ಡಾ.ಅಂಬೇಡ್ಕರ್ ಜಯಂತಿ । ಅಂಬೇಡ್ಕರ್ ಯುವಕರ ಬಳಗ ಆಯೋಜನೆ
ಪ್ರತಿಯೊಬ್ಬ ನಾಗರಿಕರು ಗೌರವದಿಂದ, ಸ್ವಾತಂತ್ರ್ಯ, ಸಮನತೆಯಿಂದ ಬದುಕುವಂತೆ ಆವಕಾಶ ಕಲ್ಪಿಸಿದ ಮಹಾನ್ ನಾಯಕ ಡಾ. ಅಂಬೇಡ್ಕರ್. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಆಳವಡಿಸಿಕೊಂಡು ಮುನ್ನಡೆಯಬೇಕು ಎಂದು ಬಿಜೆಪಿ ಮಂಡಲ್ ಮಾಜಿ ಅಧ್ಯಕ್ಷ ಎಚ್.ಸಿ.ಮಹೇಶ್ ಹೇಳಿದರು.
ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಶನಿವಾರ ಅಂಬೇಡ್ಕರ್ ಯುವಕರ ಬಳಗದಿಂದ ಏರ್ಪಡಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದರುಮಾಜಿ ಜಿಪಂ ಸದಸ್ಯ ಕೆ ಪಿ ಪಾಲಯ್ಯ ಮಾತನಾಡಿ, ಅಂಬೇಡ್ಕರ್ ಯುವ ಸೇನಾನಿಗಳು ಅವರ ತತ್ವದರ್ಶಗಳನ್ನ ಪಾಲಿಸುವಂತಾಗಬೇಕು. ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಮಾರಾಟವಾಗಬಾರದು. ಕೇವಲ ಚುನಾವಣೆಗಳಲ್ಲಿ ತಮ್ಮ ಗ್ರಾಮಗಳಿಗೆ ಬರುವ ರಾಜಕಾರಣಿಗಳ ಬಗ್ಗೆ ಎಚ್ಚರವಹಿಸಬೇಕಾಗಿದೆ. ಮಹಿಳೆಯರು ಅಂಬೇಡ್ಕರ್ ವಿಚಾರಗಳ ಬಗ್ಗೆ ತಿಳಿದರೆ ತಮ್ಮ ಮಕ್ಕಳಿಗೆ ತಿಳಿಸುವರು. ಗ್ರಾಮದ ಮಹಿಳಾ ಸಂಘದ ಪಾದಾಧಿಕಾರಿಗಳು ಇಂತಹ ಕಾರ್ಯಕ್ರಮಗಳಿಗೆ ತಪ್ಪದೇ ಬಾಗವಹಿಸುವಂತೆ ಕರೆ ನೀಡಿದರು.
ಆಲೂರು ಬಸವರಾಜಪ್ಪ ಉಪಾನ್ಯಾಸ ಮಂಡಿಸಿ ಮಾತನಾಡಿ, ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರಚನೆ ಮಾಡಿದ ಸಂವಿಧಾನವೇ ನಮ್ಮ ಧರ್ಮ ಗ್ರಂಥವಾಗಿದೆ. ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅಂಬೇಡ್ಕರ್ ರವರನ್ನ ಕಾಣುವಂತಾಗಬೇಕಾಗಿದೆ ಎಂದರು.
ಮಾಜಿ ಜಿಪಂ ಸದಸ್ಯ ಎಸ್ ಕೆ ಮಂಜಣ್ಣ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಯಾವುದೇ ಜಾತಿ, ಮತ, ಪಂಥ ಮತ್ತು ಧರ್ಮ ಎನ್ನದೇ ನಾವೆಲ್ಲರೂ ಒಂದಾಗಿ ಬಾಳಬೇಕಿದೆ ಎಂದರು.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ಗ್ರಾಪಂ ಸದಸ್ಯಬಿ.ವಿ.ವಿರೇಶ್, ದಸಂಸ ಮುಖಂಡ ಪಲ್ಲಾಗಟ್ಟೆ ರಂಗಪ್ಪ, ಗ್ರಾಪಂ ಕಾರ್ಯಧರ್ಶಿ ಡಿ.ದುರುಗಪ್ಪ, ಮುಚ್ಚುನೂರು ಪರಶುರಾಮ, ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ, ಮುಖಂಡ ಸೂರಗೊಂಡನಹಳ್ಳಿ ನಾಗರಾಜ್, ಮಾಜಿ ಗ್ರಾಪಂ ಸದಸ್ಯ ಕೆ.ವಿ.ಬಸವರಾಜ್, ಎಸ್‌ಡಿಎಂಸಿ ಅಧ್ಯಕ್ಷ ಅಜ್ಜಯ್ಯ, ಅಂಬೇಡ್ಕರ್ ಯುವಕರ ಬಳಗದ ಪದಾಧಿಕಾರಿಗಳಾದ ಗಣೇಶ, ಡಿ.ವಿ.ಪ್ರಸನ್ನ, ರವಿಚಂದ್ರ, ಬೀಮಪ್ಪ, ಮಹಿಳಾ ಸಂಘದ ಸದಸ್ಯರಾದ ಚಂದ್ರಕಲಾ, ರೇಣುಕಮ್ಮ, ದುರುಗಮ್ ಸೇರಿ ಇತರರು ಇದ್ದರು.