ರೇಣುಕಾಚಾರ್ಯರ ತತ್ವಾದರ್ಶ ಪ್ರತಿಯೊಬ್ಬರು ಅಳವಡಿಸಿಕೊಳ್ಳಿ: ಜಾನಕಿ ಕೆ.ಎಂ.

KannadaprabhaNewsNetwork | Published : Mar 14, 2025 1:34 AM

ಸಾರಾಂಶ

ಜಗದ್ಗುರು ರೇಣುಕಾಚಾರ್ಯರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಜಾನಕಿ ಕೆಎಂ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಜಗದ್ಗುರು ರೇಣುಕಾಚಾರ್ಯರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಜಾನಕಿ ಕೆಎಂ ಹೇಳಿದರು.

ಬುಧವಾರ ಪಟ್ಟಣದ ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಾತ್ಮರ ಬದುಕು, ಆದರ್ಶ ತತ್ವ, ವಿಚಾರಗಳನ್ನು ತಿಳಿದುಕೊಳ್ಳಲು ಹಾಗೂ ಮಹಾತ್ಮರ ಜಯಂತಿ ಆಚರಿಸುವುದು ಬಹಳ ಮುಖ್ಯ. ಧರ್ಮದ ಏಳ್ಗಿಗೆಗಾಗಿ ಬಸವಣ್ಣ ನವರಗಿಂತಲೂ ಮೊದಲು ರೇಣುಕಾಚಾರ್ಯರು ಶ್ರಮಿಸಿದ್ದು ಶ್ಲಾಘನೀಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಡಾ. ಚಂದ್ರಶೇಖರ ಶ್ರೀಗಳು ಮಾತನಾಡಿ, ರೇಣುಕಾಚಾರ್ಯರು ಅವತಾರಿ ಪುರುಷರು. ಜಗತ್ತಿನ ಕಲ್ಯಾಣಕ್ಕಾಗಿ ಮಾನವರ ಉದ್ಧಾರಕ್ಕಾಗಿ ಅನೇಕ ಪವಾಡ ಮಾಡಿ ಸಿದ್ಧಾಂತ ಶಿಖಾಮಣಿಯಲ್ಲಿ ಬರುವ ಅಷ್ಠಾವರಣ, ಪಂಚಾವರಣ, ಷಟ್‌ಸ್ಥಲ ತತ್ವಗಳನ್ನು ಬೋಧಿಸಿ ಮಾನವ ಧಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ನೀಡಿ ಸಮಾಜದ ಅಜ್ಞಾನ ಅಂಧಕಾರ ಹೋಗಲಾಡಿಸಲು ಶ್ರಮಿಸಿದವರು ಎಂದು ಹೇಳಿದರು.

ಗೌರವ ಸನ್ಮಾನ: ಮುಧೋಳ ತಹಶಿಲ್ದಾರ್ ಮಹಾದೇವ ಸನಮುರಿ, ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಪಟ್ಟಣದ ಹಿರಿಯರಾದ ಗೂಳಪ್ಪ ಚೌಧರಿ, ಗುರುಸಿದ್ದಯ್ಯಾ ಮುತ್ತಿನಮಠ, ಮಲ್ಲಪ್ಪ ಕೋಟಗಿ, ದುಂಡಪ್ಪ ಕಡೇಬಾಗಿಲ ಹಾಗೂ ಕಲ್ಯಾಣ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ದುರ್ಗಪ್ಪ ಮಾದರ, ಪತ್ರಿಕಾ ಮಿತ್ರರನ್ನು, ಸಂಗೀತ ಶಿಕ್ಷಕ ಕೃಷ್ಣಾ ರಂಗಣ್ಣವರ, ನೇತಾಜಿ ಶಾಲೆ ವಿದ್ಯಾರ್ಥಿನಿ ಪತ್ತಾರ ಈ ಎಲ್ಲ ಮಹನಿಯರನ್ನು ಸಮಾಜದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಆರ್.ಕೆ. ಮಠದ, ಎಂ.ಎಂ. ವಿರಕ್ತಮಠ, ಬಿ.ಕೆ. ಮಠದ, ಡಾ.ಬಿ.ಎಸ್. ಹಿರೇಮಠ, ಅಣ್ಣಯ್ಯಾ ವಿರಕ್ತಮಠ, ಶಿವಪ್ಪ ಚೌಧರಿ, ಶಂಕರ ತೇಲಿ, ಪರಶುರಾಮ ವನಸಿ, ಹೊಳಬಸು ಕೊಟಗಿ, ಚನ್ನಯ್ಯಾ ಗಣಾಚಾರಿ, ಸೊಲಬಣ್ಣ ತೇಲಿ, ಸಂಕಪ್ಪ ಗಂಗಣ್ಣವರ, ಬಿ.ಸಿ. ವಿರಕ್ತಮಠ, ದುಂಡಯ್ಯಾ ಶಿರಕೋಳಮಠ, ರಾಮಣ್ಣ ನಾವ್ಹಿ, ಬಸು ಸಕ್ರಿ, ಮಹಾಂತೇಶ ಹಿರೇಮಠ, ಶಿವಪ್ಪ ಗಾಣಿಗೇರ, ಮುತ್ತಪ್ಪ ಗಂಗಣ್ಣವರ, ಶಿವಯೋಗಿ ಗಂಗಣ್ಣವರ, ಸಾಬಣ್ಣ ಭಜಂತ್ರಿ, ಮಹಿಳಾ ಸಂಘಟನೆ ಪದಾಧಿಕಾರಿಗಳು, ಶ್ರೀಮಠದ ಭಕ್ತರು ಇದ್ದರು. ಶಿಕ್ಷಕ ಸುನೀಲ ವಸ್ತ್ರದ ಸ್ವಾಗತಿಸಿದರು. ಮುಖ್ಯಶಿಕ್ಷಕ ಆರ್.ಜಿ. ಮುತ್ತಿನಮಠ ನಿರೂಪಿಸಿದರು. ದುಂಡಯ್ಯಾ ಸಾಲಿಮಠ ವಂದಿಸಿದರು. ಬಾಕ್ಸ್‌---

ಪ್ರಶಸ್ತಿ ಪ್ರದಾನ:

ವೀರಶೈವ ಸಮಾಜದ ವತಿಯಿಂದ ಹಿರಿಯರಾದ ಚಂದ್ರಯ್ಯಾ ಪಂಚಕಟ್ಟಿಮಠ ಅವರಿಗೆ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ, ಹಿರೇಮಠದ ವತಿಯಿಂದ ಜಿಲ್ಲಾಧಿಕಾರಿ ಜಾನಕಿ ಕೆಎಂ ಅವರಿಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Share this article