ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ
ಶ್ರೀಗುರು ಸಿದ್ದರಾಮೇಶ್ವರರ ವಿಚಾರಧಾರೆಗಳು ಹಾಗೂ ಅವರ ತತ್ವಾದರ್ಶಗಳನ್ನು ಸಮಾಜದ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಮಹಾನ್ ಪುರುಷರ ಜಯಂತಿಗೆ ಅರ್ಥ ಬರುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಲಾಗಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದಿಂದ ಹಲವಾರು ಮಹಾನ್ ಪುರುಷರ ಜಯಂತಿಗಳನ್ನು ಆಚರಿಸುತ್ತಾ ಬರುತ್ತಿದ್ದು, ಬುದ್ದ, ಬಸವ, ಅಂಬೇಡ್ಕರ್, ಕನಕದಾಸರು, ವಾಲ್ಮೀಕಿ, ಸಿದ್ದರಾಮೇಶ್ವರ ಜಯಂತಿಗಳು ಅವರ ಉದ್ದೇಶ ಸಮಾಜದಲ್ಲಿ ಸಮಾನತೆ ಕಾಣಬೇಕೆಂಬುದು ಆಗಿತ್ತು ಎಂದು ಹೇಳಿದರು.ಈ ಮಹಾನ್ ಪುರುಷರ ಆಚರಣೆಗಳು ಕೇವಲ ಸರ್ಕಾರಿ ಕಾರ್ಯಕ್ರಮಗಳಾಗಬಾರದು ಎಂಬುದು ನನ್ನ ಆಶಯ. ಸಮಾಜದ ಎಲ್ಲಾ ಜನರನ್ನು ಜೋಡಿಸಿಕೊಂಡು ಮಹಾನ್ ಪುರುಷರ ಜಯಂತಿ ಆಚರಣೆ ಆಗಬೇಕು ಎಂದರು.
ಸಮಾನತೆಗೆ ಹೋರಾಟ ಮಾಡಿದ ಎಲ್ಲಾ ಮಹಾನ್ ಪುರುಷರ ಉದ್ದೇಶ ಒಂದೇ ಆಗಿತ್ತು. ಈ ಕಾರಣಕ್ಕೆ ಸಾವಿರಾರು ವರ್ಷಗಳು ಕಳೆದರೂ ಇನ್ನೂ ಸಹ ಜಯಂತಿ ಆಚರಣೆ ಮೂಲಕ ಜೀವಂತವಾಗಿವೆ ಎಂದು ತಿಳಿಸಿದರು.
ಉಪ ತಹಸೀಲ್ದಾರ್ ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು, ಧಾರ್ಮಿಕ ಚಿಂತಕರಾದ ಸಾಹಿತಿ ಕತ್ತಿಗೆ ಚನ್ನಪ್ಪ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ವಕೀಲ ಬಿ.ಆರ್. ಜಗದೀಶ್, ಭೋವಿ ಜನಾಂಗದ ಮುಖಂಡ ಚಂದ್ರಶೇಖರ ಭೋವಿ, ನೊಳಂಬ ಸಮಾಜದ ಮುಖಂಡ ಎಂ.ಸತೀಶ್, ಎಚ್.ಪಿ. ಮಂಜೇಗೌಡ, ಎಂ.ಸಿ. ಶಿವಾನಂದಸ್ವಾಮಿ, ಎಸ್.ಎಂ. ರಾಜಪ್ಪ, ದಾಸ ಭೋವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಡಾ. ರಮೇಶ್ ಉಪಸ್ಥಿತರಿದ್ದ 17 ಕೆಸಿಕೆಎಂ 1