ಕ್ಯಾನ್ಸರ್ ಬರೋದು ಯಾರಿಗೂ ಗೊತ್ತಾಗುವುದಿಲ್ಲ. ಆರಂಭದಲ್ಲಿ ಅದರ ಗುಣಲಕ್ಷಣಗಳು ತಿಳಿಯುವುದಿಲ್ಲ, ನನ್ನ ಹೆಂಡತಿಗೆಯೇ ಕ್ಯಾನ್ಸರ್ ಬಂದಿರುವ ಕಾರಣ ಅದರ ಅನುಭವ ನಮಗೆ ಹೆಚ್ಚಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಿಕೊಂಡು ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಮುಕ್ತರಾಗಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಆರಂಭದ ಗುಣ ಲಕ್ಷಣಗಳು ತಿಳಿಯದೆ ಬರುವ ಕ್ಯಾನ್ಸರ್ ಮಾರಕ ರೋಗದ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ ನೀಡಿದರು.
ಪಟ್ಟಣದ ಐದು ದೀಪದ ವೃತ್ತದಲ್ಲಿ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯು ಸಾರ್ವಜನಿಕರಿಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.
ಕ್ಯಾನ್ಸರ್ ಬರೋದು ಯಾರಿಗೂ ಗೊತ್ತಾಗುವುದಿಲ್ಲ. ಆರಂಭದಲ್ಲಿ ಅದರ ಗುಣಲಕ್ಷಣಗಳು ತಿಳಿಯುವುದಿಲ್ಲ, ನನ್ನ ಹೆಂಡತಿಗೆಯೇ ಕ್ಯಾನ್ಸರ್ ಬಂದಿರುವ ಕಾರಣ ಅದರ ಅನುಭವ ನಮಗೆ ಹೆಚ್ಚಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಿಕೊಂಡು ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಮುಕ್ತರಾಗಬೇಕು ಎಂದರು.
ಕ್ಯಾನ್ಸರ್ ಬಗ್ಗೆ ಜನರಿಗೆ ಅರಿವು ಮೂಡಿಸಲು ಶ್ರೀಶಂಭುಲಿಂಗೇಶ್ವರ ಶಾಲೆ ಮ್ಯಾರಥಾನ್ ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸುತ್ತಿರುವುದು ಸಮಾಜದಕ್ಕೆ ಉಪಕಾರಿಯಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ.ಚೇತನ್ ಮಾತನಾಡಿ, ಕ್ಯಾನ್ಸರ್ ಬಂದ ವ್ಯಕ್ತಿಗಳಿಗೆ ಅದು ಎರಡು-ಮೂರು ಹಂತಕ್ಕೆ ಬರುವವರೆಗೂ ಅದರ ಗುಣಲಕ್ಷಣ ಕಾಣುವುದಿಲ್ಲ. ಹಾಗಾಗಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಉತ್ತಮ ಆರೋಗ ಸೇವನೆ ಮಾಡಬೇಕು ಎಂದರು.
ಹೊರಗೆ ಸಿಗುವ ಜಂಕ್‌ಫುಡ್ ಬಳಕೆ ಕಡಿಮೆ ಮಾಡಬೇಕು, ವಂಶಾವಳಿಯಿಂದ ತಂಬಾಕು ಸೇವೆ, ಧೂಮಪಾನ ಮಾಡುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಹಾಗಾಗಿ ಜಾಗೃತರಾಗಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುಸ್ತಕ ಪ್ರೇಮಿ ಅಂಕೇಗೌಡರನ್ನು ಅಭಿನಂದಿಸಲಾಯಿತು. ಸಂಸ್ಥೆ ಅಧ್ಯಕ್ಷ ಪಿ.ಹೊನ್ನರಾಜು, ಮ್ಯಾನೇಜಿಂಗ್ ಟ್ರಸ್ಟಿ ಪ್ರೊ.ಪಂಚಲಿಂಗೇಗೌಡ, ಕಾರ್ಯದರ್ಶಿ ಪಿ.ಅಕ್ಷಯ್, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಸಬ್ ಇನ್ಸ್‌ಪೆಕ್ಟರ್ ಉಮೇಶ್, ಭರತ್ ಕ್ಯಾನ್ಸರ್ ಆಸ್ಪತ್ರೆ ಡಾ.ಚೇತನ್, ಎಸ್‌ಬಿಐ ರೀಜನಲ್ ಮ್ಯಾನೇಜರ್ ವೀರಭದ್ರೇಗೌಡ, ಮುಖಂಡ ರಾಘವಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.