ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಳ್ಳಿ: ಡಾ.ಮಹಾಂತಪ್ರಭು ಸ್ವಾಮೀಜಿ

KannadaprabhaNewsNetwork |  
Published : Nov 10, 2025, 03:15 AM IST
ಅಂಗವಿಕಲರಿಗೆ ಕೃತಕ ಕೈ-ಕಾಲು ಮತ್ತು ಕ್ಯಾಲಿಪರ್, ಬಗಲು ಬಡಿಗೆ ವಿತರಿಸಲಾಯಿತು. | Kannada Prabha

ಸಾರಾಂಶ

ಮಹಾಲಿಂಗಪುರ ಪಟ್ಟಣದ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಸಿ.ಎಂ. ಹುರಕಡ್ಲಿ ಫೌಂಡೇಶನ್ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಮತ್ತು ವಿವಿಧ ತರಹದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮಕ್ಕೆ ಸಾನ್ನಿಧ್ಯ ವಹಿಸಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಜನರು ಆರೋಗ್ಯದ ಕಡೆ ಗಮನ ಹರಿಸಬೇಕು. ದಿನನಿತ್ಯ ವ್ಯಾಯಾಮ, ಯೋಗ ಮತ್ತು ಉತ್ತಮ ಆಹಾರ ಸೇವಿಸಿ ಸದೃಢ ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು. ಜನರ ಹಿತ ಹಾಗೂ ಅನುಕೂಲಗಳಿಗೆ ಸ್ಪಂದಿಸಿ, ಸೇವಾ ಮನೋಭಾವ ಬೆಳೆಸಿಕೊಂಡರೆ ಸಮಾಜದ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯ ಎಂದು ವಿರಕ್ತಮಠ ಶೇಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಸಿ.ಎಂ. ಹುರಕಡ್ಲಿ ಫೌಂಡೇಶನ್ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಮತ್ತು ವಿವಿಧ ತರಹದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮಕ್ಕೆ ಸಾನ್ನಿಧ್ಯ ವಹಿಸಿ ಉದ್ಘಾಟಿಸಿ ಮಾತನಾಡಿದರು.

ಜಗದ್ಗುರು ಶಿವಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಯಾವುದೇ ರಾಜಕಾರಣಿಗಳು, ಸ್ವಾಮೀಜಿಗಳು ಮಾಡಲಾರದಂತಹ ಕೆಲಸಗಳನ್ನು ಹುರಕಡ್ಲಿ ಫೌಂಡೇಶನ್ ಮಾಡುತ್ತಿರುವುದು ಶ್ಲಾಘನೀಯ. ಬಡವರಿಗೆ ಅನೇಕ ಸೇವೆ ಮಾಡುತ್ತಿರುವುದು, ಜನಸೇವೆಯೇ ಜನಾರ್ಧನ ಸೇವೆ ಎಂದು ತಿಳಿದಿರುವುದು ಇದೊಂದು ಅದ್ಭುತ ಕಾರ್ಯ ಎಂದು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಸಮಾಜ ಸೇವೆ ರಕ್ತಗತವಾಗಿ ಬಂದಿದ್ದು, ಬಡವರಿಗೆ, ನಿರ್ಗತರಿಗೆ ಮಾಡುವ ನಿಸ್ವಾರ್ಥ ಸೇವೆ ನಿರಂತರವಾಗಿರಲಿ ಎಂದರು. ಶ್ರೀ ಸಹಜಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಾಹಿತಿ ಯಶವಂತ ಕೊಕ್ಕನವರ ಕನ್ನಡದ ಕಂಪನ್ನು ಹರಡಿಸಿದರು. ಸೌಮ್ಯಾ ಹುರಕಡ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದಳು. ದಾವಣಗೆರೆಯ ಶಿವಕುಮಾರ 105ನೇ ಬಾರಿ ರಕ್ತದಾನ ಮಾಡಿ ಗಮನ ಸೆಳೆದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಜರುಗಿದವು.

100ಕ್ಕೂ ಅಧಿಕ ಅಂಗವಿಕಲರಿಗೆ ಕೃತಕ ಕೈ-ಕಾಲುಗಳ ಜೋಡಣೆ ಕ್ಯಾಲಿಪರ್, ಬಗಲು ಬಡಿಗೆ ವಿತರಿಸಲಾಯಿತು. 85 ಜನ ರಕ್ತದಾನ ಮಾಡಿದರು. 200ಕ್ಕೂ ಅಧಿಕ ಜನರಿಗೆ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ, ಕನ್ನಡಕ ವಿತರಿಸಲಾಯಿತು. ಅಗ್ನಿಕರ್ಮ ಮತ್ತು ವಿದ್ಧಕರ್ಮ ಚಿಕಿತ್ಸೆಯಲ್ಲಿ 250 ಜನ, ಕಲರ್ ಥೆರಪಿಯಲ್ಲಿ 270 ಜನ ಚಿಕಿತ್ಸೆ ಪಡೆದಿದ್ದು, ದಂತ ಚಿಕಿತ್ಸೆ, ಕೈ, ಕಾಲು, ಬೆನ್ನು ನೋವು ಮಸಾಜ್ ಚಿಕಿತ್ಸೆಯು ಕೂಡ ನ.10ರಂದು ಇದೆ ಎಂದು ಸಂಯೋಜಕ ಚನಬಸು ಹುರಕಡ್ಲಿ ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ, ಸದಸ್ಯೆ ಸವಿತಾ ಹುರಕಡ್ಲಿ, ಯೋಗ ಗುರು ಚನ್ನಬಸವ ಗುರೂಜಿ, ಆಯುರ್ವೇದ ಡಾ.ಮಹೇಶ ಕಲ್ಲೆದ, ರಾಘವೇಂದ್ರ ನರಗುಂದ, ಡಾ.ಎಂ.ಎಚ್. ನಾಯ್ಕ, ಮಲ್ಲೇಶ ಕಟಗಿ, ಜಿ.ಎಸ್. ಗೊಂಬಿ, ರವಿ ಜವಳಗಿ, ಶಿವಲಿಂಗ ಟಿರಕಿ, ಸಿದ್ದು ದಢೂತಿ, ಸಿದ್ದುಗೌಡ ಪಾಟೀಲ, ಗೋವಿಂದಗೌಡ ಪಾಟೀಲ, ಸಂಜೀವ ಬಾರಕೋಲ, ಶಿವನಗೌಡ ಪಾಟೀಲ, ಹಣಮಂತ ಶಿರೋಳ, ಪ್ರಕಾಶ ಬಾಡನವರ, ಚನ್ನಬಸು ಹೊಸೂರ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಮಹಾಲಿಂಗ ಕಂಠಿ, ವೆಂಕಣ್ಣ ಬಿರಾದಾರ, ಬಸವರಾಜ ಪಾಶ್ಚಾಪುರ, ಹಣಮಂತ ತೇಲಿ, ರಾಜೇಶ ಭಾಗೋಜಿ, ವೀರೇಶ ಆಸಂಗಿ, ಬಸವರಾಜ ಗಿರಿಸಾಗರ, ಕುಮಾರ ಮನವಡೆ, ಶಶಿಧರ ಹಳ್ಳಿ, ಸಂತೋಷ ಪಾನಶೆಟ್ಟಿ, ಮಾಮಲ ದಮಾಮಿ, ಬಸವರಾಜ ಹಟ್ಟಿ ಸೇರಿದಂತೆ ಅನೇಕ ಫಲಾನುಭವಿಗಳು ಸೇರಿದ್ದರು. ಎಂ.ಡಿ. ಆನಂದ ಪ್ರಾರ್ಥಿಸದಿರು. ಜಯರಾಮ್ ಶೆಟ್ಟಿ ಸ್ವಾಗತಿಸಿದರು. ಶಿವಾನಂದ ನೇಗಿನಾಳ ನಿರೂಪಿಸಿದರು. ನಾರಣಗೌಡ ಉತ್ತಂಗಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ