನು ಗೌರವಿಸುವುದು ಅವಶ್ಯ ಎಂದರು.

ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಡಾ. ಮಹಾದೇವ ಸ್ವಾಮೀಜಿ ಮಾತನಾಡಿ, ಶಿಕ್ಷಣದಿಂದ ಏನೆಲ್ಲ ಸಾಧಿಸಬಹುದು. ಬದುಕಿನಲ್ಲಿ ಸಮಯಕ್ಕೆ ಮಹತ್ವ ನೀಡಿದರೆ ಜೀವನ ಸಮೃದ್ಧಿಯಾಗುತ್ತದೆ. ಮಾತಿಗಿಂತ ಕಾಯಕಕ್ಕೆ ಹೆಚ್ಚು ಮಹತ್ವ ನೀಡುವ ನಿಂಗೋಜಿ ಶಿಕ್ಷಣ ಸಂಸ್ಥೆ ಸಂಸ್ಕಾರ, ಮೌಲ್ಯ ಬಿತ್ತರಿಸುವ ಮೂಲಕ ಮಾನವೀಯ ನೆಲೆಯಲ್ಲಿ ಶಿಕ್ಷಣ ಕೊಡುವ ಮೂಲಕ ನಮ್ಮ ಭಾಗದಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಿದೆ ಎಂದರು.

ನಿವೃತ್ತ ಪ್ರಾಚಾರ್ಯ ಜಿ.ಎಂ. ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಎಸ್.ಎ. ನಿಂಗೋಜಿ, ರತ್ನಮ್ಮ ನಿಂಗೋಜಿ, ಆನಂದ ಉಳ್ಳಾಗಡ್ಡಿ, ಎಸ್.ಎನ್.ಅಕ್ಕಿ, ಸೋಮೇಶ ನರೆಗಲ್ಲ, ಕೆ.ಸುಷ್ಮಾ, ವೀರನಗೌಡ ಪಾಟೀಲ್, ಪ್ರಕಾಶ, ಹನುಮಂತಪ್ಪ ಕುರಿ, ರಾಮಣ್ಣ ತಳವಾರ್, ಶಿವು, ರಾಜಶೇಖರ ನಿಂಗೋಜಿ, ವಿ.ಎ. ನಿಂಗೋಜಿ, ಡಾ. ಪ್ರವೀಣಕುಮಾರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!