ವೀರಶೈವ ಧರ್ಮ ಅತಿ ಪುರಾತನವಾದದ್ದು ಎಂಬುದಕ್ಕೆ 98 ಶಿಲಾಶಾಸನಗಳಿವೆ. 168 ಚರಿತ್ರೆಗಳಲ್ಲಿ ವೀರಶೈವ ಧರ್ಮ ಕುರಿತ ಉಲ್ಲೇಖಗಳಿವೆ. ಜಗದ್ಗುರು ರೇಣುಕಾಚಾರ್ಯರು ಆದಿ ಶಂಕರ ಆಚಾರ್ಯರಿಗೆ ದಯಪಾಲಿಸಿದ ಚಂದ್ರ ಮೌಳಿ ಲಿಂಗವನ್ನು ಶೃಂಗೇರಿ ಶಾರದಾ ಪೀಠದಲ್ಲಿ ಇಂದಿಗೂ ನೋಡಬಹುದು. ವೀರಶೈವ ಧರ್ಮ ಅತ್ಯಂತ ಪುರಾತನ ಆಧಾರ ಸಹಿತ ಐತಿಹಾಸಿಕ ನೈಜ ಧರ್ಮವಾದಾಗಿದೆ ಎಂದು ಗುಳೇದಗುಡ್ಡದ ಸರಕಾರಿ ಪದವಿಪೂರ್ವ ಉಪನ್ಯಾಸಕಿ ಡಾ.ಪರಮೇಶ್ವರಿ ಹೊಸಮಠ ಹೇಳಿದರು.
ಕನ್ನಡ ಪ್ರಭ ವಾರ್ತೆ ಮುಧೋಳ
ವೀರಶೈವ ಧರ್ಮ ಅತಿ ಪುರಾತನವಾದದ್ದು ಎಂಬುದಕ್ಕೆ 98 ಶಿಲಾಶಾಸನಗಳಿವೆ. 168 ಚರಿತ್ರೆಗಳಲ್ಲಿ ವೀರಶೈವ ಧರ್ಮ ಕುರಿತ ಉಲ್ಲೇಖಗಳಿವೆ. ಜಗದ್ಗುರು ರೇಣುಕಾಚಾರ್ಯರು ಆದಿ ಶಂಕರ ಆಚಾರ್ಯರಿಗೆ ದಯಪಾಲಿಸಿದ ಚಂದ್ರ ಮೌಳಿ ಲಿಂಗವನ್ನು ಶೃಂಗೇರಿ ಶಾರದಾ ಪೀಠದಲ್ಲಿ ಇಂದಿಗೂ ನೋಡಬಹುದು. ವೀರಶೈವ ಧರ್ಮ ಅತ್ಯಂತ ಪುರಾತನ ಆಧಾರ ಸಹಿತ ಐತಿಹಾಸಿಕ ನೈಜ ಧರ್ಮವಾದಾಗಿದೆ ಎಂದು ಗುಳೇದಗುಡ್ಡದ ಸರಕಾರಿ ಪದವಿಪೂರ್ವ ಉಪನ್ಯಾಸಕಿ ಡಾ.ಪರಮೇಶ್ವರಿ ಹೊಸಮಠ ಹೇಳಿದರು.ಮುಧೋಳದ ಜಂಗಮ ಹಾಗೂ ವೀರಶೈವ ಸಮಾಜದವರು ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವೀರಶೈವ ಧರ್ಮ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿ, ಕೊಲ್ಲಿ ಪಾಕದ ಸೋಮಲಿಂಗೇಶ್ವರ ಲಿಂಗದಿಂದ ಉದ್ಭವಿಸಿದ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸ್ಥಾಪಿಸಿದರು. ಧರ್ಮದ ಉಳಿವಿಗಾಗಿ ಗುರು ಆರಾಧನೆ, ಇಷ್ಟಲಿಂಗ ಪೂಜೆ, ಸಂಸ್ಕಾರ ಆಚರಿಸಿದರೆ ಜಯಂತ್ಯೋತ್ಸವ ಸಾರ್ಥಕ ಎನಿಸುತ್ತದೆ ಎಂದು ಹೇಳಿದರು.
ಡಾ.ಶಿವಾನಂದ ಕುಬಸದ ಮಾತನಾಡಿದರು. ಮುಧೋಳ ವಿರಕ್ತ ಮಠ-ಗವಿಮಠದ ಶ್ರೀಗಳಾದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮರೇಗುದ್ದಿ ಅಡವಿ ಸಿದ್ದೇಶ್ವರ ಮಠದ ನಿರುಪಾದೇಶ್ವರ ಶ್ರೀಗಳು, ಯಡಹಳ್ಳಿ ಅಡವಿಸಿದ್ದೇಶ್ವರ ಮಠದ ಚಂದ್ರಶೇಖರ ಶ್ರೀಗಳು, ಲೋಕಾಪುರ ಹಿರೇಮಠದ ಡಾ.ಚಂದ್ರಶೇಖರ ಶ್ರೀಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುಂಚೆ ನಗರದ ಬಸವೇಶ್ವರ ವೃತ್ತದಿಂದ ಜಗದ್ಗುರು ರೇಣುಕಾಚಾರ್ಯರ ಉತ್ಸವಮೂರ್ತಿ ಮೆರವಣಿಗೆ ಆರಂಭವಾಗಿ ಮುತ್ತೈದೆಯರು ಕುಂಭ ಕಲಶ ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆ ಹೊರಟು ವೀರಶೈವ ಕಲ್ಯಾಣ ಮಂಟಪ ತಲುಪಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.