ಪ್ರತಿಯೊಬ್ಬರೂ ಬಡವರಿಗೆ ಸಹಕರಿಸುವ ಗುಣ ಬೆಳೆಸಿಕೊಳ್ಳಬೇಕು: ಕಲ್ಪನಾ ಸುಧಾಮ

KannadaprabhaNewsNetwork | Published : Feb 10, 2025 1:47 AM

ಸಾರಾಂಶ

ತರೀಕೆರೆ, ಬಡ ಮತ್ತು ಬುಡಕಟ್ಟು ಕುಟುಂಬಗಳಿಗೆ ಪ್ರತಿಯೊಬ್ಬರೂ ಸಹಕರಿಸುವ ಮತ್ತು ಅಭಿವೃದ್ಧಿ ಪಡಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಸೀನಿಯರ್ ಇಂಟರ್ ನ್ಯಾಷನಲ್ ತರೀಕೆರೆ ಪ್ರಗತಿ ಲೀಜನ್ ಸಂಸ್ಥೆ ಅಧ್ಯಕ್ಷೆ ಕಲ್ಪನಾ ಸುಧಾಮ ಹೇಳಿದ್ದಾರೆ.

- ಬಡ ಬುಡಕಟ್ಟು ಜನಾಂಗ ಕುಟುಂಬದವರಿಗೆ ಅಹಾರದ ಕಿಟ್.ನ್ನು ಕೊಡುವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಬಡ ಮತ್ತು ಬುಡಕಟ್ಟು ಕುಟುಂಬಗಳಿಗೆ ಪ್ರತಿಯೊಬ್ಬರೂ ಸಹಕರಿಸುವ ಮತ್ತು ಅಭಿವೃದ್ಧಿ ಪಡಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಸೀನಿಯರ್ ಇಂಟರ್ ನ್ಯಾಷನಲ್ ತರೀಕೆರೆ ಪ್ರಗತಿ ಲೀಜನ್ ಸಂಸ್ಥೆ ಅಧ್ಯಕ್ಷೆ ಕಲ್ಪನಾ ಸುಧಾಮ ಹೇಳಿದ್ದಾರೆ.

ಸೀನಿಯರ್ ಇಂಟರ್ ನ್ಯಾಷನಲ್ ತರೀಕೆರೆ ಪ್ರಗತಿ ಲೀಜನ್ ಸಂಸ್ಥೆಯಿಂದ ತಾಲೂಕಿನ ಎ.ರಂಗಾಪುರ ಗ್ರಾಮದಲ್ಲಿ ಬಡ ಬುಡಕಟ್ಟು ಜನಾಂಗದವರಿಗೆ ಆಹಾರದ ಕಿಟ್ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯಿಂದ ಬಡ ಕುಟುಂಬಕ್ಕಾಗಿ ಮಾಡುವ ಕೆಲಸಗಳು, ಆರೋಗ್ಯ ತಪಾಸಣಾ, ರಕ್ತದಾನ ಶಿಬಿರಗಳು, ಮಕ್ಕಳ ಆರೋಗ್ಯ ತಪಾಸಣೆ ಮತ್ತು ಅರಿವು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ, ಈ ದಿನ ಎ.ರಂಗಾಪುರ ಗ್ರಾಮದಲ್ಲಿ ಆಹಾರದ ಕಿಟ್‌ ನೀಡುತ್ತಿದ್ದೇವೆ ಇದು ನನ್ನ ಸೌಭಾಗ್ಯ, ಈ ದಿನದ ಒಂದು ವಿಶೇಷ ಕಾರ್ಯಕ್ರಮ. ತರೀಕೆರೆ ಪಕ್ಕದಲ್ಲಿದ್ದರು ಈ ಗ್ರಾಮವನ್ನು ನಾವು ನೋಡಿರಲಿಲ್ಲ. ಈ ಗ್ರಾಮದಲ್ಲಿ ಬಡ ಬುಡಕಟ್ಟು ಜನಾಂಗದ ಕುಟುಂಬಗಳವರು ವಾಸವಿದ್ದಾರೆ. ಇಂಥ ಬಡ ಕುಟುಂಬಗಳ ಜೊತೆ ನನ್ನ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ತುಂಬಾ ಸಂತೋಷದ ವಿಚಾರ ಎಂದು ಹೇಳಿದರು.

ಈ ದಿನ 15 ಬಡ ಕುಟುಂಬಗಳಿಗೆ ನಮ್ಮ ಸಂಸ್ಥೆಯಿಂದ ನನ್ನೆಲ್ಲಾ ಸದಸ್ಯರೊಂದಿಗೆ ಆಹಾರ ಧಾನ್ಯಗಳ ಕಿಟ್ ನ್ನು ವಿತರಣೆ ಮಾಡುವುದು ಉತ್ತಮ ವಿಚಾರ ಇದರಿಂದ ಉತ್ತಮ ಆಹಾರ ಸೇವಿಸಲು ಸಾಧ್ಯವಾಗುತ್ತದೆ. ಮುಂದಿನ ದಿನದಲ್ಲಿ ಇದೇ ಗ್ರಾಮದಲ್ಲಿ ಬಡ ಕುಟುಂಬಗಳ ಜೊತೆ ಆರೋಗ್ಯ, ಕಣ್ಣಿನ ತಪಾಸಣೆ ಶಿಬಿರ ಮತ್ತು ಇತರೆ ಆರೋಗ್ಯಕ್ಕೆ ಸಂಬಂಧಪಟ್ಟಂತ ಶಿಬಿರ ಆಯೋಜಿಸಲು ಇಚ್ಛಿಸುತ್ತೇನೆ. ಮಕ್ಕಳಿಗೂ ಸಹ ಅವರ ಆರೋಗ್ಯದ ಕಡೆ ಗಮನ ಹರಿಸುವಂತಹ ಕೆಲಸ ಈ ಗ್ರಾಮದಲ್ಲಿ ಮಾಡುತ್ತೇನೆ ಎಂದು ತಿಳಿಸಿದರು.

ಸಂಸ್ಥೆ ಕಾರ್ಯದರ್ಶಿ ಆಶಾ ಬೋಸ್ಲೆ ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮ ಬಡ ಕುಟುಂಬಗಳ ಜೊತೆ ಇರು ವುದು ನನ್ನ ಭಾಗ್ಯ ಇಂದು ಸಂಸ್ಥೆಯಿಂದ 15 ಜನಕ್ಕೆ ಆಹಾರ ಧಾನ್ಯಗಳ ಕಿಟ್ಟನ್ನು ವಿತರಿಸುತ್ತಿರುವುದು ನನ್ನ ಜೀವ ಮಾನದ ಭಾಗ್ಯ. ಇದು ನನಗೆ ಬಹಳ ಖುಷಿ ಕೊಟ್ಟಿದೆ ಎಂದರು.

ಸಂಸ್ಥೆ ಖಚಾಂಚಿ ವಿಶಾಲಾಕ್ಷಮ್ಮ ಮಾತನಾಡಿ. ಈ ಗ್ರಾಮಕ್ಕೆ ನಾನು 3ನೇ ಬಾರಿ ಬರುತ್ತಿದ್ದೇನೆ. ಈ ಗ್ರಾಮ ಬಡ ಬುಡಕಟ್ಟು ಕುಟುಂಬಗಳು ನೆಲೆಸಿರುವ ಪ್ರದೇಶ.ಇಲ್ಲಿ ಬಹಳ ಕೆಲಸಗಳು ಆಗಬೇಕಾಗಿದೆ. ಸರ್ಕಾರಿ ಅಧಿಕಾರಿಗಳು ಸಹ ಈ ಗ್ರಾಮದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.ಸಂಸ್ಥೆಯ ಎಲ್ಲಾ ಸದಸ್ಯರು ಸೇರಿ ಈ ಆಹಾರ ಧಾನ್ಯಗಳ ಕಿಟ್ಟನ್ನು ಕೊಡುತ್ತಿದ್ದಾರೆ. ಎಲ್ಲಾ ಕುಟುಂಬಗಳು ಇದರ ಸದುಪ ಯೋಗ ಪಡೆದು, ನೀವು ಮತ್ತು ನಿಮ್ಮ ಮಕ್ಕಳು ಮತ್ತು ಕುಟುಂಬದವರೆಲ್ಲರೂ ಸೇರಿ ಊಟ ಮಾಡಿ ಆರೋಗ್ಯ ಕಾಪಾಡಿ ಕೊಳ್ಳುವುದು ಬಹಳ ಮುಖ್ಯ. ಮುಂದೆಯೂ ಸಹ ನಾವು ಸಂಸ್ಥೆಯಿಂದ ಹಲವಾರು ಕಾರ್ಯಕ್ರಮ ಮಾಡುತ್ತೇವೆ ಆಗ ನಿಮ್ಮ ಗ್ರಾಮದ ಎಲ್ಲರೂ ನಮಗೆ ಸಹಕರಿಸಬೇಕೆಂದು ತಿಳಿಸಿದರು.

ಸದಸ್ಯರಾದ ರಮ್ಯಾ, ಹೇಮಾ, ರಾಜೇಶ್ವರಿ ಮಾತನಾಡಿ ಈ ಆಹಾರ ಧಾನ್ಯಗಳ ಕಿಟ್‌ಗಳ ಮಹತ್ವ ತಿಳಿಸಿದರು.

ಸಂಸ್ಥೆಯಿಂದ 30 ಜನ ಹೆಣ್ಣುಮಕ್ಕಳು, ಕಿಶೋರಿಯರಿಗೆ ಶುಚಿಪ್ಯಾಡ್, 20 ಸಣ್ಣ ಮಕ್ಕಳಿಗೆ ಮಕ್ಕಳ ಆಟಿಕೆ ವಿತರಿಸಲಾಯಿತು. ದಿ ಹಂಗರ್ ಪ್ರಾಜೆಕ್ಟ್ ಸಂಸ್ಥೆ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

9ಕೆಟಿಆರ್.ಕೆ.12ಃ

ತರೀಕೆರೆ ಸಮೀಪದ ಎ.ರಂಗಾಪುರ ಗ್ರಾಮದಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಪ್ರಗತಿ ಲೀಜನ್ ಸಂಸ್ಥೆ ಯಿಂದ ನಡೆದ ಕಾರ್ಯಕ್ರಮವನ್ನು ಸಂಸ್ಥೆ ಅಧ್ಯಕ್ಷೆ ಕಲ್ಪನಾ ಸುಧಾಮ ಉದ್ಘಾಟಿಸಿದರು. ಸಂಸ್ಥೆ ಕಾರ್ಯದರ್ಶಿ

ಆಶಾ ಬೋಸ್ಲೆ, ಖಚಾಂಚಿ ವಿಶಾಲಾಕ್ಷಮ್ಮ, ಸದಸ್ಯರಾದ ರಮ್ಯಾ, ಹೇಮಾ, ರಾಜೇಶ್ವರಿ, ದಿ ಹಂಗರ್ ಪ್ರಾಜೆಕ್ಟ್ ಸಂಸ್ಥೆ ಶ್ರೀನಿವಾಸ್ ಮತ್ತಿತರರು ಇದ್ದರು.

Share this article