ಪ್ರತಿಯೊಬ್ಬರು ಅರೋಗ್ಯದ ಕಡೆ ಗಮನಹರಿಸಿ: ನಾಗರಾಜು

KannadaprabhaNewsNetwork |  
Published : Dec 11, 2025, 02:15 AM IST
ಪೊಟೊ-9ಕೆಎನ್‌ಎಲ್‌ಎಮ್‌1-ನೆಲಮಂಗಲ ನಗರದ ಸದಾಶಿವನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ,  ರೋಟರಿ ಇನ್ನರ್ ವ್ಹೀಲ್ ಹಾಗೂ ರಾಜಸ್ಥಾನದ ಡಾ.ರಾಮ ಮನೋಹರ ಲೋಹಿಯಾ ಅರೋಗ್ಯ ಜೀವನ ಸಂಸ್ಥಾನ ಸಹಯೋಗದಲ್ಲಿ ಅಯೋಜಿಸಿದ್ದ ಅರೋಗ್ಯ ತಪಾಸಣಾ ಶಿಬಿರವನ್ನುರೋಟರಿ ಅದ್ಯಕ್ಷ ಜಿ.ಆರ್.ನಾಗರಾಜು ಉದ್ಘಾಟಿಸಿದರು, | Kannada Prabha

ಸಾರಾಂಶ

ಬೆನ್ನು ನೋವು, ಭುಜನೋವು , ಮೊಣಕಾಲು ನೋವು, ಮೈಗ್ರೇನ್, ಸರ್ವಿಕಲ್ ಸ್ಪಾಂಡಿಲೋಸಿಸ್, ಮಲ ಬದ್ಧತೆ, ಸಿಯಾಟಿಕಾ, ಸ್ನಾಯುಗಳ ನೋವು ಸೇರಿದಂತೆ ವಿವಿಧ ತಪಾಸಣಾ ಶಿಬಿರ ನಡೆಸಲಾಯಿತು.

ನೆಲಮಂಗಲ: ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಗಳು ಹಲವು ರೋಗಗಳಿಗೆ ಕಾರಣವಾಗುತ್ತಿದ್ದು ಪ್ರತಿಯೊಬ್ಬರು ಅರೋಗ್ಯದ ಕಡೆ ಗಮನ ಹರಿಸಬೇಕು ಎಂದು ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು. ನಗರದ ಸದಾಶಿವನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ, ರೋಟರಿ ಇನ್ನರ್ ವ್ಹೀಲ್ ಹಾಗೂ ರಾಜಸ್ಥಾನದ ಡಾ. ರಾಮ ಮನೋಹರ ಲೋಹಿಯಾ ಅರೋಗ್ಯ ಜೀವನ ಸಂಸ್ಥಾನ ಸಹಯೋಗದಲ್ಲಿ ಅಯೋಜಿಸಿದ್ದ ಅರೋಗ್ಯ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು. ಬೆನ್ನು ನೋವು, ಭುಜನೋವು , ಮೊಣಕಾಲು ನೋವು, ಮೈಗ್ರೇನ್, ಸರ್ವಿಕಲ್ ಸ್ಪಾಂಡಿಲೋಸಿಸ್, ಮಲ ಬದ್ಧತೆ, ಸಿಯಾಟಿಕಾ, ಸ್ನಾಯುಗಳ ನೋವು ಸೇರಿದಂತೆ ವಿವಿಧ ತಪಾಸಣಾ ಶಿಬಿರ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜಸ್ಥಾನದ ಡಾ. ರಾಮ ಮನೋಹರ ಲೋಹಿಯಾ ಅರೋಗ್ಯ ಜೀವನ ಸಂಸ್ಥಾನ ವೈದ್ಯ ಡಾ.ವಿಕ್ರಂ ಸಿಂಗ್, ಡಾ.ಸುಪಿಂದರ್ ಸಿಂಗ್ , ಡಾ.ನವಸೀಪ್‌ಸಿಂಗ್, ಡಾ. ಇಂದರ್ ಪಾಲ್ , ರೋಟರಿ ಸಂಸ್ಥೆ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಗಂಗರಾಜು, ಮಾಜಿ ಅದ್ಯಕ್ಷರಾದ ಎಚ್.ಜಿ.ರಾಜು, ಟಿ.ನಾಗರಾಜು, ಎಂ.ಟಿ. ನವೀನ್‌ಕುಮಾರ್, ಸಿ.ಜಿ.ಮಂಜುನಾಥ್, ಸುರೇಂದ್ರನಾಥ್, ನಿರ್ದೇಶಕ ಶಿವಶಂಕರ್ ಪ್ರಸಾದ್,ಡೊಡ್ಡನರಸಿಂಹಯ್ಯ, ಸಿದ್ದಪ್ಪ, ಕುಮಾರ್, ಗಂಗಾಧರಯ್ಯ, ಶಿವರಾಮಯ್ಯ, ರುದ್ರೇಗೌಡ, ಸೋಮಶೇಖರ್, ಇನ್ನರ್ ವ್ಹೀಲ್ ಅದ್ಯಕ್ಷೆ ಪೂರ್ಣಿಮಾಸುಗ್ಗರಾಜು, ಕಾರ್ಯದರ್ಶಿ ಮಂಜುಳಾ ಸಿದ್ದರಾಜು, ಎಡಿಟರ್ ವನಿತಾ ಧರಣಿ, ಐಎಸ್‌ಓ ಮುತ್ತುಲಕ್ಷ್ಮೀ, ನಿರ್ದೇಶಕಿ ನಳಿನಾ ಮತ್ತಿತರರು ಉಪಸ್ಥಿತರಿದರು‌.

ಪೊಟೊ-9ಕೆಎನ್‌ಎಲ್‌ಎಮ್‌1- ನೆಲಮಂಗಲ ನಗರದ ಸದಾಶಿವನಗರದ ರೋಟರಿ ಭವನದಲ್ಲಿ ಅಯೋಜಿಸಿದ್ದ ಅರೋಗ್ಯ ತಪಾಸಣಾ ಶಿಬಿರವನ್ನು ರೋಟರಿ ಅದ್ಯಕ್ಷ ಜಿ.ಆರ್. ನಾಗರಾಜು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ