ಚನ್ನರಾಯಪಟ್ಟಣ: ಪಟ್ಟಣದ ನವೋದಯ ವಿದ್ಯಾಸಂಘದ 2023- 24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಶಾಲಾ ಆವರಣದಲ್ಲಿ ಜರುಗಿತು. ನೂತನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಹಳೆಯ ಆಡಳಿತ ಮಂಡಳಿ ಸದಸ್ಯರ ನಡುವೆ ವಾಗ್ವಾದ ನಡೆದು ಲೆಕ್ಕಪತ್ರ ವಿಚಾರವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ನವೋದಯ ವಿದ್ಯಾ ಸಂಸ್ಥೆಯ ಏಳಿಗೆಗಾಗಿ ಪ್ರತಿಯೊಬ್ಬ ಸದಸ್ಯನೂ ಕೂಡ ಶ್ರಮಿಸಬೇಕು. ಇದರಿಂದ ನವೋದಯ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಿದ ಸ್ಥಾಪಕರ ಆತ್ಮಕ್ಕೆ ಶಾಂತಿ ದೊರಕುತ್ತದೆ. ವಿದ್ಯಾಸಂಸ್ಥೆಗೆ ಕಳಂಕ ತರುವ ಕೆಲಸವನ್ನು ಯಾರೂ ಕೂಡ ಮಾಡಬಾರದು ಎಂದು ತಿಳಿಸಿದರು.
ಕಳೆದ ವರ್ಷದ ಕಾರ್ಯಕಾರಿ ಮಂಡಳಿಗೂ ಮತ್ತು ನೂತನವಾಗಿ ಆಯ್ಕೆಯಾದ ಮಂಡಳಿಯವರಿಗೂ ಹಣಕಾಸು ವಿಚಾರಕ್ಕೆ ಜಗಳಗಳು ಸಂಭವಿಸಿದವು. ಶಾಸಕರ ಮಧ್ಯ ಪ್ರವೇಶದಿಂದ ಪರಿಸ್ಥಿತಿಯು ತಿಳಿಯಾಯಿತು.ನವೋದಯ ವಿದ್ಯಾ ಸಂಘದ ಅಧ್ಯಕ್ಷ ಒ. ಆರ್. ರಂಗೇಗೌಡ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ನಿಮ್ಮ ಸಹಕಾರ ಅತ್ಯವಶ್ಯಕ. ಕೇವಲ ಒಬ್ಬರಿಂದ ಶಾಲೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಶಾಲೆಗೆ ಮಕ್ಕಳನ್ನು ಹೆಚ್ಚು ತರುವ ಸಲುವಾಗಿ ಚರ್ಚೆ ನಡೆಸಿ ಸಂಘಕ್ಕೆ ಹಣ ಕ್ರೋಢೀಕರಿಸುವ ವಿಚಾರ ಹಾಗೂ ಹೆಚ್ಚು ದಾನಿಗಳನ್ನು ಭೇಟಿ ಮಾಡಲು ಅನುದಾನ ತರುವಲ್ಲಿ ಕೆಲಸ ಮಾಡೋಣ ಎಂದರು.
ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ, ಮಾಜಿ ಅಧ್ಯಕ್ಷರಾದ ಶ್ರೀಕಂಠಪ್ಪ, ಕೋಟೆಚಂದ್ರೇಗೌಡ, ಆದಿಶೇಷಕುಮಾರ್, ಗೌರವಾಧ್ಯಕ್ಷ ಡಾ. ಸಿ. ಎಸ್. ಶೇಷಶಯನ, ಉಪಾಧ್ಯಕ್ಷ ಡಾ. ಸಿ. ಎಸ್. ಪ್ರಮೋದ್, ಕಾರ್ಯದರ್ಶಿ ಕೆ. ಪಿ. ಶರತ್, ಸಹ ಕಾರ್ಯದರ್ಶಿ ಎಂ. ಎನ್. ಸಂತೋಷ್, ಖಜಾಂಚಿ ಜಲೇಂದ್ರಕುಮಾರ್, ನಿರ್ದೇಶಕರಾದ ಸಿ. ಜೆ. ಮಂಜುನಾಥ್, ಆದರ್ಶ್, ಸಿ. ಟಿ. ಕುಮಾರಸ್ವಾಮಿ, ಆನಂದ್ ಕಾಳೇನಹಳ್ಳಿ, ಕೆ. ಆರ್. ಶಿವಕುಮಾರ್, ಗಿರೀಶ್ ಗನ್ನಿ, ಜೆ. ಕೆ. ರಾಘವೇಂದ್ರ ಮತ್ತಿತರಿದ್ದರು.