ಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ

KannadaprabhaNewsNetwork |  
Published : Jan 02, 2025, 12:31 AM IST
01 ಹೆಚ್‍ಆರ್‍ಆರ್ 02ಹರಿಹರದ ಶ್ರೀ ಕುಂಬಳೇಶ್ವರ 108 ಲಿಂಗೇಶ್ವರ ದೇವಸ್ಥಾನದಲ್ಲಿ ಶರಣ ಡಾ. ಬಸವಲಿಂಗ ಶಿವಯೋಗಿ ಸ್ವಾಮೀಜಿ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. | Kannada Prabha

ಸಾರಾಂಶ

ಶ್ರೀ 108 ಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯ. ಧರ್ಮದ ಹಾದಿಯಲ್ಲಿ ನಡೆದರೆ ಕೈಗೊಂಡ ಕಾರ್ಯಗಳು ಯಶಸ್ಸಿನತ್ತ ಸಾಗುತ್ತವೆ ಎಂದು 108 ಲಿಂಗೇಶ್ವರ ದೇವಸ್ಥಾನದ ಶ್ರೀ ಶರಣ ಡಾ. ಬಸವಲಿಂಗ ಶಿವಯೋಗಿ ಸ್ವಾಮೀಜಿ ಹರಿಹರದಲ್ಲಿ ನುಡಿದಿದ್ದಾರೆ.

- ಭಕ್ತರಿಂದ ಗೌರವ ಸ್ವೀಕರಿಸಿ ಶರಣ ಡಾ. ಬಸವಲಿಂಗ ಶಿವಯೋಗಿ ಶ್ರೀ ಸಲಹೆ - - - ಕನ್ನಡಪ್ರಭ ವಾರ್ತೆ ಹರಿಹರ ಶ್ರೀ 108 ಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯ. ಧರ್ಮದ ಹಾದಿಯಲ್ಲಿ ನಡೆದರೆ ಕೈಗೊಂಡ ಕಾರ್ಯಗಳು ಯಶಸ್ಸಿನತ್ತ ಸಾಗುತ್ತವೆ ಎಂದು 108 ಲಿಂಗೇಶ್ವರ ದೇವಸ್ಥಾನದ ಶ್ರೀ ಶರಣ ಡಾ. ಬಸವಲಿಂಗ ಶಿವಯೋಗಿ ಸ್ವಾಮೀಜಿ ನುಡಿದರು.

ನಗರದ ಭರಂಪುರದ ಶ್ರೀ ಕುಂಬಳೇಶ್ವರ 108 ಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್‌ನಿಂದ ಬುಧವಾರ ಶ್ರೀಗಳು ತಮ್ಮ 75ನೇ ಜನ್ಮದಿನ ಮತ್ತು ಶ್ರೀ ಗುಡ್ಡಾಪುರ ದಾನಮ್ಮ ದೇವಿಯ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಜನ್ಮದಿನ ಅಂಗವಾಗಿ ಸನ್ಮಾನಿತರಾಗಿ ಅವರು ಮಾತನಾಡಿದರು.

ನಾವು ಧರ್ಮವನ್ನು ರಕ್ಷಣೆ ಮಾಡಿದಾಗ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಧರ್ಮದ ಹಾದಿಯಲ್ಲಿ ನಡೆದ ಮನುಷ್ಯನು ಸನ್ಮಾರ್ಗದಲ್ಲಿ ಸಾಗುತ್ತಾನೆ. ಸತ್ಯ, ಶಾಂತಿ, ಪರೋಪಕಾರ ಗುಣಗಳೊಂದಿಗೆ ಭೇದಭಾವ ಇಲ್ಲದೇ, ಎಲ್ಲರೂ ಒಂದೇ ಎಂಬ ಭಾವನೆಯಿಂದ ಮುನ್ನಡೆಯಬೇಕು. ಆಗ ಆ ವ್ಯಕ್ತಿ ಎತ್ತರ ಸ್ಥಾನದಲ್ಲಿರುತ್ತಾನೆ ಎಂದರು.

ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೆಲವು ಮಠಗಳು ಶ್ರದ್ಧಾ-ಭಕ್ತಿಯ ಕೇಂದ್ರಗಳಾಗಿ ಧರ್ಮ ಸಂಸ್ಕಾರ, ಜನರಿಗೆ ಭಕ್ತಿ ಮಾರ್ಗ ನೀಡುವುದು ಬಿಟ್ಟು, ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತೋ ಆ ಸರ್ಕಾರದ ಪರವಾಗಿ ನಿಂತು ಮಠಕ್ಕೆ ಅನುದಾನ ಪಡೆಯುವುದೇ ಸಾಧನೆ ಎನ್ನುವಂತಾಗಿದೆ ಎಂದರು.

ಮಾಜಿ ಶಾಸಕ ಎಸ್. ರಾಮಪ್ಪ, ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಯಾವುದೇ ಆದಾಯವಿಲ್ಲದ ಈ ದೇವಸ್ಥಾನದಲ್ಲಿ. ಮಳಿಗೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ ಮಾಡುವ ಮೂಲಕ ಆದಾಯದ ವೃದ್ಧಿಗೆ ಯೋಜನೆಯನ್ನು ರೂಪಿಸಿರುವುದು ಶ್ಲಾಘನೀಯ ಎಂದರು.

ಸರ್ವೋದಯ ಮಠದ ಶಿವಕುಮಾರ ಶ್ರೀ, ಪಂಚಾಕ್ಷರಯ್ಯ ನಗರಸಭೆ ಉಪಾಧ್ಯಕ್ಷ ಎಂ. ಜಂಬಣ್ಣ, ಮಂಜುನಾಥ ಅಪ್ಪಯ್ಯ, ಡಿ.ಜಿ. ಶಿವಾನಂದಪ್ಪ, ನಗರಸಭಾ ಸದಸ್ಯರಾದ ಪಿ.ಎಂ. ವಿರೂಪಾಕ್ಷಿ, ನಿಂಬಕ್ಕ ಚಂದಾಪುರ, ಕೆ.ಬಿ. ರಾಜಶೇಖರ್, ದೇವಸ್ಥಾನ ಸಮಿತಿಯ ಜಿ.ನಂಜಪ್ಪ. ಜ್ಯೋತಿಪ್ರಕಾಶ್, ಪರಶುರಾಮ ಕಾಟ್ವೆ, ಕುರುವತ್ತಿ ನಾಗರಾಜ್, ತಾರಿಹಳ್ಳಿ ವೆಂಕಟೇಶ್, ಬೆಣ್ಣೆ ರೇವಣಸಿದ್ದಪ್ಪ, ಮಹಾಂತೇಶ್, ಬೆಣ್ಣೆ ಸಿದ್ದೇಶ್, ಹರಪನಹಳ್ಳಿ ಬಸವರಾಜಪ್ಪ, ಗಜೇಂದ್ರ, ಹಾವನೂರು ಈರಣ್ಣ, ಶಿವಕುಮಾರ್ ಕಂಚಿಕೇರಿ, ಮಜ್ಜಿಗೆ ಚಂದ್ರಪ್ಪ, ನೀಲಗುಂದ್ ಪರಮೇಶ್ವರಪ್ಪ, ಬೆಟ್ಟಪ್ಪ, ಪಂಡಿತರಾದ ರುದ್ರಯ್ಯ, ಅರ್ಚಕರಾದ ಮಹಾರುದ್ರಪ್ಪ, ಕರೀಬಸಪ್ಪ ಕಂಚಿಕೆರಿ, ಮುರಿಗೆಮ್ಮ ಸೇರಿದಂತೆ ಇತರರಿದ್ದರು.

- - - -01ಎಚ್‍ಆರ್‍ಆರ್02:

ಹರಿಹರದ ಶ್ರೀ ಕುಂಬಳೇಶ್ವರ 108 ಲಿಂಗೇಶ್ವರ ದೇವಸ್ಥಾನದಲ್ಲಿ ಶರಣ ಡಾ. ಬಸವಲಿಂಗ ಶಿವಯೋಗಿ ಸ್ವಾಮೀಜಿ ಜನ್ಮ ದಿನಾಚರಣೆಯಲ್ಲಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು