ಪ್ರತಿಯೊಬ್ಬರೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು: ವಿಧುಶೇಖರ ಭಾರತೀ ಶ್ರೀ

KannadaprabhaNewsNetwork |  
Published : Apr 04, 2025, 12:45 AM IST
ೇ್ | Kannada Prabha

ಸಾರಾಂಶ

ಶೃಂಗೇರಿ,ಭಗವಂತನಲ್ಲಿ ಶ್ರದ್ಧೆ, ಭಕ್ತಿ ಯಿಂದ ಭಗವಂತನ ಆರಾಧನೆ ಮಾಡಬೇಕು. ಪ್ರತಿಯೊಬ್ಬರೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಅಭಿಪ್ರಾಯಪಟ್ಟರು.

ಶೃಂಗೇರಿಯಲ್ಲಿ ಶ್ರೀ ಭಾರತೀ ತೀರ್ಥರ ವರ್ಧಂತಿ ಮಹೋತ್ಸವದಲ್ಲಿ ಗುರುವಂದನೆ । ಶ್ರೀ ಮಠದಲ್ಲಿ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡಪ್ರಭ ವಾರ್ತೆ, ಶೃಂಗೇರಿ ಭಗವಂತನಲ್ಲಿ ಶ್ರದ್ಧೆ, ಭಕ್ತಿ ಯಿಂದ ಭಗವಂತನ ಆರಾಧನೆ ಮಾಡಬೇಕು. ಪ್ರತಿಯೊಬ್ಬರೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಅಭಿಪ್ರಾಯಪಟ್ಟರು.ಶ್ರೀ ಮಠದ ಗುರುಭವನದಲ್ಲಿ ವಜ್ರಭಾರತೀ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಭಗವದ್ಗೀತೆ ಅತ್ಯಂತ ಉತ್ಕೃಷ್ಟ ಹಾಗೂ ಶ್ರೇಷ್ಠವಾದ ಗ್ರಂಥವಾಗಿದೆ. ಗೀತೆ ಅಧ್ಯಯನ ಇನ್ನಷ್ಟು ಹೆಚ್ಚಬೇಕು. ಪ್ರತಿಯೊಬ್ಬ ಸನಾತನ ಧರ್ಮದ ಅನುಯಾಯಿ ಗೀತೆಯನ್ನು ಪಠಣ ಮಾಡಬೇಕು. ಇದರಿಂದ ಎಲ್ಲರಿಗೂ ವಿಶೇಷ ಪ್ರೇರಣೆ ಉಂಟಾಗುವಂತಾಗಬೇಕು ಎಂದರು. ನಮ್ಮ ಧರ್ಮದ ಅತ್ಯಂತ ಶ್ರೇಷ್ಠ ಗ್ರಂಥ ಭಗವದ್ಗೀತೆ. ಪ್ರಸ್ತನ್ನತ್ರಯಗಳಲ್ಲಿ ಭಗವದ್ಗೀತೆಯೂ ಒಂದು. ಉಪನಿಷತ್ತುಗಳು, ಬ್ರಹ್ಮಸೂತ್ರಗಳು, ಭಗವದ್ಗೀತೆ ಎಲ್ಲವೂ ವಿಚಾರಗಳನ್ನು ತಿಳಿಸುತ್ತದೆ. ಲೌಕಿಕ ಪ್ರಪಂಚದಲ್ಲಿ ನಾವು ಮಾಡುವ ಕೆಲಸಗಳಲ್ಲಿ ಸಂದಿಗ್ದತೆ ಉಂಟಾದರೆ ನಾವು ಭಗವಂತನ ಆರಾಧನೆ ಮಾಡಿದರೆ ನಮಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಗೀತೆಯ ಪಠಣ ಮಾಡಬೇಕು ಎಂದರು. ನಮ್ಮ ಜಗದ್ಗುರುಗಳ ವರ್ಧಂತಿ ಮಹೋತ್ಸವಕ್ಕೆ ವಿವಿಧೆಡೆಗಳಿಂದ ಭಕ್ತ ಮಹಾಶಯರು ಬಂದಿದ್ದಾರೆ. ಇಲ್ಲಿನ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. 75 ದೇವಸ್ಥಾನಗಳಿಂದ ತೀರ್ಥ ಪ್ರಸಾದಗಳಲ್ಲಿ ತಂದಿದ್ದಾರೆ. ಇಲ್ಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಭಕ್ತರಿಗೆ ಒಳ್ಳೆಯದಾಗಲೀ ಎಂದರು.

ವರ್ಧಂತಿ ಅಂಗವಾಗಿ ವೈಭವದ ಮಹೋತ್ಸವ

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ 36 ನೇ ಪೀಠಾಧಿಪತಿ ಶ್ರೀ ಭಾರತೀ ತೀರ್ಥರ 75 ನೇ ವರ್ಧಂತಿ ಅಂಗವಾಗಿ ವೈಭವಯುತವಾಗಿ ನಡೆಯುತ್ತಿರುವ ಮಹೋತ್ಸವದಲ್ಲಿ ಗುರುವಾರ ಶ್ರೀ ಮಠದ ನರಸಿಂಹವನದ ಶ್ರೀ ಗುರುಭವನದಲ್ಲಿ ಗುರುವಂದನಾ ಕಾರ್ಯಕ್ರಮ ಸಂಪನ್ನವಾಯಿತು.

ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಮಹಾಸನ್ನಿಂದಾನ್ ಗಳು ಗುರುಭವನದಲ್ಲಿ ಬೆಳಿಗ್ಗೆಯಿಂದ ಭಕ್ತಾದಿಗಳಿಗೆ ಆಹ್ಮಿಕ ದರ್ಶನ ನೀಡಿದರು. ಭಕ್ತಾದಿಗಳು ಪಲಪುಷ್ಪ ಸಮರ್ಪಿಸಿದರು. ಜಗದ್ಗುರುಗಳು ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ನೆರವೇರಿಸಿದರು. ಶ್ರೀ ಮಠದ ಅಧಿಷ್ಟಾನಮಂದಿರದಲ್ಲಿ ಪೂಜೆ ಸಲ್ಲಿಸಿದರು.

ವಜ್ರಭಾರತೀ ಮಹೋತ್ಸವದ ಅಂಗವಾಗಿ ಶ್ರೀಮಠದ ನರಸಿಂಹವನದ ಭಾರತೀ ತೀರ್ಥ ನಗರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಗುರುವಾರ ಹೋಮದ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪೂರ್ಣಾಹುತಿ ನೆರವೇರಿತು. ಗುರುವಾರ ವಿವಿದೆಡೆಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು.

ಶ್ರೀ ಭಾರತೀ ತೀರ್ಥರ 75 ನೇ ವರ್ಧಂತಿ ಮಹೋತ್ಸವ ಅಂಗವಾಗಿ 75 ದೇವಸ್ಥಾನಗಳಿಂದ ತಂದಿದ್ದ ತೀರ್ಥ, ಪ್ರಸಾದ ಗಳನ್ನು ಸಮರ್ಪಿಸಲಾಯಿತು. ಅಧಿದೇವತೆ ಶ್ರೀ ಶಾರದಾಂಬೆಗೆ ರಾಜರಾಜೇಶ್ವರಿ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಶ್ರೀ ಮಠದ ಆವರಣ, ನರಸಿಂಹವನ, ಶ್ರೀ ಬಾರತೀ ತೀರ್ಥ ನಗರ ಎಲ್ಲೆಡೆ ಭಕ್ತಸಾಗರವೇ ತುಂಬಿತ್ತು.

ಮಾರ್ಚ್ 30 ರಿಂದ ಕಾರ್ಯಕ್ರಮ ಆರಂಭಗೊಂಡಿದ್ದು, ಪ್ರತಿದಿನ ಧಾರ್ಮಿಕ ಕಾರ್ಯಕ್ರಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಶ್ರೀ ಮಠದಿಂದ ನರಸಿಂಹವನದ ಭಾರತೀ ತೀರ್ಥ ನಗರದವರೆಗೂ ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಿ ಅಲಂಕರಿಸಲಾಗಿದೆ. ಶ್ರೀ ಮಠದಲ್ಲಿ ರಾಜಗೋಪುರ ಸೇರಿದಂತೆ ಇಡೀ ಶ್ರೀ ಮಠವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

3 ಶ್ರೀ ಚಿತ್ರ 1-

ಶೃಂಗೇರಿ ಶ್ರೀ ಶಾರದಾ ಪೀಠದ ಹಿರಿಯ ಜಗದ್ಗುರು ಶ್ರೀ ಭಾರತೀ ತೀರ್ಥರು 75 ನೇ ವರ್ಧಂತಿ ಅಂಗವಾಗಿ ಭಕ್ತರಿಗೆ ಆಹ್ನಿಕ ದರ್ಶನ ನೀಡಿದರು.

3 ಶ್ರೀ ಚಿತ್ರ 2-

ಗುರುವಂದನಾ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಆಶೀರ್ವಚನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''