ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಹೇಶ್ ಅಭಿಪ್ರಾಯ
ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಯೋಗಾಸನ ಪ್ರಾಣಾಯಾಮದ ಅವಶ್ಯಕತೆ ಇದೆ ಎಂದು ಶಿಭಾರ ವೃತ್ತದ ಮೈಲಾರಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ವೈ.ಎನ್. ಮಹೇಶ್ ತಿಳಿಸಿದರು.
ನಗರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ ಪತಂಜಲಿ ಯೋಗ ಫೌಂಡೇಶನ್ ದಾವಣಗೆರೆ ಇವರ ಆಶ್ರಯದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯ ಆರೋಗ್ಯವಂತನಾಗಿ, ಮಾನಸಿಕ ಸದೃಢರಾಗಲು, ಶಾರೀರಿಕ, ಮಾನಸಿಕ, ಭೌದ್ಧಿಕವಾಗಲು ಯೋಗ, ಪ್ರಾಣಾಯಾಮ, ಧ್ಯಾನ ಮುಂತಾದವುಗಳ ಅವಶ್ಯಕತೆ ಇದೆ. ಇಲ್ಲಿನ ಸುತ್ತಮುತ್ತಲಿನ ಜನಕ್ಕೆ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಪತಂಜಲಿ ಸಂಸ್ಥೆ ಮುಂದಾಗಿರುವದು ಸಂತೋಷಕರ ವಿಷಯ. ಸಂಸ್ಥೆಯ ಯಾವುದೇ ಕಾರ್ಯಕ್ಕೂ ಸಂಪೂರ್ಣ ಸಹಕಾರವನ್ನು ದೇವಸ್ಥಾನದ ಸಮಿತಿ ಮಾಡುತ್ತದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತಂಜಲಿ ಯೋಗ ಶಿಕ್ಷಣ ಸಮಿತಿ ಪಶ್ಚಿಮ ವಲಯ ಸಂಚಾಲಕ ಡಾ.ರಾಮಚಂದ್ರಣ್ಣ ಮಾತನಾಡಿ, ಸಂಸ್ಥೆ ಕಳೆದ 44 ವರ್ಷಗಳಿಂದ ಸಂಸ್ಥೆ ಸಾರ್ವಜನಿಕರಿಗೆ ಉಚಿತ ಧ್ಯಾನ, ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 1400 ಕ್ಕೂ ಹೆಚ್ಚು ಶಾಖೆಗಳನ್ನು ಹೋಂದಿದೆ. 2008 ರಲ್ಲಿ ದಾವಣಗೆರೆ ನಗರದಲ್ಲಿ ಪ್ರಾರಂಭವಾದ ಶಾಖೆ ನಗರದ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಾ ಬಂದಿದೆ. ದಾವಣಗೆರೆಯಲ್ಲಿ 40ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. 41ದಿನಗಳ ಕಾಲ ಪ್ರತಿದಿನ ಬೆಳಗ್ಗೆ 5.30 ರಿಂದ 7ರ ವರೆಗೆ ನಡೆಯುವ ತರಬೇತಿ ಶಿಬಿರದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ಕರೆ ನೀಡಿದರು.