ಹೊಳೆಹೊನ್ನೂರು: ವಿದ್ಯಾರ್ಥಿಗಳು ವ್ಯಾಸಾಂಗ ಮಾಡಿದ ಶಾಲೆಗೆ ಹಾಗೂ ಹೆತ್ತವರಿಗೆ ಕಿರ್ತಿ ತರಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಜಯ್ ಕುಮಾರ್ ಹೇಳಿದರು.
ಪರೀಕ್ಷಾ ತಯಾರಿ ಮೊದಲಿನಿಂದಲೂ ಇರಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ವ್ಯಾಸಂಗ ಮಾಡುವುದು ಶುಭ ಫಲ ನೀಡುತ್ತದೆ. ಮಕ್ಕಳ ಪ್ರಗತಿಯಲ್ಲಿ ಪಾಲಕರ ಶ್ರಮವನ್ನು ಮರೆಯುವಂತಿಲ್ಲ. ಮಕ್ಕಳಿಗೆ ಪಾಲಕರ ಕಷ್ಟಗಳು ಕಾರ್ಪಣ್ಯಗಳು ತಿಳಿಯಬೇಕು. ಶಿಕ್ಷಣದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಹಿಂದೆ ಬೀಳಬಾರದು ಎಂದು ಹೇಳಿದರು.
ತಾಲೂಕಿನಲ್ಲಿ ಸಂಘದ ಸದಸ್ಯರ 350 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಗ್ರಾಮಾಂತರದ 6 ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗಿದೆ. ಗಣಿತ ವಿಜ್ಞಾನ ವಿಷಯಗಳು ಕಷ್ಟವೆಂದು ಭಾವಿಸುವುದು ತಪ್ಪು. ಗುರಿ ಕಡೆ ಸಾಗುವುದನ್ನು ಮರೆಯಬಾರದು. ಉದ್ದಾತರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ಶ್ರಮ ವ್ಯರ್ಥವಾಗಬಾರದು ಎಂದು ಹೇಳಿದರು.ಮುಖ್ಯಶಿಕ್ಷಕ ತಿಪ್ಪೇರುದ್ರಪ್ಪ, ಶಾಲಾಭಿವೃದ್ದಿ ಸಮಿತಿಯ ಎಂ.ಎಸ್ ಶಿವಪ್ಪ, ಒಕ್ಕೂಟಗಳ ಅಧ್ಯಕ್ಷೆ ರತ್ನಮ್ಮ, ಮೇಲ್ವಿಚಾರಕಿ ವಂದನಾ, ಸೇವಾಪ್ರತಿನಿಧಿ ಶಶಿಕುಮಾರ್, ಎಸ್.ಜಿ ಬಸವರಾಜಪ್ಪ, ಮಲ್ಲೇಶಪ್ಪ, ರವಿನಾಯ್ಕ್, ಶೇಖರಪ್ಪ, ಪಿ.ಎಸ್‍ನಾಗರಾಜ್ ಇತರರಿದ್ದರು.