ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರು ಶಾಸ್ತ್ರಿ ಜಯಂತೋತ್ಸವದಲ್ಲಿ ಮಾತನಾಡಿದರು.
ಗಾಂಧೀಜಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಕಂಡವರು. ಪ್ರತಿಯೊಬ್ಬರಲ್ಲೂ ಸ್ವಯಂ ಪ್ರೇರಿತವಾಗಿ ದೇಶದ ಬಗ್ಗೆ ಕಾಳಜಿ ಮೂಡಬೇಕಿದೆ. ಆಗ ಮಾತ್ರಗಾಂಧೀಜಿಯವರ ಪರಿಕಲ್ಪನೆ ಸಾಕಾರವಾಗಲು ಸಾಧ್ಯ ಎಂದರು.ಅಹಿಂಸೆ ಬೆಳಕಿನಲ್ಲಿ ಅಸ್ಪೃಶ್ಯತೆ ಕತ್ತಲು ಮರೆಯಾಗಬೇಕಿದೆ ಎಂಬ ಮಹಾತ್ಮಾಗಾಂಧೀಜಿಯವರ ತತ್ವಾದರ್ಶಗಳು ಸರ್ವಕಾಲಕ್ಕೂ ಅನ್ವಹಿಸುತ್ತದೆ. ಅಶ್ಪೃಶ್ಯತೆ ಮತ್ತು ಬಡತನದ ನಿರ್ಮೂಲನೆ ನಮ್ಮ ಘೋಷ ವಾಕ್ಯದ ಸಂಕಲ್ಪವಾಗಬೇಕು ಎಂದರು.
ಇದಕ್ಕೂ ಮೊದಲು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿಗಳವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಸಾಹಿತಿ ನಾ.ಸು.ನಾಗೇಶ್, ಕಲೀಂ ಉಲ್ಲಾ, ರಾಜಸ್ವ ನಿರೀಕ್ಷಕ ಗೋವಿಂದರಾಜು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸ್ಥಳೀಯ ಶಾಲಾ ಮಕ್ಕಳು ಸೇರಿದಂತೆ ಮತ್ತಿತರರುಇದ್ದರು.