- ಸಂಘ ಉದ್ಘಾಟನೆ ಮುಖೇನ ಜನ್ಮದಿನ ಆಚರಿಸಿಕೊಂಡ ಸಮರ್ಥ ಎಂ. ಶಾಮನೂರು ಮನವಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಮಹತ್ವಾಕಾಂಕ್ಷೆ ಯೋಜನೆ, ಆಶಯದಂತೆ ಸರ್ಕಾರಿ ಶಾಲೆ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು ಹಾಗೂ ವಿದ್ಯಾ ಪೋಷಕರ ಸಂಘ ಸ್ಥಾಪಿಸಿಕೊಂಡು ಸರ್ಕಾರಿ ಶಾಲೆ ಅಭಿವೃದ್ಧಿಪಡಿಸುವ ಪರಿಕಲ್ಪನೆ ನಗರದ 21ನೇ ವಾರ್ಡ್ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕಾರಗೊಂಡಿದೆ.
ನಗರದ ಬಸಾಪುರದ ಸರ್ಕಾರಿ ಹಿರಿಯ ಪ್ರಾಥಮಿಯ ಶಾಲೆಯಲ್ಲಿ ಆರಂಭಿಸಿದ ಹಳೆಯ ವಿದ್ಯಾರ್ಥಿಗಳು, ವಿದ್ಯಾ ಪೋಷಕರ ಸಂಘವನ್ನು ಯುವ ಉದ್ಯಮಿ, ಮುಖಂಡ ಸಮರ್ಥ ಎಂ. ಶಾಮನೂರು ಸೋಮವಾರ ಉದ್ಘಾಟಿಸಿ, ತಮ್ಮ ಜನ್ಮದಿನ ಆಚರಿಸಿಕೊಂಡರು. ಗ್ರಾಮದ ಸಮಾನ ಮನಸ್ಕ 10 ಯುವಕರ ಸಂಘ ಸ್ಥಾಪಿಸಿ, ಶಾಲೆ ಅಭಿವೃದ್ಧಿಗೆ ಪಣ ತೊಟ್ಟಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದರು.ಬಸಾಪುರ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಸುಮಾರು 250 ಮಕ್ಕಳು ಓದುತ್ತಿದ್ದು, ಶಾಲೆಯಲ್ಲಿ 2 ವರ್ಷದ ಹಿಂದೆ ಆಂಗ್ಲ ಮಾಧ್ಯಮವೂ ಆರಂಭವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ, ಯುಕೆಜಿ ತರಗತಿ ಸಹ ಆರಂಭವಾಗಲಿದೆ. ಶಾಲೆಗೆ ತಮ್ಮ ಅಜ್ಜ ದಿವಂಗತ ಶಾಮನೂರು ಶಿವಶಂಕರಪ್ಪ, ತಂದೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಈಗಾಗಲೇ ₹1 ಕೋಟಿ ಅನುದಾನದಲ್ಲಿ ವ್ಯವಸ್ಥಿತ ಕಟ್ಟಡ ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ಬಿ.ವಿ. ರೇವಣಸಿದ್ದೇಶ, ಎಸ್.ಸುರೇಂದ್ರಪ್ಪ, ಸಿ.ಮಹೇಶ್ವರಪ್ಪ, ಸಿದ್ದನಗೌಡ, ಎಂ.ಎಸ್.ಕೊಟ್ರಯ್ಯ, ಎನ್.ಎಂ. ಕೊಟ್ರಯ್ಯ, ಕೆ.ಬಿ. ಲಿಂಗರಾಜ, ಎಸ್‌ಡಿಎಂಸಿ ಅಧ್ಯಕ್ಷ ಗುರುಸ್ವಾಮಿ, ಬಾತಿ ಜಯರಾಜ, ಶಿವಕುಮಾರ, ಶಿವಪ್ಳ ಉಮೇಶ, ತಿಪ್ಪೇಶ, ಶಿವಕುಮಾರ, ಯಗ್ಗಪ್ಪ, ಸಿಆರ್‌ಪಿ ಜಗದೀಶ, ಸಂಘದ ಕೆ.ಎಲ್.ಹರೀಶ ಬಸಾಪುರ, ಎಚ್.ಎಸ್.ರಮೇಶ, ಬಿ.ಎಂ. ಶಿವಕುಮಾರ, ಪೊಲೀಸ್ ಸಿಬ್ಬಂದಿ ದೇವರಾಜ, ಎ.ಆರ್.ವಿಶ್ವನಾಥ, ಜಿ.ಮಹದೇವಯ್ಯ, ಸಿ.ಜಿ.ಅರುಣ, ಎಂ.ಆರ್. ವಿನಯ್, ಕೆ.ಬಿ.ಶಿವಕುಮಾರ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಗ್ರಾಮಸ್ಥರು, ಮಕ್ಕಳು ಇದ್ದರು. ಸಮರ್ಥ ಶಾಮನೂರು ಜನ್ಮದಿನದ ಅಂಗವಾಗಿ ಮಕ್ಕಳಿಗೆ ಸಿಹಿಊಟದ ವ್ಯವಸ್ಥೆ ಮಾಡಲಾಗಿತ್ತು.
- - -
(ಕೋಟ್) ತಮ್ಮ ತಾಯಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಮ್ಮ ಅನುದಾನದಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣವಾಗಿದೆ. ಶಾಲೆಯಲ್ಲಿ ಉತ್ತಮ ಶಿಕ್ಷಕ ವೃಂದವಿದೆ. ಸಂಘದ ಮೂಲಕ ಪಠ್ಯೇತರ ಚಟುವಟಿಕೆಗಳಿಗೂ ಉತ್ತೇಜನ ನೀಡುವ ಯೋಜನೆ ಇದಾಗಿದೆ. ಪಾಲಕರು ಸಹ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳಿಗೆ ಕಾಯಕಲ್ಪ ನೀಡಲು ಸಂಘಟಿತರಾಗಿ ಮುಂದಾಗಬೇಕು.- ಸಮರ್ಥ ಎಂ. ಶಾಮನೂರು, ಯುವ ಉದ್ಯಮಿ, ಮುಖಂಡ.
- - --9ಕೆಡಿವಿಜಿ12.ಜೆಪಿಜಿ:
ದಾವಣಗೆರೆಯ ಬಸಾಪುರ ಗ್ರಾಮದ ಸರ್ಕಾರಿ ಹಿ.ಪ್ರಾ. ಶಾಲೆ ಹಳೆಯ ವಿದ್ಯಾರ್ಥಿಗಳು, ವಿದ್ಯಾಪೋಷಕರ ಸಂಘವನ್ನು ಸೋಮವಾರ ಯುವ ಉದ್ಯಮಿ, ಮುಖಂಡ ಸಮರ್ಥ ಎಂ.ಶಾಮನೂರು ಉದ್ಘಾಟಿಸಿದರು.