ಹನುಮಸಾಗರ: ಪ್ರತಿಯೊಬ್ಬರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಭೀಮಣ್ಣ ಹವಳಿ ಹೇಳಿದರು.
ಗ್ರಾಮದಲ್ಲಿ ಏನೇ ಅನ್ಯಾಯ ನಡೆಯುತ್ತಿದ್ದರೂ ಅದನ್ನು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಧ್ವನಿಯತ್ತಬೇಕು ಎಂದರು.
ತಾವರಗೇರಾ ಬುದ್ಧ ವಿಹಾರ ಕೇಂದ್ರದ ಸಂಪನ್ಮೂಲ ವ್ಯಕ್ತಿ ಡಾ. ಯರಿಸ್ವಾಮಿ.ಎಚ್ ಗೋಷ್ಠಿ ನಡೆಸಿಕೊಟ್ಟರು. ತಾಲೂಕು ಮಾನವ ಬಂಧುತ್ವ ವೇದಿಕೆ ಸಂಚಾಲಕ ಬೆಟ್ಟಪ್ಪ ಯತ್ನಟ್ಟಿ, ಕುಂಬಳಾವತಿ ಗ್ರಾಮ ಘಟಕದ ಸಂಚಾಲಕ ಸುರೇಶ ಗಾನದಾಳ ಹಾಗೂ ಗ್ರಾಮಸ್ಥರು ಇದ್ದರು.