ಸೇವಾಲಾಲರ ಆದರ್ಶ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು-ಮಾಜಿ ಸಚಿವ ಬಿ.ಸಿ. ಪಾಟೀಲ

KannadaprabhaNewsNetwork |  
Published : Feb 17, 2026, 02:15 AM IST
ಹಿರೇಕೆರೂರು ತಾಲೂಕಿನ ಬಾಳಂಬೀಡ ಗ್ರಾಮದ ಅವರ ಗೃಹ ಕಚೇರಿಯಲ್ಲಿ ಬಿಜೆಪಿ ಮಂಡಲದ ವತಿಯಿಂದ ಸೋಮವಾರ ನಡೆದ ಸಂತ ಸೇವಾಲಾಲ್ ಮಹಾರಾಜ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಮಾಜಿ ಸಚಿವ ಬಿ.ಸಿ. ಪಾಟೀಲ ಪುಷ್ಪ ನಮನ ಸಲ್ಲಿಸಿದರು. | Kannada Prabha

ಸಾರಾಂಶ

ಸಂತ ಸೇವಲಾಲ್ ಮಹಾರಾಜರು ಸಮಾಜಕ್ಕೆ ತಮ್ಮದೆ ಅದ ಕೊಡುಗೆ ನೀಡಿದ್ದಾರೆ. ಸೇವಾಲಾಲರ ಆದರ್ಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ನಿರಂತರವಾಗಿ ಅವರನ್ನು ಸ್ಮರಿಸಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕೆಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಹಿರೇಕೆರೂರು: ಸಂತ ಸೇವಲಾಲ್ ಮಹಾರಾಜರು ಸಮಾಜಕ್ಕೆ ತಮ್ಮದೆ ಅದ ಕೊಡುಗೆ ನೀಡಿದ್ದಾರೆ. ಸೇವಾಲಾಲರ ಆದರ್ಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ನಿರಂತರವಾಗಿ ಅವರನ್ನು ಸ್ಮರಿಸಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕೆಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ತಾಲೂಕಿನ ಬಾಳಂಬೀಡ ಗ್ರಾಮದ ಅವರ ಗೃಹ ಕಚೇರಿಯಲ್ಲಿ ಬಿಜೆಪಿ ಮಂಡಲದ ವತಿಯಿಂದ ಸೋಮವಾರ ನಡೆದ ಮಹಾನ್ ದಾರ್ಶನಿಕರು, ಸಂತ ಶ್ರೀ ಸೇವಾಲಾಲ್ ಮಹಾರಾಜ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಂತ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಅವರು ಮಾತನಾಡಿದರು. ಸಂತ ಶ್ರೀ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ. ಸಮಾಜ ಸುಧಾರಣೆಗಾಗಿ ಹಗಲಿರಳು ಶ್ರಮಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಸಂಜೀವಿಯ್ಯ ಕಬ್ಬಿಣಕಂತಿಮಠ, ಅಲ್ ಇಂಡಿಯಾ ಬಂಜಾರ ಸೇವ ಸಂಘದ ತಾಲೂಕಾ ಅದ್ಯಕ್ಷೆ ,ಲಕ್ಷ್ಮಣ ಪುಜಾರ್, ಜೆ.ಪಿ. ಪ್ರಕಾಶ್, ವನುಜಾ ಪಾಟೀಲ್, ಸೃಷ್ಟಿ ಪಾಟೀಲ್, ದೇವಮ್ಮ ಲಮಾಣಿ, ಶಿವನಾಯಕ್ ಲಮಾಣಿ, ಶಂಕರ್ ನಾಯ್ಕ, ಕೃಷ್ಣಪ್ಪ ಕಬ್ಬೂರ್, ಚಿಕ್ಕಪ್ಪ ಲಮಾಣಿ, ಚಂದ್ರಪ್ಪ ಮೂಡಿ, ಹನುಮಂತಪ್ಪ ಅಂಗಡಿ, ಮಲ್ಲೇಶಪ್ಪ ಬಣಕಾರ್, ಗಂಗವ್ವ ಲಮಾಣಿ , ಚಂದ್ರಪ್ಪ ಬೆನ್ನೂರು, ಲಲಿತವ್ವ ಮೂಡಿ, ಸೋಮಪ್ಪ ಪೂಜಾರ್, ಮನೋಜ್ ಹಾರ್ನಳ್ಳಿ , ನಾಗರಾಜ್ ಬಣಕಾರ್ ಹಾಗೂ ಸಮಾಜದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಮ್ಸ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಕ್ರಮ ಅನಿವಾರ್ಯ: ತಂಗಡಗಿ ಎಚ್ಚರಿಕೆ
ಕಾರ್ಮಿಕರ ದಮನಕಾರಿ ನೀತಿ ವಿರೋಧಿಸಿ ಪ್ರತಿಭಟನೆ