ಡಂಬಳ: ಬಸವಣ್ಣನವರ ವಿಚಾರಗಳಡಿ ಜಾತಿ ಮತ ಪಂಥ ಹೊಡೆದೋಡಿಸುವ ಜಾತ್ಯತೀತವಾಗಿ ಜರುಗುವ ಸಾಮಾಜಿಕ ಪರಿವರ್ತನೆಯ ತೋಂಟದಾರ್ಯ ಮಠದ ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಡಾ. ತೋಂಟದಾರ್ಯ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.
ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಮೌಲ್ಯಯುತವಾದ ವಿಚಾರಗಳು. ಈ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಸಮಾಜ ಸುಧಾರಣೆಯಾಗಿದೆ. ರಥೋತ್ಸವವು ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಾಮಾಜಿಕ ಚಳವಳಿಯಾಗಿದೆ ಎಂದರು.
ಎಲ್ಲ ವರ್ಗ, ಜಾತಿ, ಸಮುದಾಯದ ಜನರು ಒಂದೇ ರಥವನ್ನು ಎಳೆದು ಭಾಗವಹಿಸುವ ಮೂಲಕ ಸಮಾನತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವವನ್ನು ಗಟ್ಟಿಗೊಳಿಸುವ ಜಾತ್ರೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದರ ಮೂಲಕ ಯುವಜನತೆ ಬಸವಣ್ಣನವರ ವಿಚಾರಧಾರೆಗಳನ್ನು ಅರಿತು ಅನುಸರಿಸುವ ಮೂಲಕ ಸಾಮಾಜಿಕ ಪರಿವರ್ತನೆಯ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂದರು.ಈ ಸಂದರ್ಭದಲ್ಲಿ ಜಿ.ವಿ. ಹಿರೇಮಠ, ರೊಟ್ಟಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಯಲ್ಲಪ್ಪ ದಂಡಿನ, ಉಪಾಧ್ಯಕ್ಷ ಯಂಕಣ್ಣ ಗಡಗಿ, ಕಾರ್ಯದರ್ಶಿ ಬಡ್ನೆಸಾಬ ಅತ್ತಾರ, ಖಜಾಂಚಿ ತಿಮ್ಮಣ್ಣ ವಡ್ಡರ, ಮುದಕಪ್ಪ ಮೇವುಂಡಿ, ಭೀಮಪ್ಪ ಗದಗಿನ, ಎ.ಪಿ. ಮಾನೆ, ಗೌಸಿದ್ಧಪ್ಪ ಬಿಸನಳ್ಳಿ, ಮಲ್ಲಿಕಾರ್ಜುನ ಪ್ಯಾಟಿ, ಮರಿತೇಮಪ್ಪ ಆದಮ್ಮನವರ, ವಿರುಪಾಕ್ಷಪ್ಪ ಲಕ್ಕುಂಡಿ, ಮುತ್ತಣ್ಣ ಕೊಂತಿಕಲ್ಲ, ಮಹೇಶ ಗಡಗಿ, ಮರಿಯಪ್ಪ ಸಿದ್ಧಣ್ಣವರ, ದುರಗಪ್ಪ ಹರಿಜನ, ಸಿದ್ದಣ್ಣ ನಂಜಪ್ಪನವರ, ಗೌಸಿದ್ದಪ್ಪ ಹಳ್ಳಾಕಾರ, ಭೀಮಪ್ಪ ಪೂಜಾರ, ಯಂಕಣ್ಣ ಯರಾಶಿ, ಜಾತ್ರಾ ಸಮಿತಿ ಸದಸ್ಯರು, ಗ್ರಾಮದ ಹಿರಿಯರು, ಯುವಕರು ಇದ್ದರು.