ನಗರದ ಮಲ್ಲಂದೂರು ರಸ್ತೆಯಲ್ಲಿರುವ ಭಗತ್‌ಸಿಂಗ್ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋ ತ್ಸವ
- ಭಗತ್‌ಸಿಂಗ್ ರಾಷ್ಟ್ರದ ಹಿತಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿದರು- ಹೊಸದಾಗಿ ಆಟೋ ನಿಲ್ದಾಣ ನಿರ್ಮಿಸಲು ಶಾಸಕರ ನಿಧಿ ಯಿಂದ ₹5 ಲಕ್ಷ ಅನುದಾನ
- ಆ ಮಹಾನ್ ವ್ಯಕ್ತಿ ಹೆಸರಿನಲ್ಲಿ ಆಟೋ ನಿಲ್ದಾಣ ನಿರ್ಮಿಸಿ ಪ್ರತಿ ವರ್ಷ ಕನ್ನಡ ರಾಜ್ಯೊತ್ಸವ ಆಚರಣೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕನ್ನಡ ಭಾಷಾ ಸಂಸ್ಕೃತಿಗೆ ಧಕ್ಕೆಯುಂಟಾದರೆ ಪಕ್ಷ, ಜಾತಿ ಮತ್ತು ಧರ್ಮ ಬೇಧ ಮರೆತು ಕನ್ನಡಿಗರು ಒಂದಾಗಬೇಕು. ನಾಡಿನ ಸಂಸ್ಕೃತಿ, ಭಾಷಾ ಸೊಗಡನ್ನು ಎತ್ತಿ ಹಿಡಿಯುವ ಕಾರ್ಯ ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಕರೆ ನೀಡಿದರು. ನಗರದ ಮಲ್ಲಂದೂರು ರಸ್ತೆಯಲ್ಲಿರುವ ಭಗತ್‌ಸಿಂಗ್ ಆಟೋ ನಿಲ್ದಾಣದಲ್ಲಿ ಮಂಗಳವಾರ ನಡೆದ ಕನ್ನಡ ರಾಜ್ಯೋ ತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್ ರಾಷ್ಟ್ರದ ಹಿತಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿದವರು. ಆ ಮಹಾನ್ ವ್ಯಕ್ತಿ ಹೆಸರಿನಲ್ಲಿ ಆಟೋ ನಿಲ್ದಾಣ ನಿರ್ಮಿಸಿ ಪ್ರತಿ ವರ್ಷ ಕನ್ನಡ ರಾಜ್ಯೊತ್ಸವ ಆಚರಣೆ ಸಂಘದ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.ಆಟೋ ಚಾಲಕರು ಮತ್ತು ಮಾಲೀಕರಿಗೆ ಅನುಕೂಲವಾಗಲು ಹೊಸದಾಗಿ ಆಟೋ ನಿಲ್ದಾಣ ನಿರ್ಮಿಸಲು ಶಾಸಕರ ನಿಧಿ ಯಿಂದ ₹5 ಲಕ್ಷ ಅನುದಾನ ಮೀಸಲಿಡಲಾಗಿದೆ. ಮುಂದಿನ ನವೆಂಬರ್ ತಿಂಗಳೊಳಗೆ ನೂತನ ನಿಲ್ದಾಣ ನಿರ್ಮಿಸಿ ಅಲ್ಲಿಯೇ ಕನ್ನಡ ರಾಜ್ಯೋತ್ಸವ ಆಚರಿಸುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.ರಾಜ್ಯ ಸರ್ಕಾರ ಆಟೋ ಚಾಲಕರಿಗೆ ಕಾರ್ಮಿಕ ಇಲಾಖೆಯಿಂದ ಅನೇಕ ಸವಲತ್ತು ಒದಗಿಸಿದೆ. ಅಲ್ಪ ಮೊತ್ತದಲ್ಲಿ ನೋಂದಾಯಿಸಿಕೊಳ್ಳಬೇಕು. ಇದು ಚಾಲಕನ ಭವಿಷ್ಯದ ಬದುಕಿಗೆ ಬಹಳಷ್ಟು ಆಸರೆಯಾಗಲಿದೆ. ಆಕಸ್ಮಿಕ ಸಾವು ನೋವು ಸಂಭವಿಸಿದರೆ ಕುಟುಂಬಸ್ಥರಿಗೆ ಪರಿಹಾರ ಮೊತ್ತದ ವಿಮೆ ನೀಡಲಾಗುತ್ತದೆ ಎಂದು ತಿಳಿಸಿದರು.ಈಗಾಗಲೇ ನಿವೇಶನ ರಹಿತ ಕೆಲವು ಆಟೋ ಚಾಲಕರು ನಿವೇಶವನ ಸೌಲಭ್ಯ ಕಲ್ಪಿಸಲಾಗಿದ್ದು ಇನ್ನುಳಿದ ಫಲಾನುಭವಿಗಳಿಗೆ ಸದ್ಯದಲ್ಲೇ ನಿವೇಶನ ಪೂರೈಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಅಲ್ಲದೇ ನಾಡಿನಲ್ಲಿ ಕನ್ನಡ ಪ್ರೀತಿ ಹೆಚ್ಚು ಪಸರಿಸುವ ಆಟೋ ಚಾಲಕರು ಸೇವೆ ಉತ್ತಮ ಎಂದು ತಿಳಿಸಿದರು.ಭಗತ್‌ಸಿಂಗ್ ಆಟೋ ನಿಲ್ದಾಣ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿ, ಬಹುತೇಕ ಈ ನಿಲ್ದಾಣದಲ್ಲಿ ಬಡ ವರ್ಗದ ಆಟೋ ಚಾಲ ಕರು, ಮಾಲೀಕರು ಜೀವನ ಕಟ್ಟಿಕೊಳ್ಳುತ್ತಿದ್ದೇವೆ. ಹಾಗಾಗಿ ಆಟೋ ನಿಲ್ದಾಣ ಸೇರಿದಂತೆ ಚಾಲಕರು ಕುಟುಂಬಕ್ಕೆ ಅನುಕೂಲ ವಾಗಲು ಸವಲತ್ತು ಒದಗಿಸಿಕೊಡಬೇಕು ಎಂದರು. ಕಾರ್ಯಕ್ರಮದಲ್ಲಿ ಆಟೋ ಸಂಘದ ಉಪಾಧ್ಯಕ್ಷ ರೇವಣ್ಣ, ಸಂಚಾರಿ ಠಾಣೆ ಇನ್ಸ್ಪೆಕ್ಟರ್ ಧನಂಜಯ್, ಖಜಾಂಚಿ ರಂಗನಾಥ್, ಚಾಲಕರುಗಳಾದ ರಾಜೇಗೌಡ, ವಸಂತ್, ಮಲ್ಲಿಕಾರ್ಜುನ್, ಶಿವಣ್ಣ, ಮೆಹಬೂಬ್ ಪಾಷ ಉಪಸ್ಥಿತರಿದ್ದರು.25 ಕೆಸಿಕೆಎಂ 2ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆಯಲ್ಲಿರುವ ಭಗತ್‌ಸಿಂಗ್ ಆಟೋ ನಿಲ್ದಾಣದಲ್ಲಿ ಮಂಗಳವಾರ ನಡೆದ ಕನ್ನಡ ರಾಜ್ಯೋ ತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಧ್ವಜಾರೋಹಣ ನೆರವೇರಿಸಿದರು.